»   » ಕನ್ನಡದಲ್ಲಿ 'ಚಾರ್ಲಿ' ಆದ ದಿಗಂತ್: 'ನ್ಯೂಜಿಲ್ಯಾಂಡ್'ನಿಂದ ಬಂದ್ರು ನಾಯಕಿ!

ಕನ್ನಡದಲ್ಲಿ 'ಚಾರ್ಲಿ' ಆದ ದಿಗಂತ್: 'ನ್ಯೂಜಿಲ್ಯಾಂಡ್'ನಿಂದ ಬಂದ್ರು ನಾಯಕಿ!

Posted By:
Subscribe to Filmibeat Kannada

ಮಲಯಾಳಂ ಸೂಪರ್ ಹಿಟ್ ಚಿತ್ರದ ಕನ್ನಡಕ್ಕೆ ರೀಮೇಕ್ ನಲ್ಲಿ ದೂದ್ ಪೇಡ ದಿಗಂತ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯನ್ನ ಕೇಳೇ ಇರ್ತಿರಾ. ಇದೀಗ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದೆ.

ಇನ್ನೂ ದಿಗಂತ್ ಗೆ ಈ ಚಿತ್ರದಲ್ಲಿ ನಾಯಕಿ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೂ ಬ್ರೇಕ್ ಬಿದ್ದಿದೆ. ದಿಗಂತ್ ಜೊತೆ ನಟಿಸುವುದಕ್ಕಾಗಿ 'ನ್ಯೂಜಿಲ್ಯಾಂಡ್'ನಿಂದ ಹೀರೋಯಿನ್ ಬರ್ತಿದ್ದಾರಂತೆ.

ಅಷ್ಟಕ್ಕೂ, ಆ ಚಿತ್ರ ಯಾವುದು? ಕನ್ನಡದಲ್ಲಿ ಟೈಟಲ್ ಏನು? ನಾಯಕಿ ಯಾರು ಎಂಬುದನ್ನ ಮುಂದೆ ಓದಿ.....

'ಚಾರ್ಲಿ' ರೀಮೇಕ್ ನಲ್ಲಿ ದಿಗಂತ್

2015ರ ಮಲಯಾಳಂ ಬ್ಲ್ಯಾಕ್ ಬಸ್ಟರ್ ಹಿಟ್ ಸಿನಿಮಾ 'ಚಾರ್ಲಿ' ಕನ್ನಡದಲ್ಲಿ ರೀಮೇಕ್ ಅಗುತ್ತಿದೆ. ದುಲ್ಕರ್ ಸಲ್ಮಾನ್ ಈ ಚಿತ್ರದ ನಾಯಕನಾಗಿದ್ದು, ಕನ್ನಡದಲ್ಲಿ ದಿಗಂತ್ ಈ ಪಾತ್ರವನ್ನ ನಿರ್ವಹಿಸಲಿದ್ದಾರೆ.

ಟೈಟಲ್ ಏನು ಗೊತ್ತಾ?

ಅಂದ್ಹಾಗೆ, 'ಚಾರ್ಲಿ'ಯ ಕನ್ನಡ ಅವತರಣಿಕೆಗೆ ಕನ್ನಡದಲ್ಲಿ 'ಉತ್ಸವ್' ಎಂದು ಟೈಟಲ್ ಇಡಲಾಗಿದೆಯಂತೆ.

ನ್ಯೂಜಿಲ್ಯಾಂಡ್ ನಾಯಕಿ

ಇನ್ನೂ ದಿಗಂತ್ ಗೆ ನಾಯಕಿಯಾಗಿ ನ್ಯೂಜಿಲ್ಯಾಂಡ್ ನ ಆಂಕ್ಲೆಂಡ್ ಹುಡುಗಿ ಲತಾ ಹೆಗಡೆ ಜೊತೆಯಾಗಲಿದ್ದಾರಂತೆ.

ಲತಾ ಹೆಗಡೆ ಯಾರು?

ಲತಾ ಹೆಗೆಡೆ 'ನ್ಯೂಜಿಲ್ಯಾಂಡ್'ನ ಮಾಡೆಲ್. ಮೂಲತಃ ಕರ್ನಾಟಕದ ಹೊನ್ನಾವರದ ಹುಡುಗಿ, 6 ವರ್ಷವಿದ್ದಾಗ 'ನ್ಯೂಜಿಲ್ಯಾಂಡ್'ನ ಆಂಕ್ಲೆಂಡ್ ಕುಟುಂಬ ಸಮೇತ ಹೋಗಿ ನೆಲೆಸಿದ್ದಾರೆ. ಈಗ ಸಿನಿಮಾಗಳಲ್ಲಿ ಅಭಿನಯಿಸುವ ಆಸಕ್ತಿಯಿಂದ ಮತ್ತೆ ಭಾರತಕ್ಕೆ ಬಂದಿದ್ದಾರೆ.

ಕನ್ನಡ-ತೆಲುಗಿನಲ್ಲಿ ನಟನೆ!

ಈಗಾಗಲೇ ತೆಲುಗಿನ 'ತುಂಟರಿ' ಎಂಬ ಚಿತ್ರದಲ್ಲಿ ಲತಾ ನಾಯಕಿಯಾಗಿ ನಟಿಸಿದ್ದಾರೆ. ಇನ್ನೂ ಕನ್ನಡದ ಖ್ಯಾತ ನಿರ್ದೇಶಕ ಮಹೇಶ್ ಬಾಬು ಮತ್ತು 'ಆ ದಿನಗಳು' ಖ್ಯಾತಿಯ ಚೇತನ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಚಿತ್ರದಲ್ಲೂ ಲತಾ ಹೆಗಡೆ ನಾಯಕಿಯಾಗಿದ್ದಾರೆ.

'ಉತ್ಸವ್' ಸಿನಿಮಾ ಬಗ್ಗೆ!

ಹರ್ಷ ಎಂಟರ್ ಟೈನ್ ಮೆಂಟ್ ಅಡಿಯಲ್ಲಿ 'ಉತ್ಸವ್' ಚಿತ್ರ ತಯಾರಾಗುತ್ತಿದ್ದು, ಈ ಚಿತ್ರಕ್ಕೆ ಜಿ ಎನ್ ರುದ್ರೇಶ್ ಅವರು ಆಕ್ಷನ್ ಕಟ್ ಹೇಳಲಿದ್ದಾರಂತೆ. ಮಂಗಳೂರು, ಬೆಂಗಳೂರು, ಚಿಕ್ಕಮಗಳೂರಿನಲ್ಲಿ ಶೂಟಿಂಗ್ ಮಾಡುವ ಪ್ಲಾನ್ ಮಾಡಿರುವ ಚಿತ್ರತಂಡ ಆದಷ್ಟೂ ಬೇಗ ಸಿನಿಮಾ ಶುರು ಮಾಡಲಿದ್ದಾರೆ.

English summary
The official remake of Malayalam film Charlie has been titled as Utsav. Actors Diganth and Latha Hegde are doning lead role of kannada version.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada