»   » ಬಿಡುಗಡೆಗೂ ಮುನ್ನ 10ಕೋಟಿ ಬಾಚಿದ ವರದನಾಯಕ

ಬಿಡುಗಡೆಗೂ ಮುನ್ನ 10ಕೋಟಿ ಬಾಚಿದ ವರದನಾಯಕ

Posted By:
Subscribe to Filmibeat Kannada
 Varadanayaka movie earend ten crore before release
ಸ್ಯಾಂಡಲ್ ವುಡ್ ಗರಿಗೆದರುತ್ತಿದೆ. ಗಾಂಧಿನಗರದಲ್ಲಿ ಈಗೇನಿದ್ದರೂ ಕೋಟಿಯದ್ದೇ ಮಾತು. ಕಳೆದ ವಾರವಷ್ಟೇ ತೆರೆಕಂಡ ದರ್ಶನ್ ಅಭಿನಯದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬಹುಕೋಟಿ ವೆಚ್ಚದ ಸಿನಿಮಾ ಇದಕ್ಕೆ ಕೊಡಬಹುದಾದ ಲೇಟೆಸ್ಟ್ ಉದಾಹರಣೆ.

ಅದೇ ರೀತಿ ಸಂಗೊಳ್ಳಿ ರಾಯಣ್ಣ ಸಿನಿಮಾ ರಿಲೀಸ್ ಆದ ಮೇಲೂ ಕೋಟಿ ಕೋಟಿ ಕಮಾಯ್ ಮಾಡುತ್ತಿರುವುದನ್ನೂ ಅಲ್ಲಗಳೆಯುವಂತಿಲ್ಲ. ಕನ್ನಡ ಸಿನಿಮಾವನ್ನು ಅದ್ದೂರಿ ತಾರಾಗಣದಲ್ಲಿ ತೆಗೆದರೆ ಕೋಟಿ ಲೆಕ್ಕದಲ್ಲಿ ದುಡ್ಡು ಮಾಡಬಹುದು ಎಂಬುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಇನ್ನೊಂದು ಬೇಕಿಲ್ಲ.

ಪರಿಸ್ಥಿತಿ ಹೀಗಿರುವಾಗ ಕನ್ನಡದ ಮಾರುಕಟ್ಟೆಯನ್ನು ಮತ್ತಷ್ಟು ಹಿಗ್ಗಿಸಲು ಸುದೀಪ್-ಚಿರಂಜೀವಿ ಸರ್ಜಾ ಅಭಿನಯದ ವರದನಾಯಕ ಕೂಡ ಸಜ್ಜಾದಂತಿದೆ.

ಈಗಷ್ಟೇ ಆಡಿಯೋ ರಿಲೀಸ್ ಮಾಡಿರುವ ಚಿತ್ರತಂಡ ಮುಂದಿನ ತಿಂಗಳ ಮೊದಲ ವಾರದಲ್ಲಿ ವರದನಾಯಕ ಚಿತ್ರವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ. ನಿರ್ಮಾಪಕ ಶಂಕರೇ ಗೌಡ ಸಿನಿಮಾ ರಿಲೀಸು ಆಗುವ ಮುನ್ನವೇ ಸೇಫ್ ಆಗಿರೋದು ವಿಶೇಷ.

ಈಗಾಗಲೇ ಬಿಕೆಟಿ (ಬೆಂಗಳೂರು, ಕೋಲಾರ, ತುಮಕೂರು) ಏರಿಯಾವನ್ನು 3.5ಕೋಟಿ, ಮೈಸೂರು 1.5ಕೋಟಿ, ಹುಬ್ಬಳ್ಳಿ 1.5ಕೋಟಿ, ಸಣ್ಣ ಪುಟ್ಟ ಏರಿಯಾಗಳಿಂದ ಸುಮಾರು 2 ಕೋಟಿಗೂ ಹೆಚ್ಚು ಮೊತ್ತಕ್ಕೆ ಚಿತ್ರದ ರೈಟ್ಸ್ ಅನ್ನು ಸೇಲ್ ಮಾಡಿದ್ದಾರೆ.

ಇನ್ನು ಸ್ಯಾಟಿಲೈಟ್ ಹಕ್ಕನ್ನು ಸುವರ್ಣ ವಾಹಿನಿ 2.25 ಕೋಟಿ ಮೊತ್ತಕ್ಕೆ ಖರೀದಿಸಿದೆ. ಇದಷ್ಟೇ ಅಲ್ಲದೇ ಇನ್ನೂ ಮೂರು ಪ್ರಮುಖ ಏರಿಯಾಗಳನ್ನು ಸೇಲ್ ಮಾಡದೇ ತನ್ನಲ್ಲೇ ಉಳಿಸಿಕೊಂಡಿದ್ದಾರೆ ನಿರ್ಮಾಪಕ ಶಂಕರೇ ಗೌಡ.

ಸುಮಾರು ಎಂಟು ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಿರುವ ವರದನಾಯಕ ಚಿತ್ರ ನಿರ್ಮಾಪಕ ಶಂಕರೇ ಗೌಡರಿಗೆ ಇನ್ನೊಂದು 'ಕೆಂಪೇಗೌಡ' ಆಗುವ ಎಲ್ಲಾ ಲಕ್ಷಣಗಳು ತೋರಿಬರುತ್ತಿದೆ.

ಈ ಚಿತ್ರದ ಫೋಟೋ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ಕಿಸಿ

English summary
Sudeep, Chiranjeevi Sarja starrer Varadanayaka movie earned Ten Crore before release.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada