»   » ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ ರಾಮ್ ಗೋಪಾಲ್ ವರ್ಮ

ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ ರಾಮ್ ಗೋಪಾಲ್ ವರ್ಮ

Posted By:
Subscribe to Filmibeat Kannada

ಸದಾ ಒಂದಲ್ಲ ಒಂದು ವಿವಾದಗಳನ್ನ ಮೈಮೇಲೆ ಎಳೆದುಕೊಳ್ಳುವ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮ ಈಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. 2014 ರಲ್ಲಿ ಮಾಡಿದ್ದ ಟ್ವೀಟ್ ಗೆ ಸಂಬಂಧಿಸಿದಂತೆ ಮುಂಬೈ ಕೋರ್ಟ್, ವರ್ಮ ಅವರಿಗೆ ಸಮನ್ಸ್ ಜಾರಿ ಮಾಡಿದೆ.

Mumbai Court Has Issued Summons To Filmmaker Ram Gopal Varma

2014 ರಲ್ಲಿ ಗಣಪತಿಯ ಇರುವಿಕೆ ಬಗ್ಗೆ ಪ್ರಶ್ನಿಸಿದ್ದ ವರ್ಮಾ ವಿರುದ್ಧ ಇಂಡಸ್ ಕಮ್ಯೂನಿಕೇಷನ್ಸ್ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಶೆಟ್ಟಿ ದೂರು ದಾಖಲಿಸಿದ್ದರು. ಗಣಪತಿ ದೇವರನ್ನು ಟೀಕಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 8 ರೊಳಗೆ ವಿಚಾರಣೆಗೆ ಹಾಜರಾಗುವಂತೆ ಮುಂಬೈನ ಅಂಧೇರಿಯ ಮೆಟ್ರೊಪೊಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ರಾಮ್ ಗೋಪಾಲ್ ವರ್ಮಾಗೆ ಸಮನ್ಸ್ ಜಾರಿ ಮಾಡಿದೆ.

ವರ್ಮಾ 'ಗನ್ಸ್ ಅಂಡ್ ಥೈಯ್ಸ್' ಟ್ರೈಲರ್‌ ನೋಡಿ ಕಿಡಿಕಾರಿದ ಸಿಬಿಎಫ್‌ಸಿ ಅಧ್ಯಕ್ಷ

Mumbai Court Has Issued Summons To Filmmaker Ram Gopal Varma

ಗಣೇಶನ ಬಗ್ಗೆ ರಾಮ್ ಗೋಪಾಲ್ ವರ್ಮ ಟ್ವೀಟ್ ಮಾಡಿದ್ದೇನು? ಇಲ್ಲಿದೆ ಓದಿ

''ಗಣೇಶ ಈ ದಿನದಂದು ಹುಟ್ಟಿದ ಎಂಬ ಕಾರಣಕ್ಕಾಗಿ ಗಣೇಶ ಚತುರ್ಥಿಯನ್ನು ಆಚರಿಸುತ್ತಾರೆಯೋ ಅಥವಾ ಶಿವ ಆತನ ತಲೆ ಕಡಿದ ದಿನ ಎಂದು ಈ ಆಚರಣೆ ನಡೆಸಲಾಗುತ್ತಿದೆಯೇ? ಯಾರಾದರೂ ಉತ್ತರಿಸಿ'' ಎಂದು ವರ್ಮ ಟ್ವೀಟ್ ಮಾಡಿದ್ದರು.

ಅಷ್ಟೆ ಅಲ್ಲದೇ, ''ಗಣಪತಿಯ ಸ್ವತಃ ತನ್ನ ತಲೆಯನ್ನು ಕಾಪಾಡಿಕೊಳ್ಳಲಾರದ ಗಣೇಶ ತನ್ನ ಭಕ್ತರನ್ನು ಹೇಗೆ ಕಾಪಾಡುತ್ತಾನೆ'' ಎಂದು ಪ್ರಶ್ನಿಸಿದ್ದರು.

''ನಾನು ಸನ್ನಿ ಲಿಯೋನ್ ಆಗ್ತೀನಿ'': ವರ್ಮ ಬತ್ತಳಿಕೆಯಿಂದ ಬಂದ ಹೊಸ ಅಸ್ತ್ರ.!

ವರ್ಮಾ ಅವರ ಈ ಟ್ವೀಟ್ ಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಗಣೇಶನಿಗೆ ಅವಮಾನ ಮಾಡಿದ್ದಾರೆ ಮತ್ತು ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ವಿವೇಕ್ ಶೆಟ್ಟಿ ಅವರು ದೂರು ದಾಖಲಿಸಿದ್ದರು.

English summary
A Mumbai court has issued summons to filmmaker Ram Gopal Varma for making fun of Lord Ganesha through his Twitter account.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada