»   » ಗೂಗಲ್ ನಲ್ಲಿ ವರ್ಷವಿಡೀ 'ಸೌಂಡ್' ಮಾಡಿದ ನಟ ಯಾರು.?

ಗೂಗಲ್ ನಲ್ಲಿ ವರ್ಷವಿಡೀ 'ಸೌಂಡ್' ಮಾಡಿದ ನಟ ಯಾರು.?

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಈ ವರ್ಷ ದೊಡ್ಡ ದೊಡ್ಡ ಸ್ಟಾರ್ ನಟರ ದೊಡ್ಡ ಸಿನಿಮಾಗಳು ಬಿಡುಗಡೆಯಾಗಿವೆ. ಅವುಗಳಲ್ಲಿ ಕೆಲವು ಗೆಲುವಿನ ನಗೆ ಬೀರಿದ್ದರೇ, ಮತ್ತೆ ಕೆಲವು ಮಕಾಡೆ ಮಲಗಿವೆ. ಬೆಳ್ಳಿತೆರೆಯಲ್ಲಿ ಮಾತ್ರವಲ್ಲದೇ, ಅತ್ತ ಕಿರುತೆರೆಯಲ್ಲಿ ಈ ಸ್ಟಾರ್ ನಟರು ಮಿಂಚಿದ್ದಾರೆ.

ದರ್ಶನ್, ಸುದೀಪ್, ಪುನೀತ್, ಯಶ್ ಅಂತಹ ನಟರು ಏನೇ ಮಾಡಿದರು ವರ್ಷವಿಡೀ ಸುದ್ದಿಯಲ್ಲಿರುತ್ತಾರೆ. ಕೇವಲ ಸಿನಿಮಾ ವಿಚಾರಕ್ಕೆ ಮಾತ್ರವಲ್ಲದೇ, ಖಾಸಗಿ ವೀಚಾರಗಳಲ್ಲೂ ಈ ಸ್ಯಾಂಡಲ್ ವುಡ್ ಸ್ಟಾರ್ ಗಳು ಸುದ್ದಿ ಮಾಡಿದ್ದಾರೆ.[2016ರ ಅತ್ಯುತ್ತಮ ಚಿತ್ರ-ನಟ-ನಟಿ-ನಿರ್ದೇಶಕರನ್ನ ಆಯ್ಕೆ ಮಾಡಿ!]

ಹಾಗಾದ್ರೆ, ಗೂಗಲ್ ನಲ್ಲಿ ಈ ವರ್ಷ ಯಾವ ನಟನನ್ನ ಅತಿ ಹೆಚ್ಚು ಮಂದಿ ಹುಡುಕಿದ್ದಾರೆ ಎಂದು ಗೊತ್ತಾ? ಯೋಚನೆ ಮಾಡ್ಬೇಡಿ. 2016 ರಲ್ಲಿ ಯಾವ ನಟನನ್ನ ಅತಿ ಹೆಚ್ಚು ಜನರು ಗೂಗಲ್ ನಲ್ಲಿ ಹುಡುಕಿದ್ದಾರೆ ಎಂದು 'cineloka.co.in' ಪಟ್ಟಿ ಮಾಡಿದೆ. ಇಲ್ಲಿದೆ ನೋಡಿ ಈ ವರ್ಷದಲ್ಲಿ ಸೌಂಡ್ ಮಾಡಿದ ಗೂಗಲ್ ಸ್ಟಾರ್ ನಟರ ಪಟ್ಟಿ....

ಗೂಗಲ್ ಹುಡುಕಾಟದಲ್ಲಿ ದರ್ಶನ್ ಟಾಪ್!

ಬಾಕ್ಸ್ ಆಫೀಸ್ ಸುಲ್ತಾನ್ ನಟ ದರ್ಶನ್ ಕನ್ನಡದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನ ಹೊಂದಿರುವ ನಟ. ದರ್ಶನ್ ಸಿನಿಮಾಗಳ ತಿಳಿದುಕೊಳ್ಳೊಕೆ ಅವರ ಫ್ಯಾನ್ಸ್ ಕಾಯ್ತಿರ್ತಾರೆ. ಹೀಗೆ, ಗೂಗಲ್ ನಲ್ಲಿ ಈ ವರ್ಷ ಅತಿ ಹೆಚ್ಚು ಜನರು ಹುಡುಕಿರುವ ಕನ್ನಡದ ನಟ ಅಂದ್ರೆ ದರ್ಶನ್.[2016ರ ಅತ್ಯುತ್ತಮ ಕನ್ನಡ ನಟ ಯಾರು? ನಿಮ್ಮ ಆಯ್ಕೆ?]

2016 ರಲ್ಲಿ ಚಾಲೆಂಜಿಂಗ್ ಸ್ಟಾರ್!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ವಿರಾಟ್' ಹಾಗೂ 'ಜಗ್ಗುದಾದ' ಚಿತ್ರಗಳು ಈ ವರ್ಷ ಬಿಡುಗಡೆಯಾಗಿವೆ. ದರ್ಶನ್ ಅಭಿನಯಿಸಲಿರುವ 'ಚಕ್ರವರ್ತಿ' ಸಿನಿಮಾ ಸೆಟ್ಟೇರಿದ್ದು ಈ ವರ್ಷದ ಮತ್ತೊಂದು ವಿಶೇಷ. ಇನ್ನೂ ರಾಜಕಾಲುವೆ ಜಾಗದಲ್ಲಿ ದರ್ಶನ್ ಅವರ ಮನೆಯಿದೆ ಎಂಬ ವಿಚಾರದಲ್ಲಿ ದರ್ಶನ್ ಬಾರಿ ಸುದ್ದಿಯಾದರು. ಹೀಗಾಗಿ ಗೂಗಲ್ ನಲ್ಲಿ ದರ್ಶನ್ ಅವರ ಬಗ್ಗೆ ತಿಳಿದುಕೊಳ್ಳಲು ಅತಿ ಜನ ಆಸಕ್ತಿ ತೋರಿದ್ದಾರೆ.[2016 ರಲ್ಲಿ ಭರವಸೆ ಮೂಡಿಸಿದ ಯುವನಟ ಯಾರು? ]

ಯಶ್

ರಾಕಿಂಗ್ ಸ್ಟಾರ್ ಯಶ್ 2016 ರಲ್ಲಿ ಸಿನಿಮಾ ವಿಚಾರಕ್ಕಿಂತ ಖಾಸಗಿ ವಿಚಾರದಲ್ಲಿ ಹೆಚ್ಚು ಸುದ್ದಿಯಾಗಿದ್ದರು. ರೈತರ ಪರ ಕಾಳಜಿ ತೋರಿದ ಯಶ್, ಕನ್ನಡ ಸುದ್ದಿ ಮಾಧ್ಯಮಗಳ ಜೊತೆ ಮಾಡಿಕೊಂಡ ಸಮರ ಈ ವರ್ಷದ ಹೈಲೇಟ್. ಇನ್ನೂ ಈ ವರ್ಷದಲ್ಲಿ ತಮ್ಮ ಬ್ಯಾಚುಲರ್ ಲೈಫ್ ಗೆ ಗುಡ್ ಬೈ ಹೇಳಿದ ಯಶ್, ರಾಧಿಕಾ ಪಂಡಿತ್ ಅವರೊಂದಿಗೆ ಸಪ್ತಪದಿ ತುಳಿದರು. ಈ ಎಲ್ಲ ಬೆಳವಣಿಗೆಯ ಮಧ್ಯೆ ಯಶ್ ಅಭಿನಯದ 'ಸಂತು ಸ್ಟ್ರೈಟ್ ಫಾರ್ವಾರ್ಡ್' ಸಿನಿಮಾ ಬಿಡುಗಡೆಯಾಗಿತ್ತು. ಹೀಗಾಗಿ, ಯಶ್ ಗೆ ಗೂಗಲ್ ಸರ್ಚಿಂಗ್ ನಲ್ಲಿ ಎರಡನೇ ಸ್ಥಾನ.[2016: ಈ ವರ್ಷದ ಅತ್ಯುತ್ತಮ ನಾಯಕಿ ಯಾರು? ]

ಸುದೀಪ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ 'ಕೋಟಿಗೊಬ್ಬ-2', ಹಾಗೂ 'ಮುಕುಂದ ಮುರಾರಿ' ಚಿತ್ರಗಳು ಬಿಡುಗಡೆಯಾಗಿದೆ. ಪ್ರತಿವರ್ಷದಂತೆ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಸುದೀಪ್ ಮಿಂಚುತಿದ್ದಾರೆ. ಇನ್ನೂ ಸುದೀಪ್ ಅಭಿನಯಿಸುತ್ತಿರುವ 'ಹೆಬ್ಬುಲಿ' ಚಿತ್ರ ಸೆಟ್ಟೇರಿದ್ದು, ಕಿಚ್ಚನ ಆರ್ಮಿ ಗೆಟಪ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಹೀಗಾಗಿ ನಿರೀಕ್ಷೆಯಂತೆ ಸುದೀಪ್ ಅವರನ್ನ ಗೂಗಲ್ ನಲ್ಲಿ ಹೆಚ್ಚು ಜನರು ಹುಡುಕಿದ್ದು, ಮೂರನೇ ಸ್ಥಾನದಲ್ಲಿದ್ದಾರೆ.

ಪುನೀತ್ ರಾಜ್ ಕುಮಾರ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈ ವರ್ಷ ಅತಿ ಹೆಚ್ಚು ಸುದ್ದಿ ಮಾಡಿದ್ದು 'ದೊಡ್ಮನೆ ಹುಡ್ಗ' ಚಿತ್ರದಲ್ಲಿ. ಪುನೀತ್ ಅಭಿನಯದ ಮತ್ತೊಂದು ಚಿತ್ರ 'ಚಕ್ರವ್ಯೂಹ' ಈ ವರ್ಷವೇ ಬಿಡುಗಡೆಯಾಗಿತ್ತು. ಇನ್ನೂ ಅಪ್ಪು ಈ ವರ್ಷ 'ರಾಜಕುಮಾರ' ಎಂಬ ಹೊಸ ಚಿತ್ರಕ್ಕೂ ಚಾಲನೆ ಕೊಟ್ಟಿದ್ದು, ಫಸ್ಟ್ ಲುಕ್ ಬಿಡುಗಡೆಯಾಗಿತ್ತು. ಹೀಗಾಗಿ, ಪವರ್ ಸ್ಟಾರ್ ಫ್ಯಾನ್ಸ್ ಪುನೀತ್ ಸಿನಿಮಾಗಳಿಗಾಗಿ ಹೆಚ್ಚು ಗೂಗಲ್ ಸರ್ಚ್ ಮಾಡಿದ್ದಾರೆ.

ಉಪೇಂದ್ರ

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಕಲ್ಪನಾ-2' ಹಾಗೂ 'ಮುಕುಂದ ಮುರಾರಿ' ಚಿತ್ರಗಳು ಈ ವರ್ಷ ತೆರೆಕಂಡಿದೆ. 'ಮತ್ತೆ ಹುಟ್ಟಿ ಬಾ ಉಪೇಂದ್ರ', 'ಡಾ.ಮೋದಿ', 'ಕನ್ನೇಶ್ವರ' ಸೇರಿದಂತೆ ಹಲವು ಚಿತ್ರಗಳು 2016ರಲ್ಲಿ ಸೆಟ್ಟೇರಿದೆ. ಇವುಗಳು ಮಧ್ಯೆ ಉಪ್ಪಿ ರಾಜಕೀಯಕ್ಕೆ ಬರ್ತಾರೆ ಎಂಬ ವಿಷಯಗಳು ಈ ವರ್ಷದಲ್ಲಿ ಜೋರಾಗಿ ಚರ್ಚೆಯಾಗಿವೆ. ಹೀಗಾಗಿ 2016 ರಲ್ಲಿ ಉಪ್ಪಿಯ ಮೇಲೆ ಗೂಗಲ್ ಅಭಿಮಾನಿಗಳ ಕಣ್ಣು ನಿರಂತರವಾಗಿತ್ತು.

ಚಿತ್ರಕೃಪೆ-'cineloka.co.in'

English summary
sandalwood has had yet another memorable year, full of hits and misses, highs and lows, controversies and landmarks and much, much more. So before we reach the New Year, here’s a list of the top most searched sandalwood actors on Google this year. Read on to know who fans searched for the most in 2016!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada