»   » ಮೈಸೂರಿಗರೇ ಇಂದು ಸಿನಿಮಾ ನೋಡಲು ಮರೆಯಬೇಡಿ

ಮೈಸೂರಿಗರೇ ಇಂದು ಸಿನಿಮಾ ನೋಡಲು ಮರೆಯಬೇಡಿ

Posted By:
Subscribe to Filmibeat Kannada

ಮೈಸೂರು, ಜ. 24 : ನಗರದ ಕಲಾಮಂದಿರದಲ್ಲಿ ಜ. 27ರಂದು ಸಂಜೆ 5 ಗಂಟೆಗೆ ಸಿನಿಮಾ ಸಮಯ ಕಾರ್ಯಕ್ರಮ ಆಯೋಜಿಸಲಾಗಿದೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ, ಬೆಳ್ಳಿ ಮಂಡಲ ಹಾಗೂ ಮೈಸೂರು ಫಿಲ್ಮ್ ಸೊಸೈಟಿ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಎ.ಆರ್. ಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. [ಮೈಸೂರಲ್ಲಿ ಮತ್ತೊಂದು ಮಿನಿ ಜೂ]

cinema

ಯಾವ ಯಾವ ಸಿನಿಮಾ : ಅರ್ಪಣಾ ವಾಲೇನಕರ್, ಅಭಯ್ ಕೆ. ಮತ್ತು ಪ್ರಶಾಂತ್ ಕೆ. ನಿರ್ದೇಶಿಸಿರುವ 'ಡಿವೈನ್ ಮೆಸೆಂಜರ್ಸ್' ಸಾಕ್ಷ್ಯಚಿತ್ರ ಮೊದಲು ಪ್ರದರ್ಶನವಾಗಲಿದೆ. ಬಾಬಾ ಆಮ್ಟೆ ಅವರ ಪುತ್ರ ಡಾ. ಪ್ರಕಾಶ್ ಆಮ್ಟೆ ಹಾಗೂ ಅವರ ತಂಡದ ಲೋಕ್ ಬಿರಾದಾರಿ ಪ್ರಕಲ್ಪ್ ಸಂಘಟನೆಯು ಬುಡಕಟ್ಟು ಜನರ ಏಳಿಗೆಗಾಗಿ ದುಡಿಯುತ್ತಿರುವ ರೀತಿಯನ್ನು ಸಾಕ್ಷ್ಯಚಿತ್ರದಲ್ಲಿ ಸೆರೆಹಿಡಿಯಲಾಗಿದೆ.

ಸಾಕ್ಷ್ಯಚಿತ್ರ ಪ್ರದರ್ಶನದ ನಂತರ ಮಹಾಂತೇಶ್ ರಾಮದುರ್ಗ ನಿರ್ದೇಶಿಸಿರುವ 'ಅಗಸಿ ಪಾರ್ಲರ್' ಕನ್ನಡ ಚಲನಚಿತ್ರ ಪ್ರದರ್ಶನವಾಗಲಿದೆ. ಈ ಚಿತ್ರಕ್ಕಾಗಿ ನಿರ್ದೇಶಕ ಮಹಾಂತೇಶ್ ರಾಮದುರ್ಗ ಅವರಿಗೆ 2013ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ದೊರೆತಿದೆ. ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿಯೂ ಅಗಸಿ ಪಾರ್ಲರ್ ಪ್ರದರ್ಶನಗೊಂಡಿತ್ತು.

English summary
Information Department has organized a movie show in Kalamandir in Mysuru. People can watch 'Devine Messengers and Agasi Parlour' movies in this show for free of cost.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada