twitter
    For Quick Alerts
    ALLOW NOTIFICATIONS  
    For Daily Alerts

    ಈ ವರ್ಷದಲ್ಲಿ ಭಾರೀ ನಿರೀಕ್ಷೆ ಹುಟ್ಟು ಹಾಕಿರುವ ಕನ್ನಡ ಚಿತ್ರಗಳು

    |

    ಕಳೆದೆರಡು ವರ್ಷಗಳಲ್ಲಿ ಕನ್ನಡ ಚಿತ್ರರಂಗ ಗಮನಾರ್ಹ ಸಾಧನೆ ಮಾಡಿದೆ ಎಂದರೆ ಅತಿಶಯೋಕ್ತಿಯಾಗುತ್ತದೆ. ಆದರೆ, ಕನ್ನಡ ಚಿತ್ರಗಳು ಯಶಸ್ವಿಯಾಗುತ್ತಿರುವ ಸಂಖ್ಯೆಗಳ ಪಟ್ಟಿಯಲ್ಲಂತೂ ತುಂಬಾ ಸುಧಾರಣೆ ಕಂಡು ಬರುತ್ತಿದೆ.

    ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿರುವ ನೂತನ ಪ್ರಯೋಗಗಳು, ಹೊಸ ಪ್ರತಿಭೆಗಳ ಸಾಧನೆ, ಹೆಚ್ಚುತ್ತಿರುವ ಸ್ವಮೇಕ್ ಚಿತ್ರಗಳು ಹೀಗೆ ಇತರ ಭಾಷಿಕರೂ ಕನ್ನಡ ಚಿತ್ರಗಳತ್ತ ಮುಖ ಮಾಡುತ್ತಿರುವುದು ಸಂತಸದ ವಿಚಾರ.

    2013ರಲ್ಲಿ ಬಿಡುಗಡೆಯಾದ ಸುಮಾರು ಆರೇಳು ಚಿತ್ರಗಳು ಇತರ ಭಾಷೆಗಳಿಗೆ ರಿಮೇಕ್ ಆಗಿರುವ ವಿಚಾರ ಎಲ್ಲರಿಗೂ ತಿಳಿದಿರುವ ವಿಚಾರ. ಎದೆಗಾರಿಕೆ, ಲೂಸಿಯಾ ಮುಂತಾದ ಚಿತ್ರಗಳು ರಾಷ್ಟೀಯ ಮಟ್ಟದಲ್ಲಿ ಕನ್ನಡ ಚಿತ್ರೋದ್ಯಮಕ್ಕೆ ಹೆಸರನ್ನು ತಂದು ಕೊಟ್ಟವು.

    ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರಗಳು ತಾಲೂಕು ಮಟ್ಟದಲ್ಲೂ ಅಂದರೆ ಬಿ ಮತ್ತು ಸಿ ಸೆಂಟರ್ ಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗುತ್ತಿರುವುದು ಮತ್ತೊಂದು ಪ್ಲಸ್ ಪಾಯಿಂಟ್. ಆದರೂ ಕನ್ನಡ ಚಿತ್ರಗಳಿಗೆ ಚಿತ್ರಮಂದಿರದ ಸಮಸ್ಯೆ ಬಗೆ ಹರಿಯುವುದು ಯಾವಗಲೋ?

    ಈ ವರ್ಷದಲ್ಲೂ ಕನ್ನಡ ಚಿತ್ರಗಳು ಭಾರೀ ಯಶಸ್ಸನ್ನು ಸಾಧಿಸಲಿ, ಗತಕಾಲದ ವೈಭವ ಮರುಕಳಿಸುವಂತಾಗಲಿ ಎನ್ನುವುದು ಎಲ್ಲಾ ಕನ್ನಡ ಸಿನಿಮಾ ಅಭಿಮಾನಿಗಳ ಆಶಯ.

    2014ರಲ್ಲಿ ಭಾರೀ ಹೈಪ್ ಹುಟ್ಟು ಹಾಕಿರುವ ಕನ್ನಡ ಚಿತ್ರಗಳು ಸ್ಲೈಡಿನಲ್ಲಿ...

    ನಿನ್ನಿಂದಲೇ

    ನಿನ್ನಿಂದಲೇ

    ಪುನೀತ್ ರಾಜಕುಮಾರ್, ಎರಿಕಾ ಫೆರ್ನಾಂಡಿಸ್ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರ ಜನವರಿ ತಿಂಗಳಲ್ಲಿ ಬಿಡುಗಡೆಯಾಗುತ್ತಿದೆ. ಒಂದು ವರ್ಷದ ನಂತರ ಪುನೀತ್ ಚಿತ್ರವೊಂದು ತೆರೆಕಾಣುತ್ತಿದೆ. ಜಯಂತ್ ಪರಾಂಜೆ ನಿರ್ದೇಶಿಸಿರುವ ಈ ಚಿತ್ರಕ್ಕೆ ಮಣಿಶರ್ಮ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

    ಬ್ರಹ್ಮ

    ಬ್ರಹ್ಮ

    ಆರ್ ಚಂದ್ರು ಕಥೆ, ಚಿತ್ರಕಥೆ ಹಣಿದು ನಿರ್ದೇಶಿಸುತ್ತಿರುವ ಬ್ರಹ್ಮ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ, ಪ್ರಣೀತಾ, ನಾಸರ್, ಸಯ್ಯಾಜಿ ಶಿಂಧೆ ಮುಂತಾದರಿದ್ದಾರೆ. ಚಿತ್ರಕ್ಕೆ ಗುರುಕಿರಣ್ ಅವರ ಸಂಗೀತವಿದೆ.

    ಉಳಿದವರು ಕಂಡಂತೆ

    ಉಳಿದವರು ಕಂಡಂತೆ

    ಸಿಂಪಲ್ಲಾಗೊಂದು ಲವ್ ಸ್ಟೋರಿ ಚಿತ್ರ ಖ್ಯಾತಿಯ ರಕ್ಷಿತ್ ಶೆಟ್ಟಿ ರಚಿಸಿ, ನಿರ್ದೇಶಿಸಿರುವ ಉಳಿದವರು ಕಂಡಂತೆ ಚಿತ್ರದ ಪ್ರಮುಖ ತಾರಾಗಣದಲ್ಲಿ ರಕ್ಷಿತ್ ಶೆಟ್ಟಿ, ಯಜ್ಞಾ ಶೆಟ್ಟಿ, ಶೀತಲ್ ಶೆಟ್ಟಿ, ಕಿಶೋರ್, ಅಚ್ಯುತ್ ಕುಮಾರ್, ತಾರಾ, ದಿನೇಶ್ ಮಂಗಳೂರು ಪ್ರಮುಖ ಭೂಮಿಕೆಯಲ್ಲಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತವಿದೆ.

    ಆರ್ಯನ್

    ಆರ್ಯನ್

    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಮ್ಯಾ, ಶರತ್ ಬಾಬು, ಬುಲೆಟ್ ಪ್ರಕಾಶ್, ವಿನಯಾ ಪ್ರಸಾದ್ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಸಂಗೀತ ನೀಡಿದ್ದಾರೆ. ಡಿ ರಾಜೇಂದ್ರ ಬಾಬು ನಿಧನದ ನಂತರ ಗುರುದತ್ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ.

    ಬಹುಪರಾಕ್

    ಬಹುಪರಾಕ್

    ಸುನಿಲ್ ಕುಮಾರ್ ನಿರ್ದೇಶನದ ಬಹುಪರಾಕ್ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಶ್ರೀನಗರ ಕಿಟ್ಟಿ, ಮೇಘನಾ ಸುಂದರರಾಜ್, ಪ್ರಮೀಳಾ ಜೋಶಾಯ್, ಸುಂದರರಾಜ್, ರಕ್ಷಿತ್ ಶೆಟ್ಟಿ ಮುಂತಾದವರಿದ್ದಾರೆ. ಚಿತ್ರಕ್ಕೆ ಭರತ್ ಸಂಗೀತ ನೀಡಿದ್ದಾರೆ.

    ಶಿವಾಜಿನಗರ

    ಶಿವಾಜಿನಗರ

    ಪಿ ಎನ್ ಸತ್ಯ ನಿರ್ದೇಶನದ ಈ ಚಿತ್ರವನ್ನು ರಾಮು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಸಂಭಾಷಣೆ ರವಿ ಶ್ರೀವತ್ಸ ಅವರದ್ದು. ಚಿತ್ರದ ಪ್ರಮುಖ ತಾರಾಗಣದಲ್ಲಿ ದುನಿಯಾ ವಿಜಯ್, ಪರುಲ್ ಯಾದವ್ ಇದ್ದಾರೆ.

    ಅಂಬರೀಶ್

    ಅಂಬರೀಶ್

    ಮಹೇಶ್ ಸುಖಧರೆ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್, ದರ್ಶನ್, ಪ್ರಿಯಾಮಣಿ, ಸುಮಲತಾ, ಸಂಪತ್ ರಾಜ್, ರುಚಿತಾ ರಾಮ್ ಪ್ರಮುಖ ಪಾತ್ರದಲ್ಲಿದ್ದಾರೆ. ಚಿತ್ರಕ್ಕೆ ಹರಿಕೃಷ್ಣ ಅವರ ಸಂಗೀತವಿದೆ.

    ಮೈತ್ರಿ

    ಮೈತ್ರಿ

    ಗಿರಿರಾಜ್ ನಿರ್ದೇಶಿಸುತ್ತಿರುವ ಈ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಪುನೀತ್ ರಾಜಕುಮಾರ್, ಮೋಹನ್ ಲಾಲ್, ಅರ್ಚನಾ, ಭಾವನಾ, ಅತುಲ್ ಕುಲ್ಕರ್ಣಿ, ರವಿಕಾಳೆ ಮುಂತಾದವರಿದ್ದಾರೆ. ಚಿತ್ರಕ್ಕೆ ಇಳಯರಾಜ ಸಂಗೀತ ನೀಡಿದ್ದಾರೆ.

    ಅಗ್ರಜ

    ಅಗ್ರಜ

    ಶ್ರೀನಂದನ್ ನಿರ್ದೇಶಿಸುತ್ತಿರುವ ಅಗ್ರಜ ಚಿತ್ರದ ಪ್ರಮುಖ ತಾರಾಗಣದಲ್ಲಿ ದರ್ಶನ್, ಜಗ್ಗೇಶ್, ಕಾಮ್ನಾ ಜೇಠ್ಮಲಾನಿ, ಸಂಜನಾ ಮುಂತಾದವರಿದ್ದಾರೆ. ಚಿತ್ರಕ್ಕೆ ನಂದನ್ ರಾಜ್ ಸಂಗೀತ ನೀಡಿದ್ದಾರೆ.

    ವಿರಾಟ್

    ವಿರಾಟ್

    ಎಚ್ ವಾಸು ನಿರ್ದೇಶನದ ಈ ಚಿತ್ರಕ್ಕೆ ಹರಿಕೃಷ್ಣ ಸಂಗೀತ ನೀಡಿದ್ದಾರೆ. ದರ್ಶನ್, ಇಶಾ ಚಾವ್ಲಾ, ವಿದಿಶಾ ಶ್ರೀವಾಸ್ತವ್, ಚೈತ್ರ ಚಂದ್ರನಾಥ್, ಸುಮಲತಾ, ರವಿಶಂಕರ್ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ.

    ಮಾಣಿಕ್ಯ

    ಮಾಣಿಕ್ಯ

    ಸುದೀಪ್ ನಿರ್ದೇಶಿಸುತ್ತಿರುವ ಮಾಣಿಕ್ಯ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಸುದೀಪ್, ರವಿಚಂದ್ರನ್, ರವಿಶಂಕರ್, ಅವಿನಾಶ್, ಚಿತ್ರಾ ಶೈಣೈ, ಸಾಧು ಕೋಕಿಲ, ಅಶೋಕ್, ರಮ್ಯಕೃಷ್ಣ ಮುಂತಾವರಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

    ಕರೋಡ್ ಪತಿ

    ಕರೋಡ್ ಪತಿ

    ಎ ಎನ್ ರಮೇಶ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಅಭಿಮಾನ್ ರಾಯ್ ಅವರ ಸಂಗೀತವಿದೆ. ಚಿತ್ರದ ತಾರಾಗಣದಲ್ಲಿ ಕೋಮಲ್ ಕುಮಾರ್, ಮಾಳವಿಕಾ, ಗುರುಪ್ರಸಾದ್, ವೈಜಯಂತ್ ಬಿರಾದರ್, ಡಿಂಗ್ರಿ ನಾಗರಾಜ್ ಮುಂತಾದವರಿದ್ದಾರೆ. ಚಿತ್ರವನ್ನು ಸಿ ರಮೇಶ್ ನಿರ್ದೇಶಿಸುತ್ತಿದ್ದಾರೆ.

    ಗಜಕೇಶರಿ

    ಗಜಕೇಶರಿ

    ಕೃಷ್ಣ ನಿರ್ದೇಶಿಸುತ್ತಿರುವ ಗಜಕೇಶರಿ ಚಿತ್ರದ ಪ್ರಮುಖ ತಾರಾಗಣದಲ್ಲಿ ಯಶ್, ಅಮೂಲ್ಯ, ಅನಂತನಾಗ್ ಇದ್ದಾರೆ. ಚಿತ್ರಕ್ಕೆ ಯೋಗರಾಜ್ ಭಟ್ ಕಥೆ ಹಣಿದಿದ್ದಾರೆ. ಚಿತ್ರಕ್ಕೆ ಹರಿಕೃಷ್ಣ ಅವರ ಸಂಗೀತವಿದೆ.

    ರಾಟೆ

    ರಾಟೆ

    ಎ ಪಿ ಅರ್ಜುನ್ ನಿರ್ದೇಶನದ ರಾಟೆ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಧನಂಜಯ್, ಶೃತಿ ಹರಿಹರನ್ ಇದ್ದಾರೆ.

    ಒಗ್ಗರಣೆ

    ಒಗ್ಗರಣೆ

    ಪ್ರಕಾಶ್ ರೈ ನಿರ್ದೇಶನದ ಈ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಪ್ರಕಾಶ್ ರೈ, ಎಸ್ ಪಿ ಬಾಲಸುಬ್ರಮಣ್ಯಂ, ಸ್ನೇಹಾ ಪ್ರಸನ್ನ, ಸಂಯುಕ್ತ ಬೆಳವಾಡಿ ಮುಂತಾದವರಿದ್ದಾರೆ.

    ಅಭಿಮನ್ಯು

    ಅಭಿಮನ್ಯು

    ಅರ್ಜುನ್ ಸರ್ಜಾ ನಿರ್ದೇಶಿಸಿ, ನಿರ್ಮಿಸುತ್ತಿರುವ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಅರ್ಜುನ್ ಸರ್ಜಾ, ಸುರ್ವೀನ್ ಚಾವ್ಲಾ, ಎಂ ಎಸ್ ಜಹಗೀರ್ ಮುಂತಾದವರಿದ್ದಾರೆ.

    ಬಸವಣ್ಣ

    ಬಸವಣ್ಣ

    ಶೀರ್ಷಿಕೆ ವಿವಾದದ ಬಸವಣ್ಣ ಚಿತ್ರವನ್ನು ಶ್ರೀನಿವಾಸ ರಾಜು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ನಾಯಕ ನಟನಾಗಿ ಉಪೇಂದ್ರ ಕಾಣಿಸಿಕೊಳ್ಳಲಿದ್ದಾರೆ.

    ಬಹದ್ದೂರ್

    ಬಹದ್ದೂರ್

    ಚೇತನ್ ನಿರ್ದೇಶನದ ಬಹದ್ದೂರ್ ಚಿತ್ರದಲ್ಲಿ ಧ್ರುವ್ ಸರ್ಜಾ, ರಾಧಿಕಾ ಪಂಡಿತ್ ಪ್ರಮುಖ ಭೂಮಿಕೆಯಲ್ಲಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ನೀಡಿದ್ದಾರೆ.

    ಉಗ್ರಂ

    ಉಗ್ರಂ

    ಪ್ರಶಾಂತ್ ನೀಲ್ ನಿರ್ದೇಶನದ ಉಗ್ರಂ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಶ್ರೀಮುರಳಿ, ಹರಿಪ್ರಿಯಾ ತಿಲಕ್, ಜೈಜಗದೀಶ್, ಅವಿನಾಶ್, ಅತುಲ್ ಕುಲ್ಕರ್ಣಿ, ಪದ್ಮಜಾ ರಾವ್ ಮುಂತಾವರಿದ್ದಾರೆ.

    ನೀರ್ ದೋಸೆ

    ನೀರ್ ದೋಸೆ

    ವಿವಾದಲ್ಲಿರುವ ಈ ಚಿತ್ರವನ್ನು ವಿಜಯ್ ಪ್ರಸಾದ್ ನಿರ್ದೇಶಿಸಿದ್ದಾರೆ. ಜಗ್ಗೇಶ್, ರಮ್ಯಾ, ಸುಮನ್ ರಂಗನಾಥ್, ದತ್ತಣ್ಣ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಅನೂಪ್ ಸೀಳನ್ ಸಂಗೀತ ನೀಡಿದ್ದಾರೆ.

    ಐರಾವತ

    ಐರಾವತ

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಐರಾವತ ಚಿತ್ರದ ನಿರ್ದೇಶಕ ಎ ಪಿ ಅರ್ಜುನ್.

    English summary
    Much awaited Kannada movies of the year 2014. List include Ninnindale, Brahma, Manikya, Basavanna, Virat, Ulidavaru Kandante, Manikya etc.,
    Thursday, January 9, 2014, 16:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X