»   » ದೀಪಾವಳಿಗೆ 'ಮುಕುಂದ ಮುರಾರಿ'ಯ ದರ್ಶನ

ದೀಪಾವಳಿಗೆ 'ಮುಕುಂದ ಮುರಾರಿ'ಯ ದರ್ಶನ

Posted By: ಭರತ್ ಕುಮಾರ್
Subscribe to Filmibeat Kannada

ಇದೇ ಮೊದಲ ಬಾರಿಗೆ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಒಟ್ಟಾಗಿ ಅಭಿನಯಿಸಿರುವ 'ಮುಕುಂದ ಮುರಾರಿ' ಚಿತ್ರ ನಿರೀಕ್ಷೆಗಳ ಮಹಾಪೂರವನ್ನೇ ಹುಟ್ಟುಹಾಕಿದೆ. ಯಾಕಂದ್ರೆ ಕನ್ನಡದ ಇಬ್ಬರು ಸೂಪರ್ ಸ್ಟಾರ್ ಗಳು ಒಂದೇ ಪರದೆ ಮೇಲೆ ಕಾಣಿಸಿಕೊಂಡಿರುವುದು ಇದಕ್ಕೆ ಮುಖ್ಯ ಕಾರಣ.

ಈ ನಿರೀಕ್ಷೆಗೆ ತಕ್ಕಂತೆ ಈಗಾಗ್ಲೆ ಚಿತ್ರತಂಡದಿಂದ ಹಲವು ಸರ್ಪ್ರೈಸ್ ಕೂಡ ಹೊರ ಬಿದ್ದಿದೆ. ಇದನ್ನೆಲ್ಲ ನೋಡಿ ಚಿತ್ರದ ಬಗ್ಗೆ ಇದ್ದ ಕುತೂಹಲ ಮತ್ತಷ್ಟು ಹೆಚ್ಚಾಗಿರುವುದಂತೂ ಸುಳ್ಳಾಲ್ಲ. ಹೀಗಾಗಿ 'ಮುಕುಂದ ಮುರಾರಿ' ಯಾವಾಗ ತೆರೆಮೇಲೆ ಬರುತ್ತೆ, ಆಡಿಯೋ ಯಾವಾಗ ರಿಲೀಸ್ ಆಗುತ್ತೆ ಅಂತ ಸ್ಯಾಂಡಲ್ ವುಡ್ ಭಕ್ತರು ಕಾದು ಕುಳಿತಿದ್ದಾರೆ .['ಮುಕುಂದ ಮುರಾರಿ' ಅಡ್ಡದಿಂದ ಲೀಕ್ ಆಗಿರುವ 'ಕೃಷ್ಣ' ಸುದೀಪ್ ಫೋಟೋ ಇದೇ.! ]


ಈ ಎಲ್ಲಾ ಕುತೂಹಲಗಳಿಗೆ ಈಗ ತೆರೆಬಿದ್ದಿದ್ದು, 'ಮುಕುಂದ ಮುರಾರಿ' ಟೀಮ್ ನಿಂದ ಎಕ್ಸ್ ಕ್ಲೂಸಿವ್ ಸುದ್ದಿ ಹೊರಬಿದ್ದಿದೆ. ಹೌದು, ಚಿತ್ರದ ರಿಲೀಸ್ ಡೇಟ್ ಜೊತೆಗೆ ಕೆಲವು ಸ್ಪೆಷಾಲಿಟಿಗಳನ್ನ ಚಿತ್ರತಂಡ ರಿವೀಲ್ ಮಾಡಿದೆ. ಹಾಗಾದ್ರೆ, 'ಮುಕುಂದ ಮುರಾರಿಯ' ದರ್ಶನ ಯಾವಾಗ ಅಂತ ಇಲ್ಲಿದೆ ನೋಡಿ.


ಫಿಕ್ಸ್ ಆಯ್ತು ಆಡಿಯೋ ರಿಲೀಸ್ ಗೆ ಮುಹೂರ್ತ

ಚಿತ್ರದ ಆಡಿಯೋ ರಿಲೀಸ್ ಗೆ ಎಲ್ಲಾ ಸಿದ್ದತೆಗಳನ್ನ ಮಾಡಿಕೊಂಡಿದ್ದು ಇನ್ನೊಂದು ವಾರದಲ್ಲಿ 'ಮುಕುಂದ ಮುರಾರಿ' ಚಿತ್ರದ ಆಡಿಯೋ ಬಿಡುಗಡೆ ಮಾಡಲಿದ್ದಾರಂತೆ. ಚಿತ್ರಕ್ಕೆ ಅರ್ಜುನ ಜನ್ಯ ಸಂಗೀತ ಸಂಯೋಜನೆ ಮಾಡಿದ್ದು, 'ಮುಕುಂದ ಮುರಾರಿ'ಯ ಗಾನಸುಧೆ ಹೇಗಿರುತ್ತೆ ಎನ್ನುವ ಕುತೂಹಲ ಕಾಡುತ್ತಿದೆ.


ಇಬ್ಬರು ಸಂಗೀತ ಮಾಂತ್ರಿಕರ ಸಮ್ಮಿಲನ

ಈ ಚಿತ್ರದ ವಿಶೇಷ ಏನಪ್ಪಾ ಅಂದ್ರೆ ಒಬ್ಬ ಸಂಗೀತ ನಿರ್ದೇಶಕನ ಹಾಡು ಮತ್ತೊಬ್ಬ ಸಂಗೀತ ನಿರ್ದೇಶಕ ಖರೀದಿ ಮಾಡ್ತಿದ್ದಾರೆ. ಹೌದು, ಅರ್ಜುನ ಜನ್ಯ ಸಂಗೀತದ ಹಾಡುಗಳನ್ನ ವಿ.ಹರಿಕೃಷ್ಣ ಅವರ 'ಡಿ ಬೀಟ್ಸ್' ಆಡಿಯೋ ಸಂಸ್ಥೆಯ ಮೂಲಕ ಹೊರ ತರುತ್ತಿದ್ದಾರೆ. ಇದು ಕನ್ನಡ ಚಿತ್ರರಂಗದಲ್ಲಿ ಉತ್ತಮ ಬೆಳವಣಿಗೆಯಾಗಿದೆ.


ಸುದೀಪ್ - ಉಪೇಂದ್ರ ಜುಗಲ್ ಬಂದಿ

ನಂದಕಿಶೋರ್ ನಿರ್ದೇಶನದ ಈ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಅವರು ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಇದ್ರಿಂದ ಸಾಮಾನ್ಯವಾಗಿ ಸಿನಿ ಅಭಿಮಾನಿಗಳಲ್ಲಿ ಕಾತುರ, ಕುತೂಹಲ ಹೆಚ್ಚಾಗಿದ್ದು, ಒಂದ್ಕೆಡೆ ಉಪ್ಪಿ ಫ್ಯಾನ್ಸ್, ಮತ್ತೊಂದೆಡೆ ಕಿಚ್ಚ ಫ್ಯಾನ್ಸ್ 'ಮುಕುಂದ ಮುರಾರಿ'ಯ ಜಪ ಮಾಡ್ತಿದ್ದಾರೆ.


ಕೃಷ್ಣನ ಅವತಾರದಲ್ಲಿ ಕಿಚ್ಚ

ಈ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಶ್ರೀಕೃಷ್ಣನ ಅವತಾರದಲ್ಲಿ ಪ್ರತ್ಯಕ್ಷ ವಾಗಿದ್ದಾರೆ. ಈಗಾಗಲೇ ಕಿಚ್ಚನ ಕೃಷ್ಣ ಪರಮಾತ್ಮನ ಅವತಾರದ ಪೋಸ್ಟರ್ ಗಳು ರಿಲೀಸ್ ಆಗಿದ್ದು, ಎಲ್ಲರ ಮೆಚ್ಚುಗೆ ಗಳಿಸಿಕೊಂಡಿದೆ.


ಗೋಪಿಕೆಯರಾಗಿ ಭಾವನ, ರಚಿತಾ ರಾಮ್

ಶ್ರೀ ಕೃಷ್ಣ ಪರಮಾತ್ಮನಾಗಿ ಕಾಣಿಸಿಕೊಂಡಿರುವ ಕಿಚ್ಚ ಸುದೀಪ್ ಗೆ ಚಿತ್ರದಲ್ಲಿ ವಿಶೇಷ ಹಾಡೊಂದಿದೆ. ಈ ಹಾಡಿನಲ್ಲಿ ನಟಿ ಭಾವನ ಹಾಗೂ ಬುಲ್ ಬುಲ್ ಬೆಡಗಿ ರಚಿತಾ ರಾಮ್ ಗೋಪಿಕೆಯರಾಗಿ ಕಿಚ್ಚನ ಜೊತೆ ಹೆಜ್ಜೆ ಹಾಕಿದ್ದಾರೆ.


'ಓ ಮೈ ಗಾಡ್' ರಿಮೇಕ್

ಅಂದಾಗೆ, ಕನ್ನಡದ 'ಮುಕುಂದ ಮುರಾರಿ' ಹಿಂದಿಯ 'ಓ ಮೈ ಗಾಡ್' ಚಿತ್ರದ ರೀಮೇಕ್. ನಟ ಅಕ್ಷಯ್ ಕುಮಾರ್ ಮತ್ತು ಪರೇಶ್ ರಾವಲ್ ಅವರು ಕಾಣಿಸಿಕೊಂಡಿದ್ದ ಈ ಚಿತ್ರ, ಆಸ್ತಿಕ ಮತ್ತು ನಾಸ್ತಿಕನ ನಡುವೆ ನಡೆಯುವ ಕಥೆ. ಈ ಚಿತ್ರ ಈಗ ಕನ್ನಡದಲ್ಲಿ 'ಮುಕುಂದ ಮುರಾರಿ'ಯಾಗಿದ್ದು, ಅಕ್ಷಯ್ ಕುಮಾರ್ ಪಾತ್ರದಲ್ಲಿ ಕಿಚ್ಚ, ಪರೇಶ್ ರಾವಲ್ ಪಾತ್ರದಲ್ಲಿ ಉಪೇಂದ್ರ ಬಣ್ಣ ಹಚ್ಚಿದ್ದಾರೆ.


ದೀಪಾವಳಿಗೆ 'ಮುಕುಂದ ಮುರಾರಿ'

ಸದ್ಯದಲ್ಲೇ ಆಡಿಯೋ ರಿಲೀಸ್ ಮಾಡಲಿರುವ 'ಮುಕುಂದ ಮುರಾರಿ' ದೀಪಾವಳಿ ಹಬ್ಬದ ಪ್ರಯುಕ್ತ ತೆರೆ ಮೇಲೆ ಬರಲಿದೆ. ಹೌದು, ಅಕ್ಟೋಬರ್ 30ರಂದು ದೀಪಾವಳಿ ಹಬ್ಬವಿದ್ದು, ಎರಡು ದಿನ ಮುಂಚೆ ಅಂದ್ರೆ ಅಕ್ಟೋಬರ್ 28 ರಂದು ಚಿತ್ರಮಂದಿರಕ್ಕೆ ಬರ್ತಿದೆ.


ಕಿಚ್ಚ-ಉಪ್ಪಿ ಫ್ಯಾನ್ಸ್ ಗೆ ಪಟಾಕಿ ಹಬ್ಬ ಜೋರು

ಜಯಶ್ರೀ ದೇವಿ ಮತ್ತು ಎಂ.ಎನ್ ಕುಮಾರ್ ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಉಪೇಂದ್ರ ಜೊತೆ ನಿಖಿತಾ ತುಕ್ರಾಲ್ ಡ್ಯುಯೆಟ್ ಹಾಡುತ್ತಿದ್ದು, ನಟ ರವಿಶಂಕರ್ ಲೀಲಾನಂದ ಸ್ವಾಮೀಜಿಯಾಗಿ ಮಿಂಚಿದ್ದಾರೆ. ಹೀಗಾಗಿ ಈ ಬಾರಿಯ ದೀಪಾವಳಿ ಹಬ್ಬದಿಂದ ಈ ಇಬ್ಬರು ಸೂಪರ್ ಸ್ಟಾರ್ ಅಭಿಮಾನಿಗಳಿಗೆ ಮತ್ತಷ್ಟು ಸಂಭ್ರಮ ಹೆಚ್ಚಾಗಲಿದೆ


English summary
Kannada Actor Upendra and Kannada Actor Sudeep starrer Kannada multi starrer Movie 'Mukunda Murari'is gets a Release date. movie ll be relesing for deepavali special on october 28th. directed by nanda kishore and music done by arjun janya

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada