For Quick Alerts
  ALLOW NOTIFICATIONS  
  For Daily Alerts

  ಚುನಾವಣೆಯಲ್ಲಿ ಗೆದ್ದ ಮತ್ತು ಬಿದ್ದ ಸೆಲೆಬ್ರಿಟಿಗಳು

  |

  ಹದಿನಾರನೇ ಲೋಕಸಭಾ ಚುನಾವಣೆಗೆ ಬಣ್ಣದ ಲೋಕದ ಹಲವಾರು ಮಂದಿ ವಿವಿಧ ಪಕ್ಷಗಳಿಂದ ಸ್ಪರ್ಧಿಸಿದ್ದರು. ಚಿತ್ರರಂಗದ ಖ್ಯಾತನಾಮರಿಗೆ ಚುನಾವಣಾ ಫಲಿತಾಂಶ ಸಿಹಿ ಮತ್ತು ಕಹಿ ಎರಡನ್ನೂ ನೀಡಿದೆ.

  ವಿವಿಧ ಪಕ್ಷಗಳಿಂದ ಸ್ಪರ್ಧಿಸಿದ ಸೆಲೆಬ್ರಿಟಿಗಳಲ್ಲಿ ಕೆಲವರು ಸಫಲತೆಯ ದಡ ಸೇರಿದ್ದರೆ, ಮತ್ತಷ್ಟು ಸೆಲೆಬ್ರಿಟಿಗಳು ಮೋದಿ ಅಲೆಗೆ ಕೊಚ್ಚಿ ಹೋದವರೂ ಇದ್ದಾರೆ.

  ಚಿತ್ರರಂಗದವರು ಪ್ರಚಾರಕ್ಕೆ ಹೋದಾಗ ಅವರ ಸುತ್ತಮುತ್ತ ಜನರೇ ದಂಡೇ ಸೇರಿರುತ್ತೆ. ಆದರೆ ಅದು ಎಷ್ಟರ ಮಟ್ಟಿಗೆ ಮತವಾಗಿ ಪರಿಣಮಿಸುತ್ತದೆ ಎನ್ನುವುದು ಫಲಿತಾಂಶ ಬಂದಾಗಲೇ ತಿಳಿಯುವುದು. (ಅತಿಹೆಚ್ಚು , ಕಡಿಮೆ ಅಂತರದಿಂದ ಗೆದ್ದವರು)

  ಶಿವಮೊಗ್ಗದಲ್ಲಿ ಗೀತಾ ಶಿವರಾಜ್ ಕುಮಾರ್ ಪ್ರಚಾರಕ್ಕೆ ಹೋದಲೆಲ್ಲಾ ಜನಪ್ರವಾಹವೇ ಹರಿದು ಬರುತ್ತಿತ್ತು. ಆದರೆ ಗೀತಾ ಚುನಾವಣೆಯಲ್ಲಿ ಗೆಲ್ಲಲಾಗದೇ ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಹಾಗೇ, ಸೆಲೆಬ್ರಿಟಿಗಳು ಪ್ರಮುಖ ರಾಜಕೀಯ ಮುಖಂಡರನ್ನು ಸೋಲಿಸಿದ ಉದಾಹರಣೆ ಕೂಡಾ ಇಲ್ಲದಿಲ್ಲ.

  16ನೇ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಮತ್ತು ಸೋತ ಪ್ರಮುಖ ಸೆಲೆಬ್ರಿಟಿಗಳು ಯಾರು? ಸ್ಲೈಡಿನಲ್ಲಿ...

  ಕಿರಣ್ ಖೇರ್

  ಕಿರಣ್ ಖೇರ್

  ಖ್ಯಾತ ಬಾಲಿವುಡ್ ನಟ ಅನುಪಮ್ ಖೇರ್ ಪತ್ನಿ ಮತ್ತು ನಟಿ ಕಿರಣ್ ಖೇರ್ ಚಂಡೀಗಢ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಜಯಗಳಿಸಿದ್ದಾರೆ. ಕಿರಣ್, ಕಾಂಗ್ರೆಸ್ಸಿನ ಪವನ್ ಕುಮಾರ್ ಬನ್ಸಾಲ್ ಅವರನ್ನು 69,642 ಮತಗಳ ಅಂತರದಿಂದ ಸೋಲಿಸಿದರು.

  ರಮ್ಯಾ

  ರಮ್ಯಾ

  ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಮ್ಯಾ, ಜೆಡಿಎಸ್ ಅಭ್ಯರ್ಥಿ ಪುಟ್ಟರಾಜು ವಿರುದ್ದ 5,518 ಮತಗಳ ಅಂತರದಿಂದ ಸೋಲು ಅನುಭವಿಸಿದರು.

  ಶತ್ರುಘ್ನ ಸಿನ್ಹಾ

  ಶತ್ರುಘ್ನ ಸಿನ್ಹಾ

  ಬಾಲಿವುಡ್ ನಟ ಬಿಜೆಪಿ ಅಭ್ಯರ್ಥಿ ಶತ್ರುಘ್ನ ಸಿನ್ಹಾ ಬಿಹಾರದ ಪಾಟ್ನಾ ಸಾಹೇಬ್ ಕ್ಷೇತ್ರದಿಂದ ಗೆದ್ದಿದ್ದಾರೆ. ಇವರು ತನ್ನ ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ಕುನಾಲ್ ಸಿಂಗ್ ಅವರನ್ನು 265,805 ಮತಗಳ ಅಂತರದಿಂದ ಸೋಲಿಸಿದ್ದಾರೆ.

  ವಿನೋದ್ ಖನ್ನಾ

  ವಿನೋದ್ ಖನ್ನಾ

  ಪಂಜಾಬಿನ ಗುರುದಾಸಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿಯ ವಿನೋದ್ ಖನ್ನಾ ಜಯಗಳಿಸಿದ್ದಾರೆ. ಇವರು ತನ್ನ ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ಪ್ರತಾಪ್ ಸಿಂಗ್ ಬಜ್ವಾ ಅವರನ್ನು 136,065 ಮತಗಳ ಅಂತರದಿಂದ ಸೋಲಿಸಿ ಆಯ್ಕೆಯಾಗಿದ್ದಾರೆ.

  ರಾಜ್ ಬಬ್ಬರ್

  ರಾಜ್ ಬಬ್ಬರ್

  ಮೋದಿ ಅಲೆಗೆ ತತ್ತರಿಸಿದವರಲ್ಲಿ ರಾಜ್ ಬಬ್ಬರ್ ಕೂಡಾ ಒಬ್ಬರು. ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಾಜ್ ಬಬ್ಬರ್, ಬಿಜೆಪಿಯ ವಿಜಯ್ ಕುಮಾರ್ ಸಿಂಗ್ ವಿರುದ್ದ 567,260 ಮತಗಳ ಭಾರೀ ಅಂತರದಿಂದ ಸೋಲು ಅನುಭವಿಸಿದ್ದಾರೆ.

  ನಗ್ಮಾ

  ನಗ್ಮಾ

  ಮೋದಿ ಅಲೆಯ ಪ್ರಭಾವದ ಉತ್ತರಪ್ರದೇಶದ ಮತ್ತೊಂದು ಕ್ಷೇತ್ರ ಮೀರಠ್. ಈ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಟಿಕೆಟಿನಿಂದ ಸ್ಪರ್ಧಿಸಿದ್ದ ನಗ್ಮಾ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳ ಬೇಕಾಯಿತು. ಇಲ್ಲಿ ಬಿಜೆಪಿಯ ರಾಜೇಂದ್ರ ಅಗರ್ವಾಲ್ ಜಯಗಳಿಸಿದ್ದಾರೆ.

  ಹೇಮಾಮಾಲಿನಿ

  ಹೇಮಾಮಾಲಿನಿ

  ಡ್ರೀಮ್ ಗರ್ಲ್ ಹೇಮಾಮಾಲಿನಿ ಮಥುರಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಜಯಗಳಿಸಿದ್ದಾರೆ. ಇವರು RLDಯ ಜಯಂತ್ ಚೌಧುರಿ ಅವರನ್ನು 330,743 ಮತಗಳ ಅಂತರದಿಂದ ಸೋಲಿಸಿದ್ದಾರೆ.

  ಪರೇಶ್ ರಾವಲ್

  ಪರೇಶ್ ರಾವಲ್

  ಬಿಜೆಪಿ ಅಭ್ಯರ್ಥಿ ಪರೇಶ್ ರಾವಲ್ ಅಹಮದಾಬಾದ್ ಪೂರ್ವ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಇವರು ತನ್ನ ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ಪಟೇಲ್ ಹಿಮ್ಮತ್ ಸಿಂಗ್ ಅವರನ್ನು 326,633 ಮತಗಳ ಅಂತರದಿಂದ ಸೋಲಿಸಿದ್ದಾರೆ.

  ಜಯಪ್ರದಾ

  ಜಯಪ್ರದಾ

  ಉತ್ತರಪ್ರದೇಶದ ಬಿಜ್ನೋರ್ ಕ್ಷೇತ್ರದಿಂದ ಸ್ಪರ್ಧಿಸಿದ್ದ RLD ಅಭ್ಯರ್ಥಿ ಜಯಪ್ರದಾ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳ ಬೇಕಾಯಿತು. ಇಲ್ಲಿ ಬಿಜೆಪಿಯ ಕುನ್ವರ್ ಭರತೇಂದ್ರ ಜಯಗಳಿಸಿದ್ದಾರೆ.

  ಜಾವೇದ್ ಜಾಫ್ರಿ

  ಜಾವೇದ್ ಜಾಫ್ರಿ

  ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಕಣದಲ್ಲಿದ್ದ ಜಾವೇದ್ ಜಾಫ್ರಿ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ವಿರುದ್ದ ಲಕ್ನೋದಲ್ಲಿ ಠೇವಣಿ ಕಳೆದುಕೊಂಡಿದ್ದಾರೆ.

  ಮೂನ್ ಮೂನ್ ಸೇನ್

  ಮೂನ್ ಮೂನ್ ಸೇನ್

  ಟಿಎಂಸಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮೂನ್ ಮೂನ್ ಸೇನ್ ಪಶ್ಚಿಮ ಬಂಗಾಳದ ಬಂಕುರಾ ಕ್ಷೇತ್ರದಲ್ಲಿ ಸಿಪಿಐಎಂ ಅಭ್ಯರ್ಥಿ ಆಚಾರ್ಯ ಬಸುದೇಬ್ ವಿರುದ್ದ 98,506 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

  ರಾಖಿ ಸಾವಂತ್

  ರಾಖಿ ಸಾವಂತ್

  ಮುಂಬೈ ಆಗ್ನೇಯ ಕ್ಷೇತ್ರದಿಂದ ರಾಷ್ಟೀಯ ಆಮ್ ಪಾರ್ಟಿಯಿಂದ ಸ್ಪರ್ಧಿಸಿದ್ದ ರಾಖಿ ಸಾವಂತ್ ಠೇವಣಿ ಕಳೆದುಕೊಂಡಿದ್ದಾರೆ. ಅಲ್ಲಿ ಶಿವಸೇನೆಯ ಗಜಾನನ್ ಕೀರ್ತಿಕರ್ ಜಯಗಳಿಸಿದ್ದಾರೆ.

  ಬಪ್ಪಿ ಲಹರಿ

  ಬಪ್ಪಿ ಲಹರಿ

  ಬಿಜೆಪಿ ಅಭ್ಯರ್ಥಿಯಾಗಿ ಪಶ್ಚಿಮ ಬಂಗಾಳದ ಸೇರಂಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಪ್ಪಿಲಹರಿ ಟಿಎಂಸಿ ಅಭ್ಯರ್ಥಿ ವಿರುದ್ದ ಸೋತಿದ್ದಾರೆ. ಇಲ್ಲಿ ಬಪ್ಪಿಲಹರಿ ಮೂರನೇ ಸ್ಥಾನದಲ್ಲಿದ್ದಾರೆ.

  English summary
  Mixed luck for Film Industry personalities in Lok Sabha election 2014.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X