»   » 'ಮುರಾರಿ' ಕಿಚ್ಚ ಉಪಯೋಗಿಸಿದ್ದ ಸ್ಟೈಲಿಷ್ ಬೈಕ್ ನಿಮ್ಮದಾಗಬೇಕೆ?

'ಮುರಾರಿ' ಕಿಚ್ಚ ಉಪಯೋಗಿಸಿದ್ದ ಸ್ಟೈಲಿಷ್ ಬೈಕ್ ನಿಮ್ಮದಾಗಬೇಕೆ?

Posted By:
Subscribe to Filmibeat Kannada

'ಮುಕುಂದ ಮುರಾರಿ' ಸಿನಿಮಾದಲ್ಲಿ ಕಿಚ್ಚ ಮತ್ತು ಉಪ್ಪಿ ಅವರ ಜುಗಲ್ ಬಂದಿಗಿಂತ ಹೆಚ್ಚಾಗಿ, ಕಿಚ್ಚ ಸುದೀಪ್ ಅವರು ಉಪಯೋಗಿಸಿದ ಸ್ಟೈಲಿಷ್ ಬೈಕ್ ಎಲ್ಲರನ್ನೂ ಆಕರ್ಷಿಸಿತ್ತು.

ತೆರೆಯ ಮೇಲೆ ನೋಡಿ ವಾವ್ ಎಂದಿದ್ದವರ ಕೈಗೆ 'ಆ' ಬೈಕ್ ಸಿಕ್ಕರೆ ಹೇಗಿರಬಹುದು. ಖಂಡಿತ 'ಆ' ಬೈಕನ್ನು ಓಡಿಸೋ ಅವಕಾಶ ಇದೆ. ಈ ಅವಕಾಶವನ್ನು ಚಿತ್ರತಂಡ ಬೈಕ್ ಪ್ರಿಯರಿಗೆ ಒದಗಿಸಿಕೊಟ್ಟಿದೆ.[ಲಕ್ಷಾನುಗಟ್ಟಲೇ ಬೆಲೆಬಾಳುವ ಸ್ಟೈಲಿಷ್ ಬೈಕ್ ನಲ್ಲಿ ಕಿಚ್ಚನ ಜಾಲಿ ರೈಡ್]


ಲಕ್ಷಾನುಗಟ್ಟಲೇ ಖರ್ಚು ಮಾಡಿ, ಕಿಚ್ಚ ಸುದೀಪ್ ಅವರಿಗಂತಾನೇ ತಯಾರು ಮಾಡಿದ್ದ ಈ ಸ್ಪೆಷಲ್ ಬೈಕ್ ನೋಡಿ, ತಾವೂ ಕೂಡ ಅದರ ಮೇಲೆ ಸವಾರಿ ಮಾಡಬೇಕು ಅಂತ ಹಲವರು ಆಸೆಪಟ್ಟಿದ್ದರು. ಇದೀಗ ಕಿಚ್ಚ ಉಪಯೋಗಿಸಿದ ಬೈಕ್ ನಿಮ್ಮ ಕೈ ಸೇರುವ ದಿನ ಹತ್ತಿರವಾಗಿದೆ. ಹೇಗಪ್ಪಾ ಇದು ಅಂತ ಯೋಚಿಸಬೇಡಿ, ಮುಂದೆ ಓದಿ....


ಹರಾಜಿಗಿದೆ ಬೈಕ್

ಅಭಿಮಾನಿಗಳ ಆಸೆ ಅರಿತ 'ಮುಕುಂದ ಮುರಾರಿ' ವಿತರಕ ಜಾಕ್ ಮಂಜು, ನಿರ್ಮಾಪಕರಾದ ಎಂ.ಎನ್ ಕುಮಾರ್ ಮತ್ತು ಜಯಶ್ರೀ ದೇವಿ ಅವರು, ಕಿಚ್ಚ ಉಪಯೋಗಿಸಿದ್ದ ಸ್ಟೈಲಿಷ್ ಬೈಕ್ ಅನ್ನು ಹರಾಜಿಗಿಟ್ಟರೆ ಹೇಗೆ ಅಂತ ಯೋಚಿಸಿದ್ದಾರೆ. ಅದರಂತೆ ಇದೀಗ 'ಮುಕುಂದ ಮುರಾರಿ' ಸ್ಪೆಷಲ್ ಬೈಕ್ ಹರಾಜಿಗಿದ್ದು, ಅತೀ ಹೆಚ್ಚು ಹಣ ಬಿಡ್ ಮಾಡಿದವರಿಗೆ ಈ ಬೈಕ್ ಸೇರಲಿದೆ.[ವಿಮರ್ಶೆ: 'ಮುಕುಂದ'ನ ಸವಾಲಿಗೆ ಪರಮಾತ್ಮ 'ಮುರಾರಿ' ಪರಾರಿ....]


