For Quick Alerts
  ALLOW NOTIFICATIONS  
  For Daily Alerts

  Mr & Mrs ರಾಮಾಚಾರಿಗೆ 8 ವರ್ಷ: ಅಭಿಮಾನಿಗಳಿಂದ 8 ದಿನ 'ಯಶ್ ಟೈಮ್ಸ್' ಸಂಭ್ರಮ!

  |

  ರಾಕಿಂಗ್ ಸ್ಟಾರ್ ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್. ದೊಡ್ಡ ದೊಡ್ಡ ಕನಸುಗಳನ್ನು ಇಟ್ಟುಕೊಂಡಿರೋ ಯಶ್ ಅದನ್ನು ಈಡೇರಿಸಿಕೊಳ್ಳುವುದಕ್ಕೆ ಮುನ್ನುಗ್ಗುತ್ತಿದ್ದಾರೆ. ಆ ಪ್ರಯತ್ನಕ್ಕೆ ಸಿಕ್ಕ ಮತ್ತೊಂದು ಯಶಸ್ಸೇ 'ಕೆಜಿಎಫ್' ಹಾಗೂ 'ಕೆಜಿಎಫ್ 2'.

  'ಕೆಜಿಎಫ್' ಸಿನಿಮಾ ಮೂಲಕ ಪ್ಯಾನ್ ಇಂಡಿಯಾಗೆ ಎಂಟ್ರಿ ಕೊಡುವುದಕ್ಕೂ ಮುನ್ನ ಹಲವು ಅಡೆತಡೆಗಳನ್ನು ಮುರಿದು ಹಾಕಿದ್ದರು. ಅದರಲ್ಲೂ ಕರ್ನಾಟಕದ ಗಡಿಗಳಲ್ಲಿ ಸಿನಿಮಾ ನೋಡೋದಿಲ್ಲ ಅನ್ನೋ ಕಡೆಗಳಲ್ಲಿ ಬಾಕ್ಸಾಫೀಸ್‌ ದಾಖಲೆ ಬರೆದಿದ್ದರು. ಅದುವೇ 'ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ'.

  ರಾಮಾಚಾರಿ ತುಣುಕಿಗೆ ಬಣ್ಣ ಹಚ್ಚಿದ ಮಕ್ಕಳು: ಅಭಿನಯ ಕಂಡು ಕ್ರೇಜಿಸ್ಟಾರ್ ಭಾವುಕ ರಾಮಾಚಾರಿ ತುಣುಕಿಗೆ ಬಣ್ಣ ಹಚ್ಚಿದ ಮಕ್ಕಳು: ಅಭಿನಯ ಕಂಡು ಕ್ರೇಜಿಸ್ಟಾರ್ ಭಾವುಕ

  'ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ' ಸಿನಿಮಾ ಕರ್ನಾಟಕದ ಗಡಿಭಾಗಗಳಲ್ಲಿ ಅದ್ಭುತ ಕಲೆಕ್ಷನ್ ಮಾಡಿತ್ತು. ಬಳ್ಳಾರಿ, ಹೈದರಾಬಾದ್ ಕರ್ನಾಟಕದಂತಹ ಭಾಗಗಳಲ್ಲಿ ದಾಖಲೆ ಕಲೆಕ್ಷನ್ ಮಾಡಿತ್ತು. 8 ವರ್ಷಗಳ ಹಿಂದೆ ಈ ಸಿನಿಮಾ ಕನ್ನಡ ಚಿತ್ರರಂಗದ ಬಾಕ್ಸಾಫೀಸ್ ದಾಖಲೆಯನ್ನೆಲ್ಲಾ ಉಡೀಸ್ ಮಾಡಿತ್ತು.

  ದಾಖಲೆ ಮುರಿದು ಹಾಕಿದ್ದ ಯಶ್

  ದಾಖಲೆ ಮುರಿದು ಹಾಕಿದ್ದ ಯಶ್

  ಯಶ್‌ಗೆ ಅತೀ ದೊಡ್ಡ ಬ್ರೇಕ್ ಕೊಟ್ಟ ಸಿನಿಮಾ 'ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ'. ಸಂತೋಷ್ ಆನಂದ್‌ರಾಮ್ ನಿರ್ದೇಶಿಸಿದ್ದ ಈ ಸಿನಿಮಾ ಸ್ಯಾಂಡಲ್‌ವುಡ್ ಬಾಕ್ಸಾಫೀಸ್‌ನಲ್ಲಿ ಅದೂವರೆಗೂ ಇದ್ದ ದಾಖಲೆಗಳನ್ನೆಲ್ಲಾ ಉಡೀಸ್ ಮಾಡಿತ್ತು. ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿಯಾಗಿ ಕಂಡಿದ್ದ ರಾಕಿಂಗ್‌ ಸ್ಟಾರ್‌ ಸಿನಿಪ್ರಿಯರು ಮೆಚ್ಚುಗೆ ಸೂಚಿಸಿದ್ದರು. ಈ ಸಿನಿಮಾ ಎಲ್ಲಾ ಅಡೆ ತಡೆಗಳನ್ನು ಮೀರಿ ಬಾಕ್ಸಾಫೀಸ್‌ನಲ್ಲಿ 60 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಇದೇ ಸಿನಿಮಾ ಬಿಡುಗಡೆಯಾಗಿ ಇಂದಿಗೆ( ಡಿಸೆಂಬರ್ 25) 8 ವರ್ಷಗಳನ್ನು ಪೂರೈಸಿದೆ.

  ಸಂತೋಷ್ ಆನಂದ್‌ರಾಮ್ ಟ್ವೀಟ್

  ಸಂತೋಷ್ ಆನಂದ್‌ರಾಮ್ ಟ್ವೀಟ್

  "ಇಂದು 'ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ"ಗೆ 8 ವರ್ಷ. ನನ್ನ ಪ್ರತಿಭೆಯನ್ನು ಗುರುತಿಸಿ ಅವಕಾಶಕೊಟ್ಟು ಬೆನ್ನು ತಟ್ಟಿದ ಯಶ್ ಸರ್‌ಗೆ ಸದಾ ಕೃತಜ್ಞನಾಗಿರುತ್ತೇನೆ. ನನ್ನ ಚಿತ್ರತಂಡಕ್ಕೆ ಹಾಗೂ ರಾಧಿಕಾ ಮೇಡಂಗೆ ನನ್ನ ಧನ್ಯವಾದ. ಈ ಚಿತ್ರಕ್ಕೆ ಆಶೀರ್ವದಿಸಿದ ಸಾಹಸ ಸಿಂಹ ವಿಷ್ಣುದಾದಾರವರಿಗೆ ಹಾಗೂ ಈ ಚಿತ್ರವನ್ನು ಇತಿಹಾಸ ಪುಟ ಸೇರಿಸಿದ ಕನ್ನಡಿಗರಿಗೆ ನನ್ನ ಧನ್ಯವಾದಗಳು." ಎಂದು ಸಂತೋಷ್ ಆನಂದ್‌ರಾಮ್ ಟ್ವೀಟ್ ಮಾಡಿದ್ದಾರೆ.

  8 ದಿನ 'ಯಶ್ ಟೈಮ್ಸ್' ಅಭಿಯಾನ

  8 ದಿನ 'ಯಶ್ ಟೈಮ್ಸ್' ಅಭಿಯಾನ

  ಯಶ್ ಫ್ಯಾನ್ಸ್ ಈಗ ರಾಮಾಚಾರಿ ಸಿನಿಮಾ ಸಂಭ್ರಮದಲ್ಲಿದ್ರೆ, ಜನವರಿ 8ರಂದು ಯಶ್ ಹುಟ್ಟುಹಬ್ಬಕ್ಕೂ ಸ್ಕೆಚ್ ಹಾಕಿದ್ದಾರೆ. ಜನವರಿ 1 ರಿಂದ ಜನವರಿ 8ರವರೆಗೂ 'ಯಶ್ ಟೈಮ್ಸ್' ಅಂತ ಸಂಭ್ರಮ ಆರಂಭಿಸಲಿದ್ದಾರೆ. 37ನೇ ವರ್ಷಕ್ಕೆ ಕಾಲಿಡುತ್ತಿರುವ ಯಶ್‌ಗೆ ಅಭಿಮಾನಿಗಳು ವಿಶೇಷ ಗೌರವ ಸೂಚಿಸಲಿದ್ದಾರೆ. ಪ್ರತಿ ಸಂಜೆ 6 ಗಂಟೆಗೆ ರಾಕಿಂಗ್‌ ಸ್ಟಾರ್ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಲಿದ್ದಾರೆ.

  ಹೊಸ ಸಿನಿಮಾ ಅನೌನ್ಸ್ ಆಗೋದ್ಯಾವಾಗ?

  ಹೊಸ ಸಿನಿಮಾ ಅನೌನ್ಸ್ ಆಗೋದ್ಯಾವಾಗ?

  'ಕೆಜಿಎಫ್ 2' ಸಕ್ಸಸ್ ಬಳಿಕ ಯಶ್ ಹೊಸ ಸಿನಿಮಾ ಯಾವಾಗ ಅನೌನ್ಸ್ ಆಗುತ್ತೋ ಅಂತ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಈಗಾಗಲೇ ಯಶ್ 'ಕೆಜಿಎಫ್' ಒಳಗೆ ನಾನು ಮುಳುಗಿ ಹೋಗಿಲ್ಲ ಅಂತಾನೂ ಹೇಳುತ್ತಿದ್ದಾರೆ. ಅಲ್ಲದೆ ದೊಡ್ಡದೇನೋ ನಡೆಯುತ್ತಿದೆ ಎಂದು ಸುಳಿವು ನೀಡಿರುವುದರಿಂದ ಯಶ್ ಮುಂದಿನ ಸಿನಿಮಾ ಬಗ್ಗೆ ಸಹಜವಾಗಿಯೇ ಕುತೂಹಲವಿದೆ. ಈ ಬಾರಿ ಯಶ್ ಬರ್ತ್‌ಡೇಗೆ ಹೊಸ ಸಿನಿಮಾ ಅನೌನ್ಸ್ ಆಗಬಹುದು ಅನ್ನೋ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.

  English summary
  Mr & Mrs Ramachari 8 Years:Santhosh Ananddram Says Thanks to Yash Radhika, Know More.
  Sunday, December 25, 2022, 15:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X