»   » ಸದ್ದಿಲ್ಲದೇ ಶುರುವಾಯ್ತು 'ಮುಂಗಾರು ಮಳೆ' ಅಬ್ಬರ

ಸದ್ದಿಲ್ಲದೇ ಶುರುವಾಯ್ತು 'ಮುಂಗಾರು ಮಳೆ' ಅಬ್ಬರ

Posted By:
Subscribe to Filmibeat Kannada

2006, ಇಡೀ ಗಾಂಧಿನಗರವೇ ಬರಡು ಭೂಮಿಯಾಗಿದ್ದ ಕಾಲ. ಕಾರ್ಮೋಡ ಕವಿದಿದ್ದ ಅಂದಿದ್ದ ಸ್ಯಾಂಡಲ್ ವುಡ್ ನಲ್ಲಿ ತಂಪನೆ ಮಳೆ ಹುಯ್ದು, ರಮ್ಯಚೈತ್ರಕಾಲ ಆರಂಭಿಸಿದ ಚಿತ್ರ 'ಮುಂಗಾರು ಮಳೆ'. ಸಾಮಾನ್ಯ ಟಿವಿ ಆಂಕರ್ ಆಗಿದ್ದ 'ಕಾಮಿಡಿ ಟೈಮ್ ಗಣೇಶ್'ನನ್ನ 'ಗೋಲ್ಡನ್ ಸ್ಟಾರ್' ಪಟ್ಟಕ್ಕೇರಿಸಿದ್ದು ಇದೇ ಚಿತ್ರ.

ಈಗ 'ಮುಂಗಾರು ಮಳೆ' ಬಗ್ಗೆ ನಾವು ಇಷ್ಟೆಲ್ಲಾ ಪೀಟಿಕೆ ಹಾಕುತ್ತಿರುವುದಕ್ಕೆ ಕಾರಣ, 'ಮುಂಗಾರು ಮಳೆ-2'. ಈಗಾಗ್ಲೇ ಗಾಂಧಿನಗರದಲ್ಲಿ ಎಲ್ಲರಿಗೂ ಗೊತ್ತಿರುವಂತೆ ಮತ್ತೊಮ್ಮೆ ಮುಂಗಾರು ಮಳೆಯಲ್ಲಿ ನೆನೆಯೋಕೆ ಗಣಿ ಒಪ್ಪಿಕೊಂಡಿದ್ದಾರೆ. ಆದ್ರೆ ಅದ್ಯಾವಾಗ ಅನ್ನುವ ಪ್ರಶ್ನೆಗೆ ಇಲ್ಲಿಯವರೆಗೂ ಯಾರೂ ಉತ್ತರ ಕೊಟ್ಟಿರಲಿಲ್ಲ. [ಮತ್ತೆ 'ಮಳೆ'ಯಲ್ಲಿ ನೆನೆಯುತ್ತಾರಾ ಗಣಿ, ಭಟ್ರು..?]

ಗಣೇಶ್ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗಿದ್ದ ಪೋಸ್ಟರ್ ಒಂದನ್ನ ಬಿಟ್ರೆ 'ಮುಂಗಾರು ಮಳೆ-2' ಬಗ್ಗೆ ಮಾತೇ ಇರ್ಲಿಲ್ಲ. ಗಣಿ ಅಭಿಮಾನಿಗಳು 'ಮುಂಗಾರು ಮಳೆ-2' ಪ್ರಾಜೆಕ್ಟ್ ಅನ್ನು ಮರತೇ ಬಿಟ್ಟರು ಅನ್ನುವಷ್ಟರಲ್ಲಿ ಇದೀಗ ಬಂದಿದೇ ನೋಡಿ ಬ್ರೇಕಿಂಗ್ ನ್ಯೂಸ್! [ಶಶಾಂಕ್ ಆಕ್ಷನ್ ಕಟ್ ನಲ್ಲಿ 'ಮುಂಗಾರು ಮಳೆ 2']

ಸದ್ದಿಲ್ಲದೇ ಸೈಲೆಂಟ್ ಆಗಿ 'ಮುಂಗಾರು ಮಳೆ-2' ಚಿತ್ರದ ಪೂಜಾ ಕಾರ್ಯಗಳು ಇಂದು (ನವೆಂಬರ್ 24) ಬೆಳ್ಳಗ್ಗೆ ನೆರವೇರಿದೆ. ಅದನ್ನೆಲ್ಲಾ ಕಣ್ಣುತುಂಬಿಕೊಳ್ಳುವುದಕ್ಕೆ ಈ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.