11 ಲಕ್ಷ ವೆಚ್ಚದ ಬೈಕ್

'ಮುಕುಂದ ಮುರಾರಿ' ಚಿತ್ರಕ್ಕಾಗಿ ಅಂತಾನೇ ನಿರ್ದೇಶಕ ನಂದ ಕಿಶೋರ್ ಅವರು, ಮುಂಬೈ ಶಾಪರ್ಸ್ ಕಂಪೆನಿಯಿಂದ ಬರೋಬ್ಬರಿ 11 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಬೈಕ್ ಅನ್ನು ವಿನ್ಯಾಸ ಮಾಡಿಸಿದ್ದರು. ಇದೀಗ ಜಾಕ್ ಮಂಜು ಅವರ ಸಲಹೆ ಮೇರೆಗೆ ಹರಾಜಿಗಿಡಲಾಗಿದೆ.['ಮುಕುಂದ ಮುರಾರಿ'ಯ ಮಾತಿನ ಸಮರಕ್ಕೆ ವಿಮರ್ಶಕರ ರೆಸ್ಪಾನ್ಸ್ ಹೇಗಿದೆ?]


ಹರಾಜಿನಲ್ಲಿ ಬಂದ ಹಣವನ್ನು ದಾನ ಮಾಡಲಾಗುತ್ತದೆ

ಬೈಕ್ ಹರಾಜಿನಲ್ಲಿ ಬಂದ ಹಣವನ್ನು, ಖುದ್ದು ಸುದೀಪ್ ಮತ್ತು ಉಪೇಂದ್ರ ಅವರು ಸಿದ್ಧಗಂಗಾ ಮಠದ ಶಾಲಾ ಮಕ್ಕಳ ಅನ್ನ ದಾಸೋಹಕ್ಕೆ ದೇಣಿಗೆಯಾಗಿ ನೀಡಲಿದ್ದಾರೆ.[ಕಿಚ್ಚ ಸುದೀಪ್ ಜೀವನದ ಗುರಿ ಏನು ಗೊತ್ತಾ?]


ಯಾವಾಗ ಹರಾಜು

ನವೆಂಬರ್ 11 ರಂದು, ಬೆಳಗ್ಗೆ 11 ಗಂಟೆಯಿಂದ 12 ಗಂಟೆಯವರೆಗೆ ಮುಖ್ಯ ಚಿತ್ರಮಂದಿರ ಮೇನಕಾ ಎದುರುಗಡೆ ಬೈಕ್ ಹರಾಜು ಕಾರ್ಯಕ್ರಮ ನಡೆಯಲಿದೆ. ನಿನ್ನೆಯಿಂದ (ನವೆಂಬರ್ 1) ಈ ಬೈಕ್ ಮೇನಕಾ ಚಿತ್ರಮಂದಿರದ ಎದುರುಗಡೆ ಪ್ರದರ್ಶನಕ್ಕಿದೆ. ಇಂದು ಮೈಸೂರು ಕಡೆ ಪ್ರಯಾಣ ಬೆಳೆಸಲಿರುವ ಈ ಬೈಕ್, ನಂತರ ಶಿವಮೊಗ್ಗ, ಹುಬ್ಬಳ್ಳಿ, ದಾವಣಗೆರೆ ಮತ್ತು ತುಮಕೂರು ಚಿತ್ರಮಂದಿರಗಳ ಮುಂದೆ ಸಂಚರಿಸಿ, ನವೆಂಬರ್ 11 ರಂದು ವಾಪಸ್ ಬೆಂಗಳೂರು ಮೇನಕಾ ಚಿತ್ರಮಂದಿರದ ಎದುರು ಬಂದು ನಿಲ್ಲಲಿದೆ.


English summary
Kannada Movie 'Mukunda Murari' producers M N Kumar and Jayasri Devi has decided to auction the famous bike that is being used in the film and donate the proceeds to charity. The auction will be held on the 11th of November and whoever calls a highest bid, the bike will be theirs.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada