twitter
    For Quick Alerts
    ALLOW NOTIFICATIONS  
    For Daily Alerts

    'ಮೈಸೂರು ರತ್ನ' ಬಿರುದು ವಿಷ್ಣುದಾದಾಗೆ ಮಾತ್ರ ಮೀಸಲು: ಬೇರೆ ಯಾರಿಗೂ ಅಲ್ಲ.!

    By Bharath Kumar
    |

    ದಶಕಗಳ ಹಿಂದೆಯೇ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರಿಗೆ 'ಮೈಸೂರು ರತ್ನ' ಎಂಬ ಬಿರುದು ನೀಡಲಾಗಿತ್ತು. ವಿಷ್ಣುದಾದಾ ಅವರನ್ನ ಬಿಟ್ಟರೇ, ಚಿತ್ರರಂಗದಲ್ಲಿ ಮತ್ಯಾರನ್ನೂ 'ಮೈಸೂರು ರತ್ನ' ಎಂದು ಸಂಭೋದಿಸಿಲ್ಲ.

    ಹೀಗಿರುವಾಗ, ಇತ್ತೀಚೆಗಷ್ಟೇ 'ಮೈಸೂರು ರತ್ನ' ಎಂಬ ಬಿರುದನ್ನ 'ಕರಿಯ-2' ಚಿತ್ರತಂಡದವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನೀಡಿದರು. ಇದನ್ನ ವಿನಯದಿಂದಲೇ ತಿರಸ್ಕರಿಸಿದ ದಾಸ, 'ನನಗೆ ಚಾಲೆಂಜಿಂಗ್ ಸ್ಟಾರ್ ಬಿರುದು ಸಾಕು, 'ಮೈಸೂರು ರತ್ನ' ಬಿರುದನ್ನ 'ಕರಿಯ-2' ಚಿತ್ರದ ನಾಯಕನಿಗೆ ಈ ನೀಡಿ'' ಎಂದಿದ್ದರು.

    'ಚಾಲೆಂಜಿಂಗ್ ಸ್ಟಾರ್' ಸಾಕು 'ಮೈಸೂರು ರತ್ನ' ಯಾಕೆ?'ಚಾಲೆಂಜಿಂಗ್ ಸ್ಟಾರ್' ಸಾಕು 'ಮೈಸೂರು ರತ್ನ' ಯಾಕೆ?

    ದರ್ಶನ್ ಅವರು 'ಮೈಸೂರು ರತ್ನ' ಬಿರುದನ್ನ ತಿರಸ್ಕರಿಸಿರುವುದನ್ನ ಸಮರ್ಥಿಸಿಕೊಂಡಿರುವ ವಿಷ್ಣು ಅಭಿಮಾನಿಗಳು ಒಬ್ಬ ಹೊಸ ನಟನಿಗೆ ದಾದಾ ಅವರ ಬಿರುದು ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.....ಮುಂದೆ ಓದಿ....

    ವಿಷ್ಣು ಅಭಿಮಾನಿಗಳ ಟ್ರೆಂಡ್

    ವಿಷ್ಣು ಅಭಿಮಾನಿಗಳ ಟ್ರೆಂಡ್

    'ಮೈಸೂರು ರತ್ನ' ಬಿರುದು ಡಾ.ವಿಷ್ಣುವರ್ಧನ್ ಅವರ ಸ್ವತ್ತು. ಬೇರೆ ಯಾರಿಗೂ ನೀಡುವುದು ಬೇಡ ಎಂದು ವಿಷ್ಣು ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಟ್ರೆಂಡ್ ಸೃಷ್ಟಿಸಿದ್ದಾರೆ.

    ಅಭಿಮಾನಕ್ಕಾಗಿ ಕೇಳುತ್ತಿದ್ದೇವೆ

    ಅಭಿಮಾನಕ್ಕಾಗಿ ಕೇಳುತ್ತಿದ್ದೇವೆ

    ಇದು ಯಾವುದೇ ವಿವಾದ ಹುಟ್ಟುಹಾಕುವ ದೃಷ್ಟಿಯಲ್ಲ. ನಮ್ಮ ಅಭಿಮಾನಕ್ಕಾಗಿ ಕೇಳುತ್ತಿದ್ದೇವೆ ಎಂದು ದಾದಾ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

    'ಮೈಸೂರು ರತ್ನ' ವಿಷ್ಣುವರ್ಧನ್

    'ಮೈಸೂರು ರತ್ನ' ವಿಷ್ಣುವರ್ಧನ್

    ವಿಷ್ಣುವರ್ಧನ್ ಅವರ ಚಿತ್ರಗಳಲ್ಲಿ 'ಸಾಹಸ ಸಿಂಹ', 'ಅಭಿನವ ಭಾರ್ಗವ', 'ಮೈಸೂರು ರತ್ನ' ಎಂಬ ಬಿರುದುಗಳನ್ನ ವಿಷ್ಣುವರ್ಧನ್ ಅವರ ಹೆಸರು ಬಳಸಿರುವುದು ನಾವು ಗಮನಿಸಬಹುದು.

    ಈ ಅಭಿಯಾನ ಯಾರ ವಿರುದ್ಧವೂ ಅಲ್ಲ.!

    ಈ ಅಭಿಯಾನ ಯಾರ ವಿರುದ್ಧವೂ ಅಲ್ಲ.!

    ಅಂದ್ಹಾಗೆ, ವಿಷ್ಣು ಅಭಿಮಾನಿಗಳು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಗೆ ನಾಂದಿ ಹಾಡಿದ್ದು, ಇದು ಯಾರ ವಿರುದ್ಧವೂ ಅಲ್ಲ, ಯಾರ ಪರವಾಗಿಯೂ ಅಲ್ಲ, ಇದು ನಮ್ಮ ಅಭಿಮಾನದ ಪ್ರತೀಕವೆಂದು ಸ್ಪಷ್ಟಪಡಿಸಿದ್ದಾರೆ.

    English summary
    Dr Vishnuvardhan Fans have taken their twitter account to justify that 'Mysore Ratna' title should not be given to young stars and should belong only to Dr.Vishnuvardhan.
    Wednesday, August 2, 2017, 16:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X