For Quick Alerts
  ALLOW NOTIFICATIONS  
  For Daily Alerts

  ಕಿಚ್ಚನ 'ಕೋಟಿಗೊಬ್ಬ 2' ನಲ್ಲಿ 'ಹರ್ಡಿ-ಗರ್ಡಿ' ಏನಿದು?

  By Suneetha
  |

  ಸಂಗೀತ ಉಪಕರಣಗಳಲ್ಲಿ ಒಂದಾದ ಹರ್ಡಿ-ಗರ್ಡಿ ಬಗ್ಗೆ ಗೊತ್ತಾ? ಯಾರಿಗೂ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಾ ಎಂದೆನಿಸುತ್ತದೆ. ಇದು ವಿದೇಶದ ಫ್ರಾನ್ಸ್ ಮತ್ತು ಯುರೋಪಿನ ಕೆಲ ಭಾಗಗಳಲ್ಲಿ ಬಳಕೆಯಲ್ಲಿದ್ದು, ಭಾರತದಲ್ಲಿ ಇಲ್ಲಿಯವರೆಗೆ ಅಷ್ಟಾಗಿ ಕಂಡುಬಂದಿಲ್ಲ.

  ಅಂದಹಾಗೆ ಈ 'ಹರ್ಡಿ-ಗರ್ಡಿ' ಬಗ್ಗೆ ಈಗ್ಯಾಕೆ ಮಾತು ಅಂತ ಯೋಚನೆ ಮಾಡುತ್ತಿದ್ದೀರಾ? ಯಾಕೆಂದರೆ ಮೊಟ್ಟ ಮೊದಲ ಬಾರಿಗೆ ಈ ಸಂಗೀತ ವಾದ್ಯವನ್ನು ಕನ್ನಡ ಚಿತ್ರವೊಂದರಲ್ಲಿ ಬಳಸಿಕೊಳ್ಳಲಾಗಿದೆ. ಇದನ್ನು ಯುರೋಪಿನಿಂದ ತರಿಸಿ, ನುಡಿಸಲು ಸಂಗೀತಗಾರರನ್ನು ಕೂಡ ಅಲ್ಲಿಂದಲೇ ಕರೆಸಲಾಗಿದೆ.[ಸುದೀಪ್ 'ಕೋಟಿಗೊಬ್ಬ-2' ಪೋಸ್ಟರ್ ಟ್ವಿಟ್ಟರ್ ನಲ್ಲಿ ಟಾಪ್ ಟ್ರೆಂಡಿಂಗ್]

  ಹೌದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಖ್ಯಾತ ನಟಿ ನಿತ್ಯಾ ಮೆನನ್ ಕಾಣಿಸಿಕೊಂಡಿರುವ ಬಹುನಿರೀಕ್ಷಿತ 'ಕೋಟಿಗೊಬ್ಬ 2' ಚಿತ್ರದ ಟೈಟಲ್ ಹಾಡಿನಲ್ಲಿ 'ಹರ್ಡಿ-ಗರ್ಡಿ' ಸಂಗೀತ ಉಪಕರಣವನ್ನು ಬಳಸಿಕೊಳ್ಳಲಾಗಿದೆ.

  ಸಂಗೀತ ನಿರ್ದೇಶಕ ಡಿ.ಇಮಾನ್ ಮ್ಯೂಸಿಕ್ ಕಂಪೋಸ್ ಮಾಡಿರುವ ಈ ಹಾಡಿಗೆ 'ಹರ್ಡಿ-ಗರ್ಡಿ' ಎಂಬ ವಿಶೇಷ ಸಂಗೀತ ವಾದ್ಯ ಬಳಸಿಕೊಳ್ಳಲಾಗಿದೆ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿರುವ ಈ ಹಾಡಿಗೆ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಕೊರಿಯೋಗ್ರಫಿ ಮಾಡಿದ್ದಾರೆ. ಇತ್ತೀಚೆಗಷ್ಟೇ ಈ ಹಾಡಿನ ಚಿತ್ರೀಕರಣ ಪೂರ್ತಿಗೊಂಡಿದೆ.[ಚಿತ್ರಗಳು: 'ಕೋಟಿಗೊಬ್ಬ 2' ನಿರ್ದೇಶಕರ ಮಗಳ ಮದುವೆಯಲ್ಲಿ ಸುದೀಪ್ ಭಾಗಿ]

  ಖ್ಯಾತ ನಿರ್ದೇಶಕ ಕೆ.ಎಸ್ ರವಿಕುಮಾರ್ ನಿರ್ದೇಶನ ಮಾಡಿ, ನಿರ್ಮಾಪಕ ಸೂರಪ್ಪ ಬಾಬು ಬಂಡವಾಳ ಹೂಡಿರುವ ಈ ಚಿತ್ರ ಕನ್ನಡ ಮತ್ತು ತಮಿಳು ಎರಡು ಭಾಷೆಯಲ್ಲೂ ಏಕಕಾಲದಲ್ಲಿ ತೆರೆ ಕಾಣುತ್ತಿದೆ. ಈಗಾಗಲೇ ಚಿತ್ರದ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು, ಸದ್ಯದಲ್ಲೇ ಆಡಿಯೋ ಬಿಡುಗಡೆ ಕಾರ್ಯಕ್ರಮ ನೆರವೇರಲಿದೆ.

  English summary
  The specialised and very rare music instrument Hurdy-gurdy has been used for the first time for a film song in India for Sudeep's Kotigobba2. The instrument's music can be heard in the title song of the film composed by D Imman. The movie is directed by KS Ravikumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X