For Quick Alerts
  ALLOW NOTIFICATIONS  
  For Daily Alerts

  ಈ ವಾರದಿಂದ ಚಿತ್ರಮಂದಿರಲ್ಲಿ ಮತ್ತೆ ಬಿಗ್ ಸ್ಟಾರ್ಸ್ ಅಬ್ಬರ

  |

  ಚಿತ್ರಮಂದಿರಗಳು ಪುನರಾರಂಭ ಆಗಿದ್ದರೂ ಹೊಸ ಚಿತ್ರಗಳು ಥಿಯೇಟರ್‌ಗೆ ಬರಲು ಹಿಂಜರಿಯುತ್ತಿದೆ. ಪ್ರೇಕ್ಷಕರ ಕೊರತೆ ಎದುರಾಗಬಹುದು ಎಂಬ ಚಿಂತೆಗೆ ಬಿದ್ದಿದೆ. ಹಾಗಾಗಿ, ಹಳೆ ಚಿತ್ರಗಳನ್ನು ಮತ್ತೊಮ್ಮೆ ಚಿತ್ರಮಂದಿರಕ್ಕೆ ತೆಗೆದುಕೊಂಡು ಬಂದು ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಸಾಗಿದೆ.

  ಈ ವಾರ ದೊಡ್ಡ ಸಿನಿಮಾಗಳು ರಿ ರಿಲೀಸ್ ಆಗುತ್ತಿವೆ. ದರ್ಶನ್, ಸುದೀಪ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಹಾಗೂ ಪ್ರಜ್ವಲ್ ದೇವರಾಜ್ ನಟನೆಯ ಚಿತ್ರಗಳ ಮರು ಬಿಡುಗಡೆಯಾಗುತ್ತಿವೆ. ಒಂದು ವೇಳೆ ಈ ಚಿತ್ರಗಳನ್ನು ಮೊದಲ ತೆರೆಕಂಡಾಗ ಮಿಸ್ ಮಾಡಿಕೊಂಡಿದ್ದರೆ ಮತ್ತೊಮ್ಮೆ ಬಿಗ್ ಸ್ಕ್ರೀನ್‌ನಲ್ಲಿ ನೋಡುವ ಅವಕಾಶ ಸಿಕ್ಕಿದೆ. ಈ ವಾರ ಯಾವ ಚಿತ್ರಗಳು ರಿಲೀಸ್? ಮುಂದೆ ಓದಿ...

  ಕೆಜಿಎಫ್ ಮತ್ತೆ ರಿಲೀಸ್

  ಕೆಜಿಎಫ್ ಮತ್ತೆ ರಿಲೀಸ್

  ಇಂದಿನಿಂದ ಬೆಂಗಳೂರಿನಲ್ಲಿ ಕೆಜಿಎಫ್ ಚಾಪ್ಟರ್ 1 ರಿ-ರಿಲೀಸ್ ಆಗಿದೆ. ಹಲಸೂರ್‌ನ ಐನಾಕ್ಸ್, ಸಿಗ್ಮಾ ಮಾಲ್‌ನ ಫನ್ ಸಿನಿಮಾ, ಮಾಗಡಿ ರಸ್ತೆಯ ಜಿಟಿ ಮಾಲ್, ಬನ್ನೇರುಘಟ್ಟ ರಸ್ತೆಯ ವೇಗಾ ಸಿಟಿ, ಡಾ ರಾಜ್ ಕುಮಾರ್ ರಸ್ತೆಯ ಒರೆಯಾನ್ ಮಾಲ್, ಮೀನಾಕ್ಷಿ ಮಾಲ್, ಬೆಳ್ಳಂಡೂರಿನ ಸೆಂಟ್ರಲ್ ಮಾಲ್ ಸೇರಿದಂತೆ ಹಲವು ಸ್ಕ್ರೀನ್‌ಗಳಲ್ಲಿ ಕೆಜಿಎಫ್ ಮತ್ತೆ ಪ್ರದರ್ಶನ ಕಾಣುತ್ತಿದೆ.

  ಅಕ್ಟೋಬರ್ 23ರಿಂದ ಮತ್ತೆ ಚಿತ್ರಮಂದಿರಲ್ಲಿ 'ಟಗರು' ಅಬ್ಬರಅಕ್ಟೋಬರ್ 23ರಿಂದ ಮತ್ತೆ ಚಿತ್ರಮಂದಿರಲ್ಲಿ 'ಟಗರು' ಅಬ್ಬರ

  ಕುರುಕ್ಷೇತ್ರ ದರ್ಶನ

  ಕುರುಕ್ಷೇತ್ರ ದರ್ಶನ

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಬಹುದೊಡ್ಡ ತಾರಬಳಗ ನಟಿಸಿರುವ ಪೌರಾಣಿಕ ಸಿನಿಮಾ ಕುರುಕ್ಷೇತ್ರ ಇಂದಿನಿಂದ ಮತ್ತೆ ಪ್ರದರ್ಶನ ಆರಂಭಿಸಿದೆ. ಸಿರ್ಸಿ ಸರ್ಕಲ್‌ನ ಗೋಪಾಲನ್ ಮಾಲ್, ಮೈಸೂರು ರಸ್ತೆಯ ಗೋಪಾಲನ್ ಮಾಲ್, ಬಿನ್ನಿಪೇಟೆಯ ಸಿನಿಪೋಲಿಸ್ ಮಾಲ್‌ಗಳಲ್ಲಿ ಕುರುಕ್ಷೇತ್ರ ಶೋ ಇದೆ.

  ಕೋಟಿಗೊಬ್ಬ 2

  ಕೋಟಿಗೊಬ್ಬ 2

  ಕೋಟಿಗೊಬ್ಬ-3 ಸಿನಿಮಾಗಾಗಿ ಕಾಯುತ್ತಿರುವ ಪ್ರೇಕ್ಷಕರು ಕೋಟಿಗೊಬ್ಬ-2 ಚಿತ್ರವನ್ನು ಮತ್ತೊಮ್ಮೆ ನೋಡುವ ಅವಕಾಶ ಸಿರ್ಸಿ ಸರ್ಕಲ್‌ನ ಗೋಪಾಲನ್ ಮಾಲ್, ಮಾಗಡಿ ರಸ್ತೆಯ ಜಿಟಿ ಮಾಲ್, ಬನ್ನೇರುಘಟ್ಟ ರಸ್ತೆಯ ವೇಗಾ ಸಿಟಿ, ರಾಜ್ ಕುಮಾರ್ ರಸ್ತೆಯ ಒರೆಯಾನ್ ಮಾಲ್‌ನಲ್ಲಿ ಕೋಟಿಗೊಬ್ಬ 2 ಪ್ರದರ್ಶನ ಇದೆ.

  ಪ್ರಜ್ವಲ್ ದೇವರಾಜ್ ನಟನೆ 'ಜಂಟಲ್‌ಮ್ಯಾನ್' ರಿ-ರಿಲೀಸ್ಪ್ರಜ್ವಲ್ ದೇವರಾಜ್ ನಟನೆ 'ಜಂಟಲ್‌ಮ್ಯಾನ್' ರಿ-ರಿಲೀಸ್

  ಪುನೀತ್ 'ರಾಜಕುಮಾರ'

  ಪುನೀತ್ 'ರಾಜಕುಮಾರ'

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ 'ರಾಜಕುಮಾರ' ಚಿತ್ರವೂ ಈ ವಾರ ಮತ್ತೆ ರಿಲೀಸ್ ಆಗಿದೆ. ಆರ್ ಟಿ ನಗರದ ರಾಧಾಕೃಷ್ಣ ಥಿಯೇಟರ್ ಮತ್ತು ಹೊಂಗಸಂದ್ರದ ಬೃಂದಾ ಚಿತ್ರಮಂದಿರ್ಲ್ಲಿ ರಾಜಕುಮಾರ ಶೋ ಇದೆ.

  ಟಗರು-ನಾಗರಹಾವು-ಜಂಟಲ್‌ಮ್ಯಾನ್

  ಟಗರು-ನಾಗರಹಾವು-ಜಂಟಲ್‌ಮ್ಯಾನ್

  ಈ ಚಿತ್ರಗಳ ಜೊತೆ ಶಿವರಾಜ್ ಕುಮಾರ್ ನಟನೆಯ ಟಗರು, ಡಾ ವಿಷ್ಣುವರ್ಧನ್ ಅವರ ನಾಗರಹಾವು ಸಿನಿಮಾ, ಪ್ರಜ್ವಲ್ ದೇವರಾಜ್ ಅವರ ಜಂಟಲ್‌ಮ್ಯಾನ್ ಸಿನಿಮಾ ಹಾಗೂ ದಿಯಾ ಚಿತ್ರಗಳು ಈ ವಾರ ಮತ್ತೊಮ್ಮೆ ಪ್ರದರ್ಶನ ಕಾಣುತ್ತಿದೆ.

  English summary
  Kurukshetra, Raajakumara, kotigobba 2, tagaru and other big movies re-releasing today.
  Friday, October 23, 2020, 11:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X