For Quick Alerts
  ALLOW NOTIFICATIONS  
  For Daily Alerts

  ಡಿಸೆಂಬರ್ 16ರಂದು ಬೆಂಗಳೂರಿನ ಮುಖ್ಯ ಚಿತ್ರಮಂದಿರಗಳಲ್ಲಿ ಯಾವ ಚಿತ್ರಗಳ ಪ್ರದರ್ಶನ?

  |

  ಸಿನಿಮಾ ಕ್ಷೇತ್ರಕ್ಕೆ ಗೋಲ್ಡನ್ ಇಯರ್ ಆಗಿರುವ 2022ರ ಅಂತಿಮ ತಿಂಗಳಿನ ಮೂರನೇ ಶುಕ್ರವಾರ ಬೃಹತ್ ಚಿತ್ರ ಅವತಾರ್ 2 ಸೇರಿದಂತೆ ಭಾರತದಲ್ಲಿ ಹಲವಾರು ಚಿತ್ರಗಳು ಬಿಡುಗಡೆಗೊಂಡಿವೆ. ಇನ್ನು ಎಲ್ಲಾ ಭಾಷೆಯ ಚಿತ್ರಗಳನ್ನೂ ವೀಕ್ಷಿಸುವ ಸಿನಿ ಪ್ರೇಕ್ಷಕರೂ ಸಹ ಇರುವ ಬೆಂಗಳೂರಿನಲ್ಲಿ ಅವತಾರ್ ಬಿಡುಗಡೆಯ ದಿನವೇ ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡಿದ್ದು, ಈ ವರ್ಷ ಕೆಜಿಎಫ್ ಚಾಪ್ಟರ್ 2 ಬಳಿಕ ಬೆಂಗಳೂರು ನಗರದಲ್ಲಿ ಅತಿಹೆಚ್ಚು ಪ್ರದರ್ಶನ ಪಡೆದುಕೊಂಡ ಚಿತ್ರ ಎಂಬ ದಾಖಲೆಯನ್ನು ಬರೆದಿದೆ.

  ಅವತಾರ್ 2 ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಚಿತ್ರ ಬೆಂಗಳೂರಿನಲ್ಲಿ ಮತ್ತಷ್ಟು ಅಬ್ಬರಿಸುವುದು ಖಚಿತ. ಇನ್ನು ಅವತಾರ್ ರೀತಿಯ ದೈತ್ಯ ಚಿತ್ರ ಬಿಡುಗಡೆಯ ದಿನವೇ ಕನ್ನಡದಲ್ಲಿ ವಿನಯ್ ರಾಜ್‌ಕುಮಾರ್ ನಟನೆಯ ಟೆನ್ ಚಿತ್ರ ಸೇರಿದಂತೆ ಹಲವಾರು ಚಿತ್ರಗಳು ತೆರೆಕಂಡಿದ್ದು, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯ ಕೆಲ ಚಿತ್ರಗಳೂ ಸಹ ಬಿಡುಗಡೆಗೊಂಡಿವೆ. ಇನ್ನು ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳಲ್ಲಿ ಈ ದಿನದಂದು ಯಾವ ಚಿತ್ರಗಳು ಬಿಡುಯಾಗಿವೆ ಹಾಗೂ ಯಾವ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

  ನರ್ತಕಿ ಚಿತ್ರಮಂದಿರ, ಕೆಜಿ ರಸ್ತೆ: ಅವತಾರ್ ( ಇಂಗ್ಲಿಷ್ ) - ಮೂರು ಪ್ರದರ್ಶನಗಳು

  ಸಂತೋಷ್ ಚಿತ್ರಮಂದಿರ, ಕೆಜಿ ರಸ್ತೆ: ವಿಜಯಾನಂದ ( ಕನ್ನಡ ) ಮೂರು ಪ್ರದರ್ಶನಗಳು ಹಾಗೂ ಪ್ರಾಯಶಃ ( ಕನ್ನಡ ) ಒಂದು ಪ್ರದರ್ಶನ

  ಅನುಪಮಾ ಚಿತ್ರಮಂದಿರ : ರಾಕ್ಷಸರು ( ಕನ್ನಡ ) ನಾಲ್ಕು ಪ್ರದರ್ಶನಗಳು

  ಭೂಮಿಕಾ ಚಿತ್ರಮಂದಿರ: ಟೆಂಪರ್ ( ಕನ್ನಡ ) ನಾಲ್ಕು ಪ್ರದರ್ಶನಗಳು

  ವೀರೇಶ್ ಚಿತ್ರಮಂದಿರ, ಮಾಗಡಿ ರಸ್ತೆ: ಡಿ ಆರ್ 56 ( ಕನ್ನಡ ) ಎರಡು ಪ್ರದರ್ಶನಗಳು, ಮೊದಲ ಮಿಡಿತ ( ಕನ್ನಡ ) ಎರಡು ಪ್ರದರ್ಶನಗಳು, ಅವತಾರ್ ದ ವೇ ಆಫ್ ವಾಟರ್ ( ಕನ್ನಡ ) ಒಂದು ಪ್ರದರ್ಶನ, ಅವತಾರ್ ದ ವೇ ಆಫ್ ವಾಟರ್ ( ಇಂಗ್ಲಿಷ್ ) ಎರಡು ಪ್ರದರ್ಶನ, ಟೆಂಪರ್ ( ಕನ್ನಡ ) ಎರಡು ಪ್ರದರ್ಶನಗಳು

  ಊರ್ವಶಿ ಚಿತ್ರಮಂದಿರ: ಅವತಾರ್ ದ ವೇ ಆಫ್ ವಾಟರ್ ( ಇಂಗ್ಲಿಷ್ 2D ) ನಾಲ್ಕು ಪ್ರದರ್ಶನಗಳು

  ಟೆನ್ ( ವಿನಯ್ ರಾಜ್‌ಕುಮಾರ್ ನಟನೆಯ ಚಿತ್ರ ): ಬೆಂಗಳೂರಿನ ಆಯ್ದ ಮಲ್ಟಿಪ್ಲೆಕ್ಸ್‌ಗಳಲ್ಲಿ ಮಾತ್ರ

  English summary
  Movies running in Bengaluru main theatres as on December 16. Take a look
  Friday, December 16, 2022, 21:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X