ಸಲ್ಮಾನ್ ಖಾನ್ ಗೂ ರಜನಿಕಾಂತ್ ಗೂ ಇರುವ ವ್ಯತ್ಯಾಸ ಇಷ್ಟೆ.!
ಎಲ್ಲಿ ನೋಡಿದ್ರೂ, ಯಾರ ಬಾಯಲ್ಲಿ ಕೇಳಿದ್ರೂ ಈಗ ಒಂದೇ ಮಾತು. ಅದೇ 'ಕಬಾಲಿ'.
'ಕಬಾಲಿ ಡಾ...', 'ನೆರುಪ್ಪುಡಾ...' ಅಂತ ಎಲ್ಲರೂ ಜಪ-ತಪ ಮಾಡುತ್ತಿರುವಾಗಲೇ, ಸಾಮಾಜಿಕ ಜಾಲತಾಣಗಳಲ್ಲಿ 'ಕಬಾಲಿ' ಜೋಕ್ಸ್ ಜನಪ್ರಿಯವಾಗುತ್ತಿದೆ.
ಹೇಳಿ ಕೇಳಿ ಸೂಪರ್ ಸ್ಟಾರ್ ರಜನಿಕಾಂತ್ ಜೋಕ್ ಗಳು ಸಿಕ್ಕಾಪಟ್ಟೆ ಫೇಮಸ್. ಅದೇ ಬ್ಯಾಕ್ ಡ್ರಾಪ್ ನಲ್ಲಿ ಈಗ ಕಬಾಲಿ ಮೀಮ್ಸ್, ಟ್ರೋಲ್ಸ್ ಶುರುವಾಗಿದೆ. ['ಕಬಾಲಿ' ಕ್ರೇಜ್: ಸೂಪರ್ ಸುಪ್ರೀಂ ಐಡಿಯಾ ಮಾಡಿದ ಲಹರಿ ವೇಲು]
ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ವೈರಲ್ ಆಗಿರುವ 'ಕಬಾಲಿ' ಜೋಕ್ಸ್, ಮೀಮ್ಸ್, ಟ್ರೋಲ್ಸ್ ಗಳ ಕಲೆಕ್ಷನ್ ನಿಮ್ಮ ಮುಂದೆ ಇಡ್ತಿದ್ದೀವಿ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ.....

ಅಲ್ಲಿ 'ಕಬಾಲಿ' ಇಲ್ಲಿ 'ಜಾರ್ಜ್ ಬಲಿ'.!
ಆಂಧ್ರ ಪ್ರದೇಶ - 'ಬಾಹುಬಲಿ'
ತಮಿಳು ನಾಡು - 'ಕಬಾಲಿ'
ಕರ್ನಾಟಕ - 'ಜಾರ್ಜ್ ಬಲಿ'

ಸಲ್ಮಾನ್ ಗೂ ರಜನಿಕಾಂತ್ ಗೂ ವ್ಯತ್ಯಾಸ ಇಷ್ಟೆ.!
ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಲಿಡೇ ಸೀಸನ್ ಇರುವ 'ಈದ್' ಸಂದರ್ಭದಲ್ಲಿ ತಮ್ಮ ಚಿತ್ರವನ್ನ ರಿಲೀಸ್ ಮಾಡ್ತಾರೆ. ಆದ್ರೆ, ರಜನಿಕಾಂತ್ ಸಿನಿಮಾ ಬಿಡುಗಡೆ ಆಗುತ್ತೆ ಅಂದ್ರೆ ಎಲ್ಲರೂ ರಜಾ ಕೊಡ್ತಾರೆ.! [ಕಬಾಲಿ ಆನ್ಲೈನ್ ನಲ್ಲಿ ಲೀಕಾದರೂ ನೋ ಪ್ರಾಬ್ಲಂ: ರಜನಿ ಫ್ಯಾನ್ಸ್]

ಕಾರ್ ನಂಬರ್ ಹೇಳಿ ನೋಡೋಣ.?
'ಕಬಾಲಿ' ಕ್ರೇಜ್ ಗೆ ಇದು ಒಂದು ಸಾಕ್ಷಿ. ಅಂದ್ಹಾಗೆ, ಈ ಕಾರ್ ನಂಬರ್ ಗುರುತಿಸಿ ನೋಡೋಣ.... [ರಜನಿಗೆ SMS ಕಳುಹಿಸಲು ಏರ್ ಟೆಲ್ ನಿಂದ ವಿಶೇಷ ಕೂಪನ್]

'ಕಬಾಲಿ' ಟಿಕೆಟ್ಸ್ ಸಿಕ್ಕರೆ....
'ಕಬಾಲಿ' ಚಿತ್ರದ ಫಸ್ಟ್ ಡೇ ಫಸ್ಟ್ ಶೋ ಟಿಕೆಟ್ಸ್ ಸಿಕ್ಕರೆ ಸೆಲೆಬ್ರೇಷನ್ ಹೀಗೆ ಇರುತ್ತೆ...
ಚಿತ್ರಕೃಪೆ - Troll Kollywood

ಕಲಾ ವಿದ್ಯಾರ್ಥಿಗಳ ಕಲೆ.!
'ಕಬಾಲಿ ಡಾ..' ಡೈಲಾಗ್ ನ ಕಲಾ ವಿದ್ಯಾರ್ಥಿಗಳು ರೀಮಿಕ್ಸ್ ಮಾಡಿದ್ರೆ ಹೀಗೆ ಆಗೋದು.! [ಕಬಾಲಿ ದಾಖಲೆ: ರಿಲೀಸ್ ಗೂ ಮುನ್ನ 200 ಕೋಟಿ ಕಲೆಕ್ಷನ್.?]

ರಜಾ ಸಿಗುತ್ತೆ, ಟಿಕೆಟ್ ಸಿಗ್ಬೇಕಲ್ಲಾ.?
'ಕಬಾಲಿ' ಬಿಡುಗಡೆ ಆಗುತ್ತಿರುವ ಜುಲೈ 22 ರಂದು ರಜಾ ಸಿಗುತ್ತೆ, ಆದ್ರೆ ಟಿಕೆಟ್ ಸಿಗ್ಬೇಕಲ್ವಾ.?
ಚಿತ್ರಕೃಪೆ - Tamil Cinema Memes

'ಕಬಾಲಿ' ಕೋಡ್.!
ಊಟ ಮಾಡಲು ಆರ್ಡರ್ ಮಾಡಬೇಕಾದರೂ, 'ಕಬಾಲಿ' ಕೋಡ್ ಬಳಸುವ ಮಟ್ಟಕ್ಕೆ ಬಂದಿದೆ.


Click it and Unblock the Notifications











