For Quick Alerts
  ALLOW NOTIFICATIONS  
  For Daily Alerts

  ಮಂಡ್ಯದಲ್ಲಿ 'ಕಿರಾತಕ'ನ ಹಾವಳಿ: ಯಶ್ ಜೊತೆ ಕುರಿ ಪ್ರತಾಪ್ ಕಾಮಿಡಿ.!

  By Harshitha
  |
  ಯಶ್ ಸಿನಿಮಾದಲ್ಲಿ ಇವರೆಲ್ಲಾ ಇರಲಿದ್ದಾರೆ..! | Filmibeat Kannada

  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ಕೆ.ಜಿ.ಎಫ್' ಶೂಟಿಂಗ್ ಕಂಪ್ಲೀಟ್ ಆಗಿದೆ. ವರಮಹಾಲಕ್ಷ್ಮಿ ಹಬ್ಬದ ಶುಭ ಸಂದರ್ಭದಂದು ಹೊಸ ಸಿನಿಮಾ 'ಮೈ ನೇಮ್ ಈಸ್ ಕಿರಾತಕ'ಗೆ ನಟ ಯಶ್ ಚಾಲನೆ ಕೊಟ್ಟಿದ್ದಾರೆ.

  'ಮೈ ನೇಮ್ ಈಸ್ ಕಿರಾತಕ'ಗಾಗಿ ಹೊಸ ಅವತಾರ ತಾಳಿರುವ ಯಶ್, ಸೆಪ್ಟೆಂಬರ್ 3 ರಿಂದ ಇದೇ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಮಂಡ್ಯದ ಸುತ್ತ ಮುತ್ತ ಹಾಗೂ ದುಬೈನಲ್ಲಿ 'ಮೈ ನೇಮ್ ಈಸ್ ಕಿರಾತಕ' ಚಿತ್ರದ ಶೂಟಿಂಗ್ ನಡೆಯಲಿದೆ.

  ಗಡ್ಡಕ್ಕೆ ಕತ್ತರಿ ಬಿದ್ದ ಬೆನ್ನಲ್ಲೆ ಹೊಸ ಸಿನಿಮಾ ಆರಂಭಿಸಿದ ರಾಕಿಂಗ್ ಸ್ಟಾರ್ಗಡ್ಡಕ್ಕೆ ಕತ್ತರಿ ಬಿದ್ದ ಬೆನ್ನಲ್ಲೆ ಹೊಸ ಸಿನಿಮಾ ಆರಂಭಿಸಿದ ರಾಕಿಂಗ್ ಸ್ಟಾರ್

  ಹಾಗ್ನೋಡಿದ್ರೆ, 'ಕಿರಾತಕ' ಚಿತ್ರ ಹಳ್ಳಿ ಸೊಗಡಿನಲ್ಲಿ ತೆರೆಗೆ ಬಂದಿತ್ತು. ಇದೀಗ 'ಮೈ ನೇಮ್ ಈಸ್ ಕಿರಾತಕ' ಕೂಡ ಅದೇ ಬ್ಯಾಕ್ ಡ್ರಾಪ್ ನಲ್ಲಿ ಮೂಡಿ ಬರಲಿದೆ.

  'ಕಿರಾತಕ' ಚಿತ್ರದ ಮುಂದುವರಿದ ಭಾಗವಾಗಿರುವ ಈ ಚಿತ್ರಕ್ಕೆ ಅನಿಲ್ ಕುಮಾರ್ ಆಕ್ಷನ್ ಕಟ್ ಹೇಳಲಿದ್ದು, ಜಯಣ್ಣ ಬ್ಯಾನರ್ ಅಡಿ ಸಿನಿಮಾ ನಿರ್ಮಾಣ ಆಗಲಿದೆ. ಯಶ್ ಗೆ ಈ ಚಿತ್ರದಲ್ಲಿ ಶ್ವೇತಾ ನಂದಿತಾ ಜೋಡಿಯಾಗಿದ್ದು, ನಾಗಾಭರಣ, ತಾರಾ ಕೂಡ ಇರಲಿದ್ದಾರೆ.

  ನಗೆಯ ಹೊನಲು ಹರಿಸಲು ಯಶ್ ಜೊತೆಗೆ ಸಾಧು ಕೋಕಿಲ, ಚಿಕ್ಕಣ್ಣ ಹಾಗೂ ಕುರಿ ಪ್ರತಾಪ್ ಇರಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಲಿದ್ದು, ಸುಧಾಕರ್.ಎಸ್.ರಾಜ್ ಛಾಯಾಗ್ರಹಣ ಚಿತ್ರಕ್ಕಿರಲಿದೆ.

  English summary
  Yash starrer My Name is Kirataka to go on floors from September 3rd.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X