»   » ಗಾಂಧಿನಗರಕ್ಕೆ 'ಸಿಂಹದ ಮರಿ' ರಾಣಿ ಸಿಮ್ರಾನ್ ರೀ ಎಂಟ್ರಿ

ಗಾಂಧಿನಗರಕ್ಕೆ 'ಸಿಂಹದ ಮರಿ' ರಾಣಿ ಸಿಮ್ರಾನ್ ರೀ ಎಂಟ್ರಿ

Posted By:
Subscribe to Filmibeat Kannada

ನಟಿ ಸಿಮ್ರಾನ್ ಗೊತ್ತಲ್ವಾ...? ಒಂದ್ಕಾಲದಲ್ಲಿ ಕಾಲಿವುಡ್ ಮತ್ತು ಟಾಲಿವುಡ್ ಚಿತ್ರರಂಗವನ್ನ ಆಳಿದ್ದ ಈ ಚೆಲುವೆ ಇದೀಗ ಸ್ಯಾಂಡಲ್ ವುಡ್ ಕಡೆ ಮತ್ತೆ ಮುಖ ಮಾಡಿದ್ದಾರೆ. 'ಅಲೋನ್' ಚಿತ್ರದಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ ಸಿಮ್ರಾನ್.

ಹೌದು, ತ್ರಿಭಾಷೆಯಲ್ಲಿ ತಯಾರಾಗುತ್ತಿರುವ 'ಅಲೋನ್' ಚಿತ್ರದಲ್ಲಿ ಸೂಪರ್ ಕಾಪ್ ಆಗಿ ಏಳು ದಿವಸಗಳ ಕಾಲ ಅಭಿನಯಿಸುವುದಕ್ಕೆ ಸಿಮ್ರಾನ್ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಕನ್ನಡದಲ್ಲಿ 1997 ರಲ್ಲಿ ಬಿಡುಗಡೆ ಆದ 'ಸಿಂಹದ ಮರಿ' ಚಿತ್ರದಲ್ಲಿ ಶಿವರಾಜ್ ಕುಮಾರ್ ಗೆ ನಾಯಕಿಯಾಗಿ ಸಿಮ್ರಾನ್ ಅಭಿನಯಿಸಿದ್ದರು.

Multilingual Actress Simran to play Super Cop in Trilingual movie Alone

ಈಗ ಕನ್ನಡ, ತಮಿಳು ಮತ್ತು ಹಿಂದಿ ಭಾಷೆಯಲ್ಲಿ ತಯಾರಾಗುತ್ತಿರುವ ಜೆಕೆ ನಿರ್ದೇಶನದ 'ಅಲೋನ್' ಮೂಲಕ ಮತ್ತೆ ಕನ್ನಡಕ್ಕೆ ಕಾಲಿಡುತ್ತಿದ್ದಾರೆ. 'ಅಲೋನ್' ಕ್ಲೈಮ್ಯಾಕ್ಸ್ ಚಿತ್ರೀಕರಣ ಏಪ್ರಿಲ್ 15 ರಿಂದ ಒಂದು ವಾರ ಕಾಲ ಚೆನ್ನೈನಲ್ಲಿರುವ ಬಿನ್ನಿಮಿಲ್ ಆವರಣದಲ್ಲಿ ನಡೆಯಲಿದೆ.

ಹಾಗ್ನೋಡಿದ್ರೆ, 'ಅಲೋನ್' ಚಿತ್ರದಲ್ಲಿ ಬಾಲಿವುಡ್ ನ ಖ್ಯಾತ ನಟ ಸುನೀಲ್ ಶೆಟ್ಟಿ ಅಭಿನಯಿಸಬೇಕಿತ್ತು. ಸೂಪರ್ ಕಾಪ್ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಬೇಕಿತ್ತು. ಆದ್ರೆ, ಕಡೆ ಕ್ಷಣದಲ್ಲಿ ಬದಲಾವಣೆಯಾಗಿದೆ. ಹಿಂದಿಯ 'ಬಾರ್ಡರ್-2' ಸಿನಿಮಾದಲ್ಲಿ ಬಿಜಿಯಾಗಿರುವ ಕಾರಣ ಸುನೀಲ್ ಶೆಟ್ಟಿ ಅವರ ಜಾಗಕ್ಕೆ ಸಿಮ್ರಾನ್ ರನ್ನ ಕರೆತರಲಾಗಿದೆ. [ಖಾಕಿ ಖದರ್ ನಲ್ಲಿ ಕನ್ನಡಕ್ಕೆ ಸುನಿಲ್ ಶೆಟ್ಟಿ ಎಂಟ್ರಿ ]

Multilingual Actress Simran to play Super Cop in Trilingual movie Alone

ಹಾರರ್ ಕಮ್ ಥ್ರಿಲ್ಲರ್ ಚಿತ್ರವಾಗಿರುವ 'ಅಲೋನ್' ನಾಯಕಿ ನಿಕಿಶಾ ಪಟೇಲ್. ಮಂಗಳೂರಿನ ಬೀಚ್ ಬಳಿ ಇರುವ ಮನೆಯಲ್ಲಿ ಬಹುತೇಕ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ವಸಿಷ್ಠ, ಗಣೇಶ್, ಸಾಧು ಕೋಕಿಲ, ತಬಲಾ ನಾಣಿ, ದಿಲೀಪ್ ಮತ್ತು ಅವಿನಾಶ್ ಉಳಿದ ತಾರಾಗಣದಲ್ಲಿದ್ದಾರೆ. (ಫಿಲ್ಮಿಬೀಟ್ ಕನ್ನಡ)

English summary
By playing a Super Cop in Trilingual movie 'Alone', Multilingual Actress Simran is making comeback to Kannada Industry. Simran has replaced Sunil Shetty in the movie which features Nikisha Patel and Vasishta in the lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada