»   » ಇಳಯರಾಜಾ ಪುತ್ರ ಇಸ್ಲಾಂಗೆ ಮತಾಂತರ

ಇಳಯರಾಜಾ ಪುತ್ರ ಇಸ್ಲಾಂಗೆ ಮತಾಂತರ

Posted By:
Subscribe to Filmibeat Kannada

ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲಿದ್ದಾರೆ. 35 ವರ್ಷ ವಯಸ್ಸಿನ ಯುವನ್ ಶಂಕರ್ ರಾಜ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರ ಪುತ್ರ.

ಮೈಕ್ರೋ ಬ್ಲಾಗಿಂಗ್ ಟ್ವಿಟರ್ ನಲ್ಲಿ ನಾನು ಇಸ್ಲಾಂ ಧರ್ಮದ ಹಿಂಬಾಲಕನಾಗಿದ್ದು, ಅದಕ್ಕಾಗಿ ನನಗೆ ಹೆಮ್ಮೆಯಿದೆ ಎಂದು ಬರೆದು ಕೊಂಡಿದ್ದಾರೆ. ಈ ವಿಚಾರದಲ್ಲಿ ನನ್ನ ಮತ್ತು ನನ್ನ ತಂದೆಯ ನಡುವೆ ಭಿನ್ನಾಬಿಪ್ರಾಯವಿಲ್ಲ ಎಂದು ಯುವನ್ ಶಂಕರ್ ರಾಜ್ ಹೇಳಿದ್ದಾರೆ. (ಸಂಗೀತ ಮಾಂತ್ರಿಕ ಇಳಯರಾಜಾಗೆ ಹೃದಯಾಘಾತ)

ಕನ್ನಡ ಸಹಿತ ಸುಮಾರು ನೂರಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿರುವ ಯುವನ್ ಶಂಕರ್ ರಾಜ, ತನ್ನ ತಾಯಿ ಅಕ್ಟೋಬರ್ 2011ರಲ್ಲಿ ನಿಧನ ಹೊಂದಿದ ನಂತರ ಸ್ವಲ್ಪ ಮಟ್ಟಿನ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗುತ್ತಿದೆ.

ಈ ಸಮಯದಲ್ಲಿ ಇಸ್ಲಾಂ ಧಾರ್ಮಿಕ ಮುಖಂಡರನ್ನು ಭೇಟಿಯಾಗಿ ಯುವನ್ ಶಂಕರ್ ರಾಜ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ. ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲು ಯುವನ್ ಅವರಿಗೆ ಏನು ಪ್ರೇರಣೆಯಾಯಿತು ಎನ್ನುವ ವಿಚಾರ ಇನ್ನೂ ಖಚಿತ ಪಟ್ಟಿಲ್ಲ.

ಎ ಆರ್ ರೆಹಮಾನ್ ಪ್ರೇರಣೆಯಾದರೇ? ಮುಂದೆ ಓದಿ..

ಯುವನ್ ಶಂಕರಿಗೆ ರೆಹಮಾನ್ ಪ್ರೇರಣೆ

ಆಸ್ಕರ್ ಪ್ರಶಸ್ತಿ ವಿಜೇತ, ಖ್ಯಾತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಅವರು ಯುವನ್ ಶಂಕರ್ ರಾಜ ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಳ್ಳಲು ಪ್ರೇರಣೆಯಾಗಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಆದರೆ ಕೆಲವು ಮೂಲಗಳು ಇದನ್ನು ನಿರಾಕರಿಸಿವೆ.

ದಿನಕ್ಕೆ ಐದು ಬಾರಿ ನಮಾಜ್

ಒಂದು ವರ್ಷದಿಂದ ಇಸ್ಲಾಂ ಧರ್ಮದ ಪದ್ದತಿಯ ಬಗ್ಗೆ ಯುವನ್ ಶಂಕರ್ ರಾಜ ತರಬೇತಿ ಪಡೆಯುತ್ತಿದ್ದಾರೆ. ದಿನವೊಂದಕ್ಕೆ ಐದು ಬಾರಿ ನಮಾಜ್ ಮಾಡುತ್ತಿದ್ದಾರೆ. ತನ್ನ ಬ್ಯೂಸಿ ಕೆಲಸದ ಒತ್ತಡದ ನಡುವೆಯೂ ನಮಾಜ್ ಮಾತ್ರ ಯುವನ್ ತಪ್ಪಿಸುತ್ತಿಲ್ಲ ಎನ್ನುತ್ತವೆ ಮೂಲಗಳು.

ಯುವನ್ ಶಂಕರ್ ಹೆಸರು ಬದಲಾವಣೆ

ಇಳಯರಾಜ ಪುತ್ರ ಯುವನ್ ಶಂಕರ್ ರಾಜ ಅಧಿಕೃತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ನಂತರ ತನ್ನ ಹೆಸರನ್ನು ಬದಲಾಯಿಸಿ ಕೊಳ್ಳುತ್ತಾರಾ ಎನ್ನುವುದು ಸದ್ಯಕ್ಕಿರುವ ಪ್ರಶ್ನೆ. ಆದರೆ ಈ ಬಗ್ಗೆ ನಾನು ಏನೂ ನಿರ್ಧಾರ ತೆಗೆದು ಕೊಂಡಿಲ್ಲ ಎಂದು ಯುವನ್ ಶಂಕರ್ ರಾಜ ಹೇಳಿದ್ದಾರೆ.

ಯುವನ್ ಸಂಗೀತ ರಸದೌತಣ

ಯುವನ್ ಶಂಕರ್ ರಾಜ ಇದುವರೆಗೆ ನೂರಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಪ್ರಮುಖವಾಗಿ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಇವರದ್ದು ಬಹುದೊಡ್ಡ ಹೆಸರು.

ಕನ್ನಡದಲ್ಲೂ ಯುವನ್

1997ರಲ್ಲಿ ತಮಿಳು ಚಿತ್ರದ ಮೂಲಕ ಸಂಗೀತ ನಿರ್ದೇಶಿಸಲು ಯುವನ್ ಶಂಕರ್ ರಾಜ ಆರಂಭಿಸಿದ್ದಾರೆ. ಗಿಲ್ಲಿ, ಮದನ, ಮಿಂಚು, ಅಂತೂ ಇಂತೂ ಪ್ರೀತಿ ಬಂತು ಚಿತ್ರಕ್ಕೆ ಯುವನ್ ಸಂಗೀತ ನೀಡಿದ್ದಾರೆ. ಈ ವರ್ಷ ಸೆಟ್ಟೇರಲಿರುವ ಚಿರಂಜೀವಿ ಸರ್ಜಾ ಪ್ರಮುಖ ಭೂಮಿಕೆಯಲ್ಲಿರುವ, ಮಹೇಶ್ ಬಾಬು ನಿರ್ದೇಶನದ ಅಜಿತ್ ಚಿತ್ರಕ್ಕೂ ಯುವನ್ ಶಂಕರ್ ರಾಜ ಸಂಗೀತ ನೀಡಲಿದ್ದಾರೆ.

English summary
Legendary music director Ilayaraja son Yuvan Shankar Raja all set to convert to Islam.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada