»   » ಅಮ್ಮನ ಪ್ರೀತಿಯನ್ನ ಸರಳ ರೀತಿಯಲ್ಲೇ ಜಗತ್ತಿಗೆ ತಿಳಿಸಿದ ಹಿತಾ

ಅಮ್ಮನ ಪ್ರೀತಿಯನ್ನ ಸರಳ ರೀತಿಯಲ್ಲೇ ಜಗತ್ತಿಗೆ ತಿಳಿಸಿದ ಹಿತಾ

Posted By:
Subscribe to Filmibeat Kannada

ಕನ್ನಡ ಸಿನಿಮಾರಂಗದಲ್ಲಿ ತಾಯಂದಿರ ದಿನಾಚರಣೆ ಜೋರಾಗಿದೆ. ಒಬ್ಬೊಬ್ಬ ಕಲಾವಿದರು ಒಂದೊಂದು ರೀತಿಯಲ್ಲಿ ತಮ್ಮ ತಾಯಿಯ ಮೇಲಿನ ಪ್ರೀತಿಯನ್ನು ವ್ಯಕ್ತ ಪಡಿಸುತ್ತಿದ್ದಾರೆ. ಕೆಲವರು ಫೋಟೋವನ್ನ ಫೇಸ್ ಬುಕ್, ಇನ್‌ಸ್ಟಾಗ್ರಾಂ, ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿ ತಮ್ಮ ಪ್ರೀತಿಯನ್ನ ವ್ಯಕ್ತ ಪಡಿಸಿದ್ರೆ, ಮತ್ತೆ ಕೆಲವರು ದಿನವಿಡಿ ಅವರ ಜೊತೆಯಲ್ಲೇ ಇದ್ದು ಮದರ್ಸ್ ಡೇ ಸೆಲಬ್ರೆಟ್ ಮಾಡುತ್ತಿದ್ದಾರೆ.

ಇನ್ನು ಸ್ಪೆಷಲ್ ಆಗಿ ಆಲೋಚನೆ ಮಾಡುವವರು ಹೊಸ ರೀತಿಯಲ್ಲಿ ಏನನ್ನಾದರೂ ಟ್ರೈ ಮಾಡಲು ಮುಂದಾಗುತ್ತಾರೆ. ಅಂತದೊಂದು ಪ್ರಯತ್ನ ಕನ್ನಡ ಸಿನಿಮಾರಂಗದಲ್ಲಿ ನಡೆದಿದೆ. ನಟಿ ಹಿತಾ ಚಂದ್ರಶೇಖರ್ ಅಮ್ಮಂದಿರ ದಿನಕ್ಕಾಗಿ ಕಿರುಚಿತ್ರದಲ್ಲಿ ಅಭಿನಯ ಮಾಡಿದ್ದಾರೆ.

ಒಂಬತ್ತು ತಿಂಗಳ ಸಂಭ್ರಮದಲ್ಲಿ ಶ್ವೇತಾ ಶ್ರೀವಾತ್ಸವ್

ಕೇವಲ ಆರು ನಿಮಿಷ ಇರುವ ಈ ಕಿರು ಚಿತ್ರ ತುಂಬಾ ಪ್ರಭಾವ ಬೀರುತ್ತಿದೆ. ಯಾರ ಬಳಿಯೂ ಹೇಳಿಕೊಳ್ಳಲಾಗದಂತ ವಿಚಾರವನ್ನ ತುಂಬಾ ಸರಳವಾಗಿ ಮನ ಮುಟ್ಟುವಂತೆ ಹೇಳುವ ಪ್ರಯತ್ನವನ್ನ ಅದ್ಬುತವಾಗಿ ಮಾಡಿದ್ದಾರೆ ನಿರ್ದೇಶಕರು. ಹಾಗಾದರೆ ತಾಯಂದಿರ ದಿನಾಚರಣೆಗಾಗಿ ಮಾಡಿರುವ ಆ ವಿಡಿಯೋ ಹೇಗಿದೆ? ಅದರ ಸ್ಪೆಷಾಲಿಟಿಗಳೇನು? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ

ವಿಶೇಷ ಎನ್ನಿಸುತ್ತಿದೆ ಮೆಲನ್ಕೋಲಿ (Melancholy)

ಮೆಲನ್ಕೋಲಿ (Melancholy) ತಾಯಂದಿರ ದಿನಾಚರಣೆಗಾಗಿ ಬಿಡುಗಡೆ ಆಗಿರುವ ಕಿರುಚಿತ್ರ. ಚಂದನವನದ ನಟಿ ಹಿತಾ ಚಂದ್ರಶೇಖರ್ ಹಾಗೂ ಅಪೂರ್ವ ಭಾರದ್ವಜ್ ಮುಖ್ಯಭೂಮಿಕೆಯಲ್ಲಿರುವ ಶಾರ್ಟ್ ಫಿಲ್ಮಂ. ತಾಯಂದಿರ ದಿನಾಚರಣೆಗೆ ವಿಶೇಷವಾಗಿರಲಿ ಎನ್ನುವ ಉದ್ದೇಶದಿಂದ ಕಿರುಚಿತ್ರವನ್ನ ನಿರ್ದೇಶನ ಮಾಡಿದ್ದಾರೆ ಅರುಣ್ ಮಂಡಲ.

ದೊಡ್ಡ ವಿಚಾರ ಸರಳ ನಿರೂಪಣೆ

ಸಲಿಂಗಕಾಮವನ್ನು ಸಮಾಜ ಹಾಗೂ ಜನರು ಇನ್ನು ಕೂಡ ಒಪ್ಪಿಕೊಳ್ಳಲು ತಯಾರಿಲ್ಲ. ಅಂತವರನ್ನ ಕಂಡರೆ ಸಾಕು ದೂರವಿಡುವ ಪ್ರಯತ್ನ ಮಾಡುತ್ತಾರೆ. ಅಂತಹ ಗಂಭೀರವಾದ ವಿಚಾರವನ್ನು ಸರಳವಾದ ರೀತಿಯಲ್ಲಿ ಮೆಲನ್ಕೋಲಿ (Melancholy) ಕಿರುಚಿತ್ರದಲ್ಲಿ ಹೇಳಲಾಗಿದೆ.

ಅದ್ಬುತ ನಟಿಯರ ಅಭಿನಯ

ಹಿತಾ ಚಂದ್ರಶೇಖರ್ ಹಾಗೂ ಅಪೂರ್ವ ಭಾರದ್ವಜ್, ಮೆಲನ್ಕೋಲಿ (Melancholy) ಕಿರುಚಿತ್ರದಲ್ಲಿ ಅಭಿನಯಿಸಿದ್ದು ಕೆಲವೇ ಕೆಲವು ನಿಮಿಷಗಳು ಇರುವ ಸೀನ್ ಗಳಲ್ಲಿ ಪ್ರೇಕ್ಷಕರನ್ನ ಮೋಡಿ ಮಾಡುತ್ತಾರೆ. ಇನ್ನು ವರ್ಜಿನಿಯಾ ರೊದ್ರಿಗಸ್ ತಾಯಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ತೆರೆ ಮೇಲೆ ಕಲಾವಿದರನ್ನ ಸುಂದರವಾಗಿ ಕಾಣುವಂತೆ ಸೆರೆಹಿಡಿದಿದ್ದಾರೆ ಕ್ಯಾಮೆರಾ ಮ್ಯಾನ್ ರಾಕೇಶ್ ಬಿ ರಾಜ್

ಉತ್ತಮ ತಂತ್ರಜ್ಞರ ಕೈಚಳಕ

ಮೆಲನ್ಕೋಲಿ (Melancholy) ಕಿರುಚಿತ್ರದಲ್ಲಿ ಉತ್ತಮ ಸಂದೇಶದ ಜೊತೆಯಲ್ಲಿ ಅದ್ಬುತ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಸಿನಿಮಾಗೆ ಸ್ಟುಡಿಯೊಸ್ ಅಡಿಯಲ್ಲಿ ನಿರ್ಮಾಣ ಆಗಿದ್ದು ಅರುಣ್ ಮಂಡಲ ಚಿತ್ರಕಥೆ ಮತ್ತು ನಿರ್ದೇಶನ ಮಾಡಿದ್ದಾರೆ. ಗಗನ್ ಬಡೇರಿಯಾ ಸಂಗೀತ ನಿರ್ದೇಶನ ಕಿರುಚಿತ್ರಕ್ಕಿದೆ.

English summary
Melancholy, is about. This film, which is a little under six minutes in duration, stars Hitha Chandrashekhar, Apoorva Bharadwaj and Virginia in lead roles.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X