»   » ಕನ್ನಡಕ್ಕೆ ಕಾಲಿಟ್ಟ ಖ್ಯಾತ ಬಾಲಿವುಡ್ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ

ಕನ್ನಡಕ್ಕೆ ಕಾಲಿಟ್ಟ ಖ್ಯಾತ ಬಾಲಿವುಡ್ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ

Posted By:
Subscribe to Filmibeat Kannada

ಬಾಲಿವುಡ್ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕರಲ್ಲಿ ಅಮಿತ್ ತ್ರಿವೇದಿ ಕೂಡ ಒಬ್ಬರು. ಸದ್ಯ ಬಿ ಟೌನ್ ನಲ್ಲಿ ಇರುವ ಟ್ರೆಂಡ್ ಪ್ರಕಾರ ಅಮಿತ್ ತ್ರಿವೇದಿ ಅವರಿಗೆ ತುಂಬ ಡಿಮ್ಯಾಂಡ್ ಇದೆ. ಆದರೆ ಇದೀಗ ಈ ಖ್ಯಾತ ಸಂಗೀತ ನಿರ್ದೇಶಕ ಕನ್ನಡಕ್ಕೆ ಕಾಲಿಟ್ಟಿದ್ದಾರೆ.

ಸಂದರ್ಶನ : ಇಂದಿನ ಸಮಾಜದ ಪ್ರತಿಬಿಂಬವೇ ಈ 'ಬಟರ್ ಫ್ಲೈ'

ಅಮಿತ್ ತ್ರಿವೇದಿ 'ಬಟರ್ ಫ್ಲೈ' ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದಾರೆ. ಮಾತ್ರವಲ್ಲದೆ ಈ ಮೂಲಕ ಅವರು ದಕ್ಷಿಣ ಭಾರತ ಚಿತ್ರರಂಗಕ್ಕೆ ಸಹ ಎಂಟ್ರಿಯಾಗುತ್ತಿದ್ದಾರೆ. ಬಾಲಿವುಡ್ ನಲ್ಲಿ ಕ್ವೀನ್, ಸೀಕ್ರೆಟ್ ಸೂಪರ್ ಸ್ಟಾರ್, ಹೈವೆ, ಡಿಯರ್ ಜಿಂದಗಿ, ಇಂಗ್ಲೀಷ್ ವಿಂಗ್ಲೀಷ್ ಸೇರಿದಂತೆ ಸಾಕಷ್ಟು ಚಿತ್ರಗಳಿಗೆ ಅಮಿತ್ ತ್ರಿವೇದಿ ಸಂಗೀತ ನೀಡಿದ್ದಾರೆ.

Music director Amit Trivedi debuts in Sandalwood

'ಬಟರ್ ಫ್ಲೈ' ಸಿನಿಮಾ ಹಿಂದಿಯ 'ಕ್ವೀನ್' ಚಿತ್ರದ ರಿಮೇಕ್ ಆಗಿದೆ. ಈ ಕಾರಣ 'ಕ್ವೀನ್' ಚಿತ್ರಕ್ಕೆ ಸಂಗೀತ ನೀಡಿದ್ದ ಅಮಿತ್ ತ್ರಿವೇದಿ ಅವರನ್ನೇ 'ಬಟರ್ ಪ್ಲೈ' ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ. ಈ ಸಿನಿಮಾ ತಮಿಳಿನಲ್ಲಿ 'ಪ್ಯಾರಿಸ್ ಪ್ಯಾರಿಸ್', ತೆಲುಗಿನಲ್ಲಿ 'ಒನ್ಸ್ ಅಗೈನ್ ಕ್ವೀನ್' ಮತ್ತು ಮಲೆಯಾಳಂ ನಲ್ಲಿ 'ಜಮ್ ಜಮ್' ಎಂಬ ಹೆಸರಿನಲ್ಲಿ ಬರಲಿದೆ. ಕನ್ನಡ ವರ್ಷನ್ 'ಕ್ವೀನ್' ಚಿತ್ರಕ್ಕೆ ರಮೇಶ್ ಅರವಿಂದ್ ನಿರ್ದೇಶನ ಮಾಡುತ್ತಿದ್ದಾರೆ. ಪಾರೂಲ್ ಯಾದವ್ ಚಿತ್ರದ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Music director Amit Trivedi debuts in Sandalwood

ಅಮಿತ್ ತ್ರಿವೇದಿ ನೀಡಿದ್ದ 'ಕ್ವೀನ್' ಹಾಡುಗಳು ಸೂಪರ್ ಹಿಟ್ ಆಗಿತ್ತು. ಈಗ ಕನ್ನಡದ 'ಬಟರ್ ಪ್ಲೈ' ಚಿತ್ರಕ್ಕೂ ಅವರೇ ಸಂಗೀತ ನೀಡಿದ್ದು, ಎಲ್ಲ ಹೊಸ ಹಾಡುಗಳನ್ನು ಕಂಪೋಸ್ ಮಾಡಲಾಗುತ್ತಿದೆ. ಜಯಂತ್ ಕಾಯ್ಕಿಣಿ ಆರು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಸದ್ಯ ಈ ಚಿತ್ರದ 80 ರಷ್ಟು ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲಿಯೇ ಆಡಿಯೋ ಬಿಡುಗಡೆ ಆಗಲಿದೆ.

English summary
Bollywood popular music director Amit Trivedi debuts in Sandalwood. Amit Trivedi gave music to actress Parul Yadav's 'Butterfly' kannada movie. The movie is directed by Ramesh Aravind.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X