»   » 'ಜಾಗ್ವಾರ್' ತಂಡದಿಂದ ಯುಗಾದಿಗೆ ಸ್ಪೆಷಲ್ ಗಿಫ್ಟ್

'ಜಾಗ್ವಾರ್' ತಂಡದಿಂದ ಯುಗಾದಿಗೆ ಸ್ಪೆಷಲ್ ಗಿಫ್ಟ್

Posted By:
Subscribe to Filmibeat Kannada

ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಚೊಚ್ಚಲ ಚಿತ್ರ 'ಜಾಗ್ವಾರ್' ಚಿತ್ರತಂಡ ಯುಗಾದಿ ಹಬ್ಬಕ್ಕೆ ಅಭಿಮಾನಿಗಳಿಗೆ ಉಡುಗೊರೆಯನ್ನು ನೀಡಲಿದೆ.

ಹೌದು ಯುಗಾದಿ ಹಬ್ಬದಂದು ನಿಖಿಲ್ ಕುಮಾರ್ ಅಭಿನಯದ 'ಜಾಗ್ವಾರ್' ಚಿತ್ರದ ಮೋಶನ್ ಪೋಸ್ಟರ್ ಬಿಡುಗಡೆ ಆಗಲಿದೆ. ವಿಶೇಷವಾಗಿ ಚಿತ್ರದಲ್ಲಿ ನಿಖಿಲ್ ಕುಮಾರ್ ಅವರು ಯಾವ ಛಾಯೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋದು ಈ ಮೋಶನ್ ಪೋಸ್ಟರ್ ನಲ್ಲಿ ಗೋಚರಿಸಲಿದೆಯಂತೆ.[ಎಕ್ಸ್ ಕ್ಲೂಸಿವ್ ಚಿತ್ರಗಳು ; ನಿಖಿಲ್ ಕುಮಾರಸ್ವಾಮಿ ಯಾರಿಗೂ ಕಮ್ಮಿ ಇಲ್ಲ!]


Motion Poster of Nikhil Kumar's 'Jaguar' to be released for Ugadi

'ಶೀಘ್ರದಲ್ಲೇ ಫೈಟಿಂಗ್ ಚಿತ್ರೀಕರಣಕ್ಕೆ ಆರಂಭವಾಗಲಿದ್ದು, ಅದಕ್ಕಾಗಿ 'ಜಾಗ್ವಾರ್' ಲುಕ್ ಹೊಂದಬೇಕಾಗುತ್ತದೆ. ಇತ್ತೀಚಿನ ವೇಗದ ತಂತ್ರಜ್ಞಾನದಲ್ಲಿ ನನ್ನ ಹೊಸ ಲುಕ್ ಅನ್ನು ಯಾರಾದರೂ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟರೆ ಕೆಲಸ ಕೆಡುತ್ತದೆ. ಅದಕ್ಕೆ ನಾವೇ ಅಧಿಕೃತವಾಗಿ ಈ ನೋಟವನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ ಎನ್ನುತ್ತಾರೆ ನಟ ನಿಖಿಲ್ ಕುಮಾರ್.[ಆಗಸ್ಟ್ ನಲ್ಲಿ 'ಜಾಗ್ವಾರ್' ಅಬ್ಬರ ಶುರುವಾಗುತ್ತೆ ಕಣ್ರೀ]


ಇನ್ನು ತಮ್ಮ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಡದ ನಟ ನಿಖಿಲ್ ಕುಮಾರ್ ಅವರು 'ನಾನು ಚಿತ್ರದಲ್ಲಿ ಎರಡು ಶೇಡ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ, ಒಂದು ಶೇಡ್ ನಲ್ಲಿ ಮೆಡಿಕಲ್ ಸ್ಟೂಡೆಂಟ್ ಆಗಿದ್ದರೆ, ಇನ್ನೊಂದು ಶೇಡ್ ನಲ್ಲಿ ಯಾರೂ ಊಹಿಸಿರದ ಹಾಗೂ ಗುರುತಿಸಲು ಅಸಾಧ್ಯವಾಗುವ ಲುಕ್ ನಲ್ಲಿರುತ್ತೇನೆ. ಆದರೆ ಅವನು ಸೂಪರ್ ಹೀರೋ ಅಲ್ಲ, ನೈಜತೆಗೆ ತುಂಬಾ ಹತ್ತಿರವಾದವನು' ಎಂದು ನುಡಿಯುತ್ತಾರೆ ನಿಖಿಲ್ ಕುಮಾರ್.['ಜಾಗ್ವಾರ್' ಚಿತ್ರಕ್ಕೆ ಬ್ರಹ್ಮಾನಂದಂ ಕಾಮಿಡಿ ಕಿಕ್!]


ಈ ಚಿತ್ರದ ಮೂಲಕ ನನ್ನ ತಾಯಿಯ ಆಸೆಯನ್ನು ಪೂರೈಸುತ್ತಿರುವುದಾಗಿ ಹೇಳುವ ನಿಖಿಲ್ ಕುಮಾರ್ 'ನಾನು ಡಾಕ್ಟರ್ ಅಥವಾ ಇಂಜಿನಿಯರ್ ಆಗಬೇಕೆಂಬುದು ನನ್ನ ತಾಯಿಯ ಆಸೆಯಾಗಿತ್ತು. ಇದೀಗ ಅಂತಹ ಪಾತ್ರಗಳನ್ನು ಸಿನಿಮಾದಲ್ಲಿ ಮಾಡಿ ನನ್ನ ತಾಯಿಯ ಆಸೆ ಪೂರೈಸುತ್ತಿದ್ದೇನೆ' ಅಂತ ನಗುತ್ತಾರೆ ನಿಖಿಲ್ ಕುಮಾರ್.


ಟಾಲಿವುಡ್ ನ ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ 'ಜಾಗ್ವಾರ್' ಚಿತ್ರದ ಕಥೆ ರಚಿಸಿದ್ದು, ರಾಜಮೌಳಿ ಶಿಷ್ಯ ಮಹದೇವ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚೆನ್ನಾಂಬಿಕ ಫಿಲ್ಮ್ಸ್ ಬ್ಯಾನರ್ ನಡಿಯಲ್ಲಿ ಶ್ರೀಮತಿ ಅನಿತಾ ಕುಮಾರಸ್ವಾಮಿ ಚಿತ್ರ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ನಿಖಿಲ್ ಅವರ ತಂದೆ-ತಾಯಿ ಪಾತ್ರದಲ್ಲಿ ಶರತ್ ಕುಮಾರ್ ಮತ್ತು ಮೀನಾ ಅವರು ಮಿಂಚಲಿದ್ದಾರೆ.[ನಿಖಿಲ್ 'ಜಾಗ್ವಾರ್'ಗೆ ನಾಯಕಿ ಯಾರು ಗೊತ್ತಾಯ್ತಾ?]


ನಿಖಿಲ್ ಕುಮಾರ್ ಅವರ ಸ್ಟೈಲಿಷ್ ಲುಕ್ ನೋಡಲು ಸ್ಲೈಡ್ಸ್ ಕ್ಲಿಕ್ಕಿಸಿ...


-
-
-
-
-
-
-
-
-
-
-
-
-
-
-
-
English summary
The makers of Nikhil Kumar starrer Kannada Movie 'Jaguar' have decided to release the motion poster of their movie on Ugadi as the debutant actor starts with his next schedule from April 11.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada