Don't Miss!
- News
Karnataka Budget 2023: ಈ ವರ್ಷದ ಬಜೆಟ್, ಅಭಿವೃದ್ಧಿ, ಹಣಕಾಸಿನ ಕೊರತೆ ಬಗ್ಗೆ ಬೊಮ್ಮಾಯಿ ಉತ್ತರ
- Sports
ಕಿಚ್ಚ ಸುದೀಪ್ ಮನೆಗೆ ಭೇಟಿ ನೀಡಿದ ಸಂಜು ಸ್ಯಾಮ್ಸನ್: ಕೆಸಿ ಕಾರಿಯಪ್ಪ ಕೂಡ ಸಾಥ್
- Lifestyle
ವಾರ ಭವಿಷ್ಯ ಜ.29-ಫೆ.4: ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕೆಜಿ ರಸ್ತೆಯ ಮುಖ್ಯ ಚಿತ್ರಮಂದಿರದಲ್ಲಿ ವಾರಿಸು ತೆಲುಗು ವರ್ಷನ್ 'ವಾರಸುಡು' ಬಿಡುಗಡೆ
ಸಂಕ್ರಾಂತಿ ಪ್ರಯುಕ್ತ ಬಿಡುಗಡೆಗೊಂಡಿರುವ ತೆಲುಗು ಹಾಗೂ ತಮಿಳು ಚಿತ್ರಗಳ ಪೈಕಿ ಒಂದಾಗಿರುವ ತಮಿಳಿನ ವಿಜಯ್ ನಟನೆಯ ವಾರಿಸು ಚಿತ್ರದ ತೆಲುಗು ವರ್ಷನ್ ವಾರಸುಡು ಇಂದು ( ಜನವರಿ 14 ) ಬಿಡುಗಡೆಗೊಂಡಿದೆ. ಎಲ್ಲಾ ಎಂದುಕೊಂಡಂತೆ ನಡೆದಿದ್ದರೆ ವಾರಸುಡು ಚಿತ್ರ ಜನವರಿ 11ರಂದೇ ತಮಿಳು ವರ್ಷನ್ ಬಿಡುಗಡೆಯಾಗಿದ್ದ ದಿನವೇ ಬಿಡುಗಡೆಯಾಗಬೇಕಿತ್ತು. ಅಂದು ಚಿತ್ರವನ್ನು ಬಿಡುಗಡೆಗೊಳಿಸಲು ಎಲ್ಲಾ ಸಿದ್ಧತೆಗಳನ್ನು ನಡೆಸಿಕೊಂಡಿದ್ದರಾದರೂ ಅಂತಿಮ ಕ್ಷಣದಲ್ಲಿ ನಿರ್ಮಾಪಕ ದಿಲ್ ರಾಜು ತೆಲುಗು ಅವತರಣಿಕೆಯನ್ನು ಮುಂದೂಡಿ ಬಾಲಕೃಷ್ಣ ನಟನೆಯ ವೀರಸಿಂಹ ರೆಡ್ಡಿ ಹಾಗೂ ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ ಚಿತ್ರಗಳಿಗೆ ಚಿತ್ರಮಂದಿರ ಸಿಗಲಿ ಎಂದು ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದಿದ್ದರು.
ಇನ್ನು ಮೂರು ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಬಿಡುಗಡೆಗೊಂಡಿದ್ದ ವಾರಿಸು ಚಿತ್ರದ ತೆಲುಗು ವರ್ಷನ್ ವಾರಸುಡು ಚಿತ್ರ ಇಂದು ಬೆಂಗಳೂರಿನ ಕೆಜಿ ರಸ್ತೆಯ ಮುಖ್ಯ ಚಿತ್ರಮಂದಿರಗಳಲ್ಲಿ ಒಂದಾದ ಸಪ್ನ ಚಿತ್ರಮಂದಿರದಲ್ಲಿಯೂ ಸಹ ಬಿಡುಗೆಡೆಗೊಂಡಿದೆ. ಸಪ್ನ ಚಿತ್ರಮಂದಿರದಲ್ಲಿ ವಾರಸುಡು ಪ್ರದರ್ಶನಗೊಳ್ಳುತ್ತಿದ್ದರೆ ಉಳಿದ ಪ್ರಮುಖ ಚಿತ್ರಮಂದಿರಗಳಲ್ಲಿ ಯಾವ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
ನರ್ತಕಿ ಚಿತ್ರಮಂದಿರ, ಕೆಜಿ ರಸ್ತೆ:ವೇದ ( ಕನ್ನಡ ) - ನಾಲ್ಕು ಪ್ರದರ್ಶನಗಳು
ಸಂತೋಷ್ ಚಿತ್ರಮಂದಿರ, ಕೆಜಿ ರಸ್ತೆ: ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ( ಕನ್ನಡ ) ನಾಲ್ಕು ಪ್ರದರ್ಶನಗಳು
ಅನುಪಮಾ ಚಿತ್ರಮಂದಿರ : ಮಂಕುಭಾಯ್ ಫಾಕ್ಸಿರಾಣಿ ( ಕನ್ನಡ ) ಒಂದು ಪ್ರದರ್ಶನ, ಮರೆಯದೇ ಕ್ಷಮಿಸು ( ಕನ್ನಡ ) ಒಂದು ಪ್ರದರ್ಶನ ಹಾಗೂ ಥಗ್ಸ್ ಆಫ್ ರಾಮಘಡ ( ಕನ್ನಡ ) ಎರಡು ಪ್ರದರ್ಶನಗಳು
ಭೂಮಿಕಾ ಚಿತ್ರಮಂದಿರ: ವೀರ ಸಿಂಹ ರೆಡ್ಡಿ ( ತೆಲುಗು ) ಐದು ಪ್ರದರ್ಶನಗಳು
ತ್ರಿವೇಣಿ ಚಿತ್ರಮಂದಿರ : ವಾಲ್ತೇರು ವೀರಯ್ಯ ( ತೆಲುಗು ) ನಾಲ್ಕು ಪ್ರದರ್ಶನಗಳು
ವೀರೇಶ್ ಚಿತ್ರಮಂದಿರ, ಮಾಗಡಿ ರಸ್ತೆ: ವಾರಿಸು ( ತಮಿಳು ) ಎರಡು ಪ್ರದರ್ಶನಗಳು, ಆರ್ಕೆಸ್ಟ್ರಾ ಮೈಸೂರು ( ಕನ್ನಡ ) ಎರಡು ಪ್ರದರ್ಶನಗಳು, ವಾಲ್ತೇರು ವೀರಯ್ಯ ( ತೆಲುಗು ) ಮೂರು ಪ್ರದರ್ಶನಗಳು, ವೀರ ಸಿಂಹ ರೆಡ್ಡಿ ( ತೆಲುಗು ) ಮೂರು ಪ್ರದರ್ಶನಗಳು.
ಊರ್ವಶಿ ಚಿತ್ರಮಂದಿರ: ವಾರಿಸು ( ತಮಿಳು ) ಮೂರು ಪ್ರದರ್ಶನಗಳು ಹಾಗೂ ವಾಲ್ತೇರು ವೀರಯ್ಯ ( ತೆಲುಗು ) ಒಂದು ಪ್ರದರ್ಶನ.