ಜನವರಿ 20ರಂದು ಬೆಂಗಳೂರಿನ ಯಾವ ಪ್ರಮುಖ ಚಿತ್ರಮಂದಿರದಲ್ಲಿ ಯಾವ ಚಿತ್ರ ಪ್ರದರ್ಶನ?
ಕಳೆದೊಂದು ವಾರದಿಂದ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಕನ್ನಡ ಚಿತ್ರಗಳಿಗಿಂತ ಪರಭಾಷಾ ಚಿತ್ರಗಳದ್ದೇ ಅಬ್ಬರವಾಗಿಬಿಟ್ಟಿದೆ. ಸಂಕ್ರಾಂತಿ ಪ್ರಯುಕ್ತ ಕಳೆದ ವಾರದ ವಿವಿಧ ದಿನಗಳಂದು ವಿಜಯ್ ನಟನೆಯ ವಾರಿಸು, ಅಜಿತ್ ಕುಮಾರ್ ನಟನೆಯ ತುನಿವು, ಬಾಲಕೃಷ್ಣ ನಟನೆಯ ವೀರಸಿಂಹ ರೆಡ್ಡಿ ಹಾಗೂ ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ ಚಿತ್ರಗಳು ಬಿಡುಗಡೆಗೊಂಡವು. ಈ ಚಿತ್ರಗಳ ಜತೆ ಕನ್ನಡದ ಕೆಲ ಚಿತ್ರಗಳು ಬಿಡುಗಡೆಗೊಂಡರೂ ಸಹ ಹೆಚ್ಚು ಚಿತ್ರಮಂದಿರಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ.
ಇನ್ನು ಈ ಚಿತ್ರಗಳು ಬಿಡುಗಡೆಯಾಗಿ ವಾರ ಕಳೆದು, ಇಂದು ( ಜನವರಿ 20 ) ಮತ್ತಷ್ಟು ಹೊಸ ಚಿತ್ರಗಳು ಚಿತ್ರಮಂದಿರಗಳ ಅಂಗಳಕ್ಕೆ ಬಂದಿವೆ. ಇನ್ನು ಎಲ್ಲಾ ಭಾಷೆಯ ಸಿನಿ ರಸಿಕರನ್ನೂ ಹೊಂದಿರುವ ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದ ಪರಭಾಷಾ ಚಿತ್ರಗಳೇ ಹೆಚ್ಚಿನ ಶೋಗಳನ್ನು ಪಡೆದುಕೊಂಡಿದ್ದು, ನಗರದ ಪ್ರಮುಖ ಚಿತ್ರಮಂದಿರಗಳಲ್ಲಿ ಇಂದು ಯಾವ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ನರ್ತಕಿ ಚಿತ್ರಮಂದಿರ, ಕೆಜಿ ರಸ್ತೆ:ವೇದ ( ಕನ್ನಡ ) - ನಾಲ್ಕು ಪ್ರದರ್ಶನಗಳು
ಸಂತೋಷ್ ಚಿತ್ರಮಂದಿರ, ಕೆಜಿ ರಸ್ತೆ: ಹುಷಾರ್ ( ಕನ್ನಡ ) ನಾಲ್ಕು ಪ್ರದರ್ಶನಗಳು
ಅನುಪಮಾ ಚಿತ್ರಮಂದಿರ : ಬ್ಯಾಡ್ಲಿ ಮಿಸ್ಸಿಂಗ್ ( ಕನ್ನಡ ) ನಾಲ್ಕು ಪ್ರದರ್ಶನಗಳು
ಭೂಮಿಕಾ ಚಿತ್ರಮಂದಿರ: ವೀರ ಸಿಂಹ ರೆಡ್ಡಿ ( ತೆಲುಗು ) ನಾಲ್ಕು ಪ್ರದರ್ಶನಗಳು ಹಾಗೂ ವಾಲ್ತೇರು ವೀರಯ್ಯ ( ತೆಲುಗು ) ಎರಡು ಪ್ರದರ್ಶನಗಳು
ತ್ರಿವೇಣಿ ಚಿತ್ರಮಂದಿರ : ವಾಲ್ತೇರು ( ತೆಲುಗು ) ನಾಲ್ಕು ಪ್ರದರ್ಶನಗಳು
ವೀರೇಶ್ ಚಿತ್ರಮಂದಿರ, ಮಾಗಡಿ ರಸ್ತೆ: ವಾರಿಸು ( ತಮಿಳು ) ಎರಡು ಪ್ರದರ್ಶನಗಳು, ವೀರ ಸಿಂಹ ರೆಡ್ಡಿ ( ತೆಲುಗು ) ಮೂರು ಪ್ರದರ್ಶನಗಳು, ವಾಲ್ತೇರು ವೀರಯ್ಯ ( ತೆಲುಗು ) ಎರಡು ಪ್ರದರ್ಶನಗಳು ಹಾಗೂ ಬ್ಯಾಡ್ಲಿ ಮಿಸ್ಸಿಂಗ್ ( ಕನ್ನಡ ) ಒಂದು ಪ್ರದರ್ಶನ.
ಊರ್ವಶಿ ಚಿತ್ರಮಂದಿರ: ವಾರಿಸು ( ತಮಿಳು ) ನಾಲ್ಕು ಪ್ರದರ್ಶನಗಳು


Click it and Unblock the Notifications