'ಗೋಲ್ದನ್ ಸ್ಟಾರ್'ನ ಗೋಲ್ಡನ್ ಸಿನಿಮಾ

ಅದೃಷ್ಟ ಬಂದ್ರೆ ಹೀಗೆ ಬರಬೇಕು ನೋಡಿ, 'ಮುಂಗಾರು ಮಳೆ' ಸಿನಿಮಾ ಮಾಡುವಾಗ 'ಕಾಮಿಡಿ ಟೈಮ್ ಗಣೇಶ್' ರನ್ನ ಕೇಳುವವರು ಇರ್ಲಿಲ್ಲ. ಇರೋಕೆ ಸ್ವಂತ ಮನೆ ಕೂಡ ಇರ್ಲಿಲ್ಲ. ಗಾಂಧಿನಗರದಲ್ಲಿ ದೊಡ್ಡ ದೊಡ್ಡ ಕಟೌಟ್ ಹಾಕಿಸಿಕೊಳ್ಳುವ ಕನಸು ಕಾಣುತ್ತಿದ್ದ ಗಣಿ, ಇಂದು ಅದನ್ನೆಲ್ಲಾ ನನಸಾಗಿಸಿಕೊಂಡು, 'ಮುಂಗಾರು ಮಳೆ-2' ಚಿತ್ರದ ಮೂಲಕ ಮತ್ತೊಂದು ಗೋಲ್ಡನ್ ಸಿನಿಮಾ ನೀಡೋಕೆ ಸಜ್ಜಾಗಿದ್ದಾರೆ.

ಮನೆಮಟ್ಟಕ್ಕಷ್ಟೇ 'ಪೂಜೆ'

ಬಸವೇಶ್ವರ ನಗರದಲ್ಲಿರುವ ಶಶಾಂಕ್ ಆಫೀಸ್ ನಲ್ಲಿ ಇಂದು (ನವೆಂಬರ್ 24) ಬೆಳ್ಳಗ್ಗೆ 'ಮುಂಗಾರು ಮಳೆ-2' ಚಿತ್ರದ ಪೂಜಾ ಕಾರ್ಯಕ್ರಮ ಸಿಂಪಲ್ಲಾಗಿ ನಡೆದಿದೆ. ಆ ಮೂಲಕ ಪ್ರೀಪ್ರೊಡಕ್ಷನ್ ಕಾರ್ಯಗಳಿಗೆ ಮತ್ತು ಸ್ಕ್ರಿಪ್ಟ್ ಬರೆಯುವುದಕ್ಕೆ ದೇವರ ಅನುಗ್ರಹವನ್ನ ಪಡೆದುಕೊಂಡಿದೆ ಚಿತ್ರತಂಡ. ನಿರ್ಮಾಪಕ ಇ.ಕೃಷ್ಣಪ್ಪ, ನಿರ್ದೇಶಕ ಶಶಾಂಕ್ ಸೇರಿದಂತೆ ಗಣಿ ಆಪ್ತೇಷ್ಠರಷ್ಟೇ ಈ ಪೂಜೆಯಲ್ಲಿ ಭಾಗವಹಿಸಿದ್ದರು.

ಮುಂಗಾರು ಮಳೆ 'ಸೀಕ್ವೆಲ್' ಅಲ್ಲಾ..!

ಮುಂಗಾರು ಮಳೆ-2 ಅಂತ ಹೆಸ್ರಿಟ್ಟ ಮಾತ್ರಕ್ಕೆ ಇದು ಮುಂಗಾರು ಮಳೆ ಚಿತ್ರದ ಸೀಕ್ವೆಲ್ ಅಲ್ಲ. ''ಇದು ಕಂಪ್ಲೀಟ್ ಫ್ರೆಶ್ ಸ್ಟೋರಿ. ಮೊದಲಿನ 'ಮುಂಗಾರು ಮಳೆ'ಗೂ ಈ ಚಿತ್ರಕ್ಕೂ ಸಂಬಂಧ ಇರುವುದಿಲ್ಲ. ಅದರ ಮುಂದುವರಿದ ಭಾಗ ಅಂತೂ ಅಲ್ಲವೇ ಅಲ್ಲ. ಇದು ರೋಮ್ಯಾಂಟಿಕ್ ಲವ್ ಸ್ಟೋರಿ'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ನಿರ್ದೇಶಕ ಶಶಾಂಕ್ ತಿಳಿಸಿದರು.

ಹಾಗಾದ್ರೆ ಮೊಲ..? ಮಳೆ..?

'ಮುಂಗಾರು ಮಳೆ' ಚಿತ್ರದ ಮುಂದುವರಿದ ಭಾಗ ಅಲ್ಲದೇ ಇದ್ದರೂ, ಈ ಚಿತ್ರದಲ್ಲೂ ಮಳೆ ಸುರಿಯಲಿದೆ. 'ಮೊಲ' ಬೇಕಾ? ಬೇಡ್ವಾ? ಅನ್ನೋದಿನ್ನೂ ನಿರ್ಧಾರ ಮಾಡಿಲ್ಲ. ಆದರೆ, ಗಣೇಶ್ ಇಮೇಜ್ ಗೆ ತಕ್ಕಂತೆ ಡೈಲಾಗ್ಸ್, ಮ್ಯೂಸಿಕ್ ಎಲ್ಲವೂ ಇರಲಿದೆ ಅಂತಾರೆ ನಿರ್ದೇಶಕ ಶಶಾಂಕ್

'ಗಣಿ' ಜೊತೆ ನೆನೆಯೋದು ಯಾರು?

''ಮುಂಗಾರು ಮಳೆ-2'' ನಲ್ಲಿ ಗಣಿ ಜೊತೆ ಮಳೆಯಲ್ಲಿ ನೆನೆಯೋ ಹೀರೋಯಿನ್ ಇನ್ನೂ ಫೈನಲ್ ಆಗಿಲ್ಲ. ಸ್ಕ್ರಿಪ್ಟ್ ಕಂಪ್ಲೀಟ್ ರೆಡಿಯಾದ್ಮೇಲೆ ಹೀರೋಯಿನ್ ಸೇರಿದಂತೆ ಇಡೀ ಚಿತ್ರತಂಡವನ್ನ ಸೆಲೆಕ್ಟ್ ಮಾಡಲಾಗುವುದು ಅಂತ ಶಶಾಂಕ್ ಹೇಳಿದರು.

'ಅಭಿನೇತ್ರಿ ಪೂಜಾ ಗಾಂಧಿಗೆ ಇದ್ಯಾ ಚಾನ್ಸ್?

ಮುಂಗಾರು ಮಳೆ-2 ನಲ್ಲಿ ಗಣೇಶ್ ನೆನೆಯೋದು ಪಕ್ಕಾ. ಹೀರೋಯಿನ್ ಬೇರೆಯಾದರೂ, ಸಿನಿಮಾದಲ್ಲಿ ಪೂಜಾ ಗಾಂಧಿ ಕಾಣಿಸಿಕೊಳ್ತಾರಾ. ಹಳೇ ನೆನಪು ಅಂತ ವಿಶೇಷ ಪಾತ್ರವೊಂದ್ರಲ್ಲಿ ಬಂದು ಹೋಗ್ತಾರಾ ಅನ್ನೋ ಪ್ರಶ್ನೆಗಳು ಮೂಡೋದು ಸಹಜ ಆದ್ರೆ ಇದ್ಯಾವುದರ ಬಗ್ಗೆಯೂ ಶಶಾಂಕ್ ಯೋಚಿಸಿಲ್ಲ.

ಭಟ್ರಲ್ಲ.. ಶಶಾಂಕ್..!

ಎರಡನೇ ಬಾರಿ ಗಾಂಧಿನಗರದಲ್ಲಿ 'ಮುಂಗಾರು ಮಳೆ'ಯನ್ನ ಸುರಿಸುತ್ತಿರುವುದು ನಿರ್ದೇಶಕ ಶಶಾಂಕ್. ಇ.ಕೃಷ್ಣಪ್ಪ ಕೃಪೆಯಿಂದಲೇ ಗಾಂಧಿನಗರಕ್ಕೆ ಬಂದ ಶಶಾಂಕ್, ಇದೀಗ ಅವರ ಸಲಹೆಯ ಮೇರೆಗೆ ಮುಂಗಾರು ಮಳೆ-2 ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ''ಇ.ಕೃಷ್ಣಪ್ಪ ನಂಗೆ ಈ ಆಫರ್ ಕೊಟ್ಟಾಗ ತುಂಬಾ ಖುಷಿಯಾಯ್ತು. ಹೆಮ್ಮೆ ಇಂದ ಒಪ್ಪಿಕೊಂಡೆ'' ಅಂತ 'ಫಿಲ್ಮಿಬೀಟ್ ಕನ್ನಡ' ಜೊತೆ ಸಂತಸ ಹಂಚಿಕೊಂಡರು ನಿರ್ದೇಶಕ ಶಶಾಂಕ್.

ಇ.ಕೃಷ್ಣಪ್ಪ ನಿರ್ಮಾಣ

ಗಣೇಶ್ ಗೆ ಟರ್ನಿಂಗ್ ಪಾಯಿಂಟ್ ಕೊಟ್ಟ 'ಮುಂಗಾರು ಮಳೆ', ಯಶ್ ಮತ್ತು ರಾಧಿಕಾ ಪಂಡಿತ್ ಗೆ ಗಾಂಧಿನಗರದಲ್ಲಿ ನೆಲೆಯೂರುವುದಕ್ಕೆ ಅಡಿಪಾಯ ಹಾಕಿದ 'ಮೊಗ್ಗಿನ ಮನಸ್ಸು' ಚಿತ್ರಗಳನ್ನ ನಿರ್ಮಿಸಿದ ಇ.ಕೃಷ್ಣಪ್ಪ ಬ್ಯಾನರ್ ನಡಿ ಜಿ.ಗಂಗಾಧರ್ ಮುಂಗಾರು ಮಳೆ-2 ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ.

ಏಪ್ರಿಲ್ ನಲ್ಲಿ ಶೂಟಿಂಗ್

ಇವತ್ತಿಂದ ಅಧಿಕೃತವಾಗಿ ಸ್ಕ್ರಿಪ್ಟ್ ಕೆಲಸಕ್ಕೆ ಚಾಲನೆ ಕೊಟ್ಟಿರುವ ಶಶಾಂಕ್, 2015ರ ಏಪ್ರಿಲ್ ನಲ್ಲಿ ಶೂಟಿಂಗ್ ಗೆ ಚಾಲನೆ ನೀಡಲಿದ್ದಾರೆ. ಅಲ್ಲಿಗೆ ಮುಂದಿನ ವರ್ಷ ಮತ್ತೊಂದು ಮುಂಗಾರು ಮಳೆಯ ಮೂಲಕ ಗಾಂಧಿನಗರದಲ್ಲಿ ಭರ್ಜರಿ ಬೆಳೆ ಬೆಳೆಯೋದು ಗ್ಯಾರೆಂಟಿ.

English summary
Golden Star Ganesh starrer Mungaru Male-2 film pooja happened today (November 24th) morning in a very simple manner. Hence, the pre-production work of Mungaru Male-2 has officially started.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada