»   » ನವೆಂಬರ್ 21ರಿಂದ 'ರಾಮಾಚಾರಿ' ರಂಗಿನಾಟ

ನವೆಂಬರ್ 21ರಿಂದ 'ರಾಮಾಚಾರಿ' ರಂಗಿನಾಟ

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮತ್ತೊಂದು ಅದ್ದೂರಿ ಚಿತ್ರ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ'. ಈ ಚಿತ್ರ ಆಗ ಬಿಡುಗಡೆಯಾಗುತ್ತದೆ, ಈಗ ರಿಲೀಸ್ ಆಗುತ್ತದೆ ಎಂದು ಅಭಿಮಾನಿಗಳು ತುದಿಗಾಲಲ್ಲಿ ನಿಂತು ಎದುರು ನೋಡಿ ನೋಡಿ ಸುಸ್ತಾಗಿದ್ದಾರೆ.

ಇದೀಗ ಈ ಚಿತ್ರದ ರಿಲೀಸ್ ಡೇಟ್ ಪಕ್ಕಾ ಆಗಿದೆ. ಇದೇ ನವೆಂಬರ್ 21ಕ್ಕೆ ರಾಜ್ಯದಾದ್ಯಂತ 'ರಾಮಾಚಾರಿ' ರಂಗೇರಿಸಲಿದ್ದಾನೆ. ಯಶ್ ಮತ್ತು ರಾಧಿಕಾ ಪಂಡಿತ್ ಜೋಡಿಯಲ್ಲಿ ಬರುತ್ತಿರುವ ಮೂರನೇ ಚಿತ್ರ ಇದಾಗಿದೆ. ಇದಕ್ಕೂ ಮುನ್ನ ಬಂದಂತಹ 'ಮೊಗ್ಗಿನ ಮನಸ್ಸು', 'ಡ್ರಾಮಾ' ಚಿತ್ರಗಳ ಬಳಿಕ ಜೊತೆಯಾಗಿ ಅಭಿನಯಿಸುತ್ತಿರುವ ಚಿತ್ರ ಇದಾಗಿದೆ. [ಗಜಕೇಸರಿ ಚಿತ್ರ ವಿಮರ್ಶೆ]

Mr and Mrs Ramachari gearing up for a release on 21st Nov

ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ರಾಮಾಚಾರಿ ಬಿಜಿಯಾಗಿದ್ದಾನೆ. ಇನ್ನೇನು ಸೆನ್ಸಾರ್ ಮುಂದೆ ಬರಲಿದ್ದು ನವೆಂಬರ್ 21ಕ್ಕೆ ತೆರೆಗೆ ತರಲು ನಿರ್ಮಾಪಕರು ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ. ರಾಮಚಾರಿ ಅಂದ್ರೆ ವಿಷ್ಣು ಅಭಿಮಾನಿಗಳ ನಿರೀಕ್ಷೆಯ ಚಿತ್ರ ಕೂಡ.

ವಿಷ್ಣುದಾದಾ ಹುಟ್ಟುಹಬ್ಬಕ್ಕೆ ರಿಲೀಸಾದ ಟೀಸರ್ ಸಖತ್ ಕ್ರೇಜ್ ಹುಟ್ಟಿಸಿದೆ. ನಿರ್ಮಾಪಕರ ಪ್ರಕಾರ ಚಿತ್ರ ದೀಪಾವಳಿಗೇ ತೆರೆಗೆ ಬರಬೇಕಿತ್ತು. ಆದರೆ ಎರಡು ಹಾಡುಗಳ ಚಿತ್ರೀಕರಣ ತಡವಾದ ಕಾರಣ ರಾಕಿಂಗ್ ರಾಮಾಚಾರಿ ತೆರೆಗೆ ಬರಲು ಸ್ವಲ್ಪ ತಡವಾಯಿತು ಎನ್ನುತ್ತದೆ ಚಿತ್ರತಂಡ.

ಸತತ ನಾಲ್ಕು ಯಶಸ್ವಿ ಸಿನಿಮಾಗಳನ್ನ ಕೊಟ್ಟಿರೋ ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಮತ್ಯಾವಾಗ ಬರುತ್ತೆ ಅಂತ ಚಿತ್ರಪ್ರೇಮಿಗಳು ಕಾತುರದಿಂದ ಕಾದಿದ್ದಾರೆ. ಗೂಗ್ಲಿ, ರಾಜಾಹುಲಿ, ಗಜಕೇಸರಿ, ಡ್ರಾಮಾ ಚಿತ್ರಗಳ ಗೆಲುವಿನಿಂದ ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಸ್ಟಾರ್ ಆಗಿ ಮಿಂಚ್ತಿರೋ ಯಶ್ ಮುಂದಿನ ಸಿನಿಮಾ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ'. (ಫಿಲ್ಮಿಬೀಟ್ ಕನ್ನಡ)

English summary
Rocking Star Yash and Sandalwood doll Radhika Pandit's Mr and Mrs Ramachari is gearing up for a release on Nov 21st. The film directed by Santhosh Ananddram was produced by Jayanna-Bhogendra.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada