»   » ದಕ್ಷಿಣ ಭಾರತದಲ್ಲೂ ವಿಕಿ ಡೋನರ್ ವೀರ್ಯದಾನ

ದಕ್ಷಿಣ ಭಾರತದಲ್ಲೂ ವಿಕಿ ಡೋನರ್ ವೀರ್ಯದಾನ

Posted By:
Subscribe to Filmibeat Kannada
ಬಾಲಿವುಡ್‌ನಲ್ಲಿ ವೀರ್ಯದಾನಕ್ಕೆ ಸಂಬಂಧಿಸಿದ ಕಥಾಹಂದರವುಳ್ಳ 'ವಿಕಿ ಡೋನರ್' ಚಿತ್ರವನ್ನು ಮಾಡಿ ಜಾನ್ ಅಬ್ರಹಾಂ ಗೆದ್ದಿದ್ದಾರೆ. ಈಗ ಇದೇ ಕತೆ ದಕ್ಷಿಣ ಭಾರತದಲ್ಲಿ ರೀಮೇಕ್ ಆಗುತ್ತಿದೆ. ಚಿತ್ರಕ್ಕೆ ನಾಯಕ ನಟನಾಗಿ ತೆಲುಗು, ತಮಿಳು ಚಿತ್ರಗಳ ಯಂಗ್ ಹೀರೋ ಸಿದ್ಧಾರ್ಥ್‌ರನ್ನು ಕಣಕ್ಕಿಳಿಸುವ ಸಿದ್ಧತೆಗಳು ನಡೆಯುತ್ತಿವೆ.

ತೆಲುಗು, ತಮಿಳಿನಲ್ಲಿ ಈ ಚಿತ್ರ ಸೆಟ್ಟೇರಲಿದೆ. ತೆಲುಗು ನಿರ್ದೇಶಕ ಮಧುರಾ ಶ್ರೀಧರ್ ಎಂಬುವವರು ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಈಗಾಗಲೆ ಹಲವು ಶೀರ್ಷಿಕೆಗಳನ್ನು ಇದಕ್ಕಾಗಿ ನೋಂದಾಯಿಸಿರುವುದಾಗಿ ಚಿತ್ರದ ನಿರ್ಮಾಪಕರು ಶಶಿಕಾಂತ್ ತಿಳಿಸಿದ್ದಾರೆ.

ಈಗಾಗಲೆ ಸಿದ್ಧಾರ್ಥ್ ಜೊತೆ ಮಾತುಕತೆ ನಡೆದಿದೆ. ಇನ್ನೂ ಅವರ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಸಿಗುತ್ತದೆ ಎಂಬ ಭರವಸೆ ಇದೆ ಎಂದಿದ್ದಾರೆ ನಿರ್ಮಾಪಕರು. 'ವಿಕಿ ಡೋನರ್' ಬಿಡುಗಡೆಯಾದ ದಿನವೇ ಚಿತ್ರವನ್ನು ವೀಕ್ಷಿಸಿದೆ. ಕಥಾವಸ್ತು ಭಿನ್ನವಾಗಿದೆ. ಕೂಡಲೆ ರೀಮೇಕ್ ರೈಟ್ಸ್ ಬಗ್ಗೆ ಮಾತನಾಡಿದೆ. ತೆಲುಗು, ತಮಿಳಿನಲ್ಲಿ ಏಕಕಾಲಕ್ಕೆ ಈ ಚಿತ್ರದನ್ನು ನಿರ್ಮಿಸುತ್ತಿದ್ದೇವೆ ಎಂದಿದ್ದಾರೆ. (ಏಜೆನ್ಸೀಸ್)

English summary
Bollywood movie Vicky Donor to remade in Tamil and Telugu. Actor turned-producer Siddharth, along with producer Shashikanth, has bought the rights to remake the film in Telugu and Tamil.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada