»   » ದೀಪಾವಳಿಗೆ ಬರ್ತಾನೇ ರಂಗ್ ರಂಗ್ 'ರಾಮಾಚಾರಿ'

ದೀಪಾವಳಿಗೆ ಬರ್ತಾನೇ ರಂಗ್ ರಂಗ್ 'ರಾಮಾಚಾರಿ'

Posted By:
Subscribe to Filmibeat Kannada

ಸತತ ನಾಲ್ಕು ಯಶಸ್ವಿ ಸಿನಿಮಾಗಳನ್ನ ಕೊಟ್ಟಿರೋ ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಮತ್ಯಾವಾಗ ಬರುತ್ತೆ ಅಂತ ಚಿತ್ರಪ್ರೇಮಿಗಳು ಕಾತುರದಿಂದ ಕಾದಿದ್ದಾರೆ. ಗೂಗ್ಲಿ, ರಾಜಾಹುಲಿ, ಗಜಕೇಸರಿ, ಡ್ರಾಮಾ ಚಿತ್ರಗಳ ಗೆಲುವಿನಿಂದ ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಸ್ಟಾರ್ ಆಗಿ ಮಿಂಚ್ತಿರೋ ಯಶ್ ಮುಂದಿನ ಸಿನಿಮಾ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ.

ರಾಧಿಕಾ ಪಂಡಿತ್ ಹಾಗೂ ಯಶ್ ಮತ್ತೆ ಜೋಡಿಯಾಗಿರೋ ಸಿನಿಮಾ ಇದು. ಎರಡೆರೆಡು ಯಶಸ್ವಿ ಸಿನಿಮಾ ಕೊಟ್ಟು ಸ್ಯಾಂಡಲ್ ವುಡ್ ನ ಯಶಸ್ವಿ ಜೋಡಿ ಅನ್ನಿಸಿಕೊಂಡಿರೋ ಯಶ್-ರಾಧಿಕಾ ಪಂಡಿತ್ ಜೋಡಿಯಾಗ್ತಿರೋ ಮುಂದಿನ ಸಿನಿಮಾ ಇದು. 'ರಾಮಾಚಾರಿ'ಯ ಚಿತ್ರೀಕರಣ ಶೇ.90ರಷ್ಟು ಮುಗಿದಿದೆ. [ಮೆಜೆಸ್ಟಿಕ್ ಬಸ್ಟಾಂಡ್ ನಲ್ಲಿ ರಾತ್ರಿ ಕಳೆದಿದ್ದ ನಟ ಯಶ್]

Mr. and Mrs. Ramachari

ಈ ಚಿತ್ರದಲ್ಲಿ ವಿಷ್ಣು ಅಭಿನಯದ ದಾಖಲೆ ಚಿತ್ರ ನಾಗರಹಾವಿನ ಛಾಯೆಯೂ ಇದೆ.ರಾಕಿಂಗ್ ಸ್ಟಾರ್ ಯಶ್ ರನ್ನ ಮತ್ತೊಮ್ಮೆ ಹಳ್ಳಿ ಹೈದನ ಗೆಟಪ್ ನಲ್ಲಿ ನೋಡೋಕೆ ಕಾದಿರೋ ಚಿತ್ರಪ್ರೇಮಿಗಳಿಗೆ ಈ ಚಿತ್ರ ಹಬ್ಬ ನೀಡಲಿದೆ.

ಯಶ್ ಮತ್ತೊಂದು ಧಮಾಕಾ ಮಿಸ್ಟರ್ ಅಂಡ್ ಮಿಸಸ್ ರಾಮಚಾರಿ ದೀಪಾವಳಿಗೆ ತೆರೆಗೆ ಬರಲಿದೆ. ದೀಪಾವಳಿಗೆ ಸಾಧ್ಯವಾಗದಿದ್ರೆ ರಾಜಾಹುಲಿ ಚಿತ್ರ ಬಂದ ದಿನಕ್ಕೆ ಅಂದ್ರೆ ನವೆಂಬರ್ ಒಂದಕ್ಕೆ ರಂಗ್ ರಂಗ್ ರಾಮಚಾರಿ ತೆರೆಗೆ ಬರ್ತಾನೆ.

ಜಯಣ್ಣ ಮತ್ತು ಭೋಗೇಂದ್ರ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. ಡ್ರಾಮಾ ಮತ್ತು ಮೊಗ್ಗಿನ ಮನಸು ಚಿತ್ರಗಳ ಬಳಿಕ ಯಶ್ ಮತ್ತು ರಾಧಿಕಾ ಪಂಡಿತ್ ಜೋಡಿ ಅಭಿನಯದ ಚಿತ್ರ ಇದಾಗಿದೆ. ಸಂತೋಷ್ ಅವರು ಆಕ್ಷನ್ ಕಟ್ ನಲ್ಲಿ ಚಿತ್ರ ಮೂಡಿಬರುತ್ತಿದೆ. (ಫಿಲ್ಮಿಬೀಟ್ ಕನ್ನಡ)

English summary
Rocking Star Yash and Radhika Pandit lead Kannada movie 'Mr & Mrs Ramachari' all set for release on Deepavali festival. The movie made under the Jayanna Combines banner and produced by Jayanna and Bhogendra.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada