For Quick Alerts
  ALLOW NOTIFICATIONS  
  For Daily Alerts

  ಸಲಿಕೆ ಹಿಡಿದು ರಸ್ತೆ ರಿಪೇರಿ ಮಾಡಿದ ನಾದಬ್ರಹ್ಮ ಹಂಸಲೇಖ

  |

  ಹಾರ್ಮೋನಿಯಂ, ಕೀಬೋರ್ಡ್ ಹಿಡಿದು ನಾದಲೋಕ ಸೃಷ್ಟಿಸುವ ನಾದಬ್ರಹ್ಮ ಹಂಸಲೇಖ ಇಂದು ಸಲಿಕೆ-ಗುದ್ದಲಿ ಹಿಡಿದು ರಸ್ತೆ ಇಳಿದಿದ್ದರು.

  ಬೆಂಗಳೂರು ಅಂತರ ರಾಷ್ಟ್ರೀಯ ಸಿನಿಮೋತ್ಸವಕ್ಕೆ ಚಾಲನೆ ಕೊಟ್ಟ ಸಿಎಂ ಹಾಗು ಯಶ್ | Yediyurappa | Yash | Jayapradha

  ಹೌದು, ಚಂದನವನದ ಸಂಗೀತ ಸಾಮ್ರಾಟ ಹಂಸಲೇಖ ಅವರು ಸಲಿಕೆ ಹಿಡಿದು ತಮ್ಮ ಮನೆ ಎದುರಿನ ರಸ್ತೆಯನ್ನು ರಿಪೇರಿ ಮಾಡಿದ್ದಾರೆ.

  ಕೊರೊನಾ ಲಾಕ್‌ಡೌನ್‌ನಿಂದಾಗಿ ಸೆಲೆಬ್ರಿಟಿಗಳೆಲ್ಲಾ ಅಡುಗೆ ಮಾಡುವ, ವರ್ಕ್‌ಔಟ್ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದರೆ, ಹಂಸಲೇಖ ಏರಿಯಾದ ರಸ್ತೆ ಸರಿಮಾಡುವ ಕಾರ್ಯ ಮಾಡಿದ್ದಾರೆ.

  ರಸ್ತೆ ಗುಂಡಿ ಮುಚ್ಚಿದ ಹಂಸಲೇಖ

  ರಸ್ತೆ ಗುಂಡಿ ಮುಚ್ಚಿದ ಹಂಸಲೇಖ

  ಮಹಾಲಕ್ಷ್ಮಿ ಲೇಔಟ್‌ನ ಹಂಸಲೇಖ ಮನೆಯಿರುವ ರಸ್ತೆ ಗುಂಡಿಗಳಾಗಿ ಹಾಳಾಗಿತ್ತು, ಅದನ್ನು ರಿಪೇರಿ ಮಾಡಲೆಂದು ಬಿಬಿಎಂಪಿ ಅವರು ಜಲ್ಲಿಕಲ್ಲು ತಂದು ಸುರುಹಿದ್ದರು. ಆದರೆ ಕೆಲಸ ಆರಂಭವಾಗಿರಲಿಲ್ಲ.

  ತಾವೇ ರಸ್ತೆಗಿಳಿದ ಹಂಸಲೇಖ

  ತಾವೇ ರಸ್ತೆಗಿಳಿದ ಹಂಸಲೇಖ

  ಅದಕ್ಕೆಂದು ಇಂದು ತಾವೇ ರಸ್ತೆಗೆ ಇಳಿದ ಹಂಸಲೇಖ, ಸಲಿಕೆಯಲ್ಲಿ ಜಲ್ಲಿಕಲ್ಲು ತುಂಬಿ ರಸ್ತೆಗೆ ಹಾಕಿ ಗುಂಡಿ ಮುಚ್ಚಿ, ಅದನ್ನು ಕಾಂಕ್ರಿಟ್ ಸ್ಪ್ರೇ ಮಾಡಿ ರಸ್ತೆ ರಿಪೇರಿ ಮಾಡಿದ್ದಾರೆ.

  ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ವಿಡಿಯೋ

  ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ವಿಡಿಯೋ

  ಹಂಸಲೇಖ ಅವರು ರಸ್ತೆ ರಿಪೇರಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ''ಹಳ್ಳಿಯಾದರೇನು ಶಿವ ದಿಲ್ಲಿಯಾದರೇನು ಶಿವ'' ಎಂದು ಉತ್ಸಾಹದಿಂದ ಹಂಸಲೇಖ ಕೆಲಸ ಮಾಡುತ್ತಿರುವ ವಿಡಿಯೋ ಯುವಕರನ್ನೂ ನಾಚಿಸುವಂತಿದೆ.

  ಬಾಯ್ ಬಾಯ್ ಕೊರೊನಾ ಹಾಡು

  ಬಾಯ್ ಬಾಯ್ ಕೊರೊನಾ ಹಾಡು

  ಹಂಸಲೇಖ ಅವರು ಇತ್ತೀಚೆಗಷ್ಟೆ ಕೊರೊನಾ ಕುರಿತ ಹಾಡೊಂದನ್ನು ಸಹ ರಚಿಸಿದ್ದರು. ಅದನ್ನು ಅವರ ಮನೆಯವರೆಲ್ಲಾ ಸೇರಿ ಹಾಡಿದ್ದರು. 'ಬಾಯ್ ಬಾಯ್ ಕೊರೊನಾ' ಎನ್ನುವ ಹಾಡು ಜನಪ್ರಿಯವಾಗಿತ್ತು.

  English summary
  Music director Hamsalekha repair road in Mahalakshmi Layout. His video of repairing road circulating in social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X