For Quick Alerts
  ALLOW NOTIFICATIONS  
  For Daily Alerts

  ಸೆಪ್ಟಂಬರ್ 22 ರಿಂದ 'ಮೈಸೂರು ದಸರಾ ಚಲನಚಿತ್ರೋತ್ಸವ' ಆರಂಭ

  By Bharath Kumar
  |

  ಮೈಸೂರು ದಸರಾ ಹಬ್ಬದ ಸಂಭ್ರಮ ಹೆಚ್ಚಿಸಲು ಚಿತ್ರರಂಗ ಸಜ್ಜಾಗಿದ್ದು, ''ಮೈಸೂರು ದಸರಾ ಚಲನಚಿತ್ರೋತ್ಸವ''(MDFF)ವನ್ನ ಹಮ್ಮಿಕೊಳ್ಳಲಾಗಿದೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ-ಪುರಸ್ಕಾರ ಪಡೆದ ಚಲನಚಿತ್ರಗಳ ಜೊತೆಗೆ ದೇಶ-ವಿದೇಶಗಳ ಅತ್ಯುತ್ತಮ ಹಾಗೂ ಜಾಗತಿಕ ಮನ್ನಣೆ ಪಡೆದ ಚಿತ್ರಗಳನ್ನ ದಸರಾ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗುತ್ತಿದೆ.

  'ಮೈಸೂರು ದಸರಾ ಚಲನಚಿತ್ರೋತ್ಸವ'ವನ್ನು ಸೆಪ್ಟೆಂಬರ್ 21 ರಂದು ಕರ್ನಾಟಕ ಕಲಾಮಂದಿರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಕನ್ನಡ ಚಿತ್ರರಂಗದ ಗಣ್ಯರು ಸೇರಿದಂತೆ ಹಲವಾರು ಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ದಸರಾ ವಿಶೇಷಾಧಿಕಾರಿ ಮತ್ತು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದ್ದಾರೆ.

  ಸೆಪ್ಟೆಂಬರ್ 22 ರಿಂದ 28 ರವರೆಗೆ ಚಲನಚಿತ್ರೋತ್ಸವ ನಡೆಯಲಿದ್ದು, ಡಿ.ಆರ್.ಸಿ ಚಿತ್ರಮಂದಿರದಲ್ಲಿ ಒಟ್ಟು 28 ಕನ್ನಡ ಚಿತ್ರಗಳು ಹಾಗೂ ಐನಾಕ್ಸ್ ಚಿತ್ರಮಂದಿರದಲ್ಲಿ ವಿವಿಧ ಭಾಷೆಗಳ ಒಟ್ಟು 28 ಚಿತ್ರಗಳು ಪ್ರದರ್ಶನವಾಗಲಿದೆ. ಜೊತೆಗೆ ಸಾಮಾಜಿಕ ಪರಿಣಾಮ ಬೀರುವಂತಹ ಹಾಗೂ ಮನಃಪರಿವರ್ತನೆ ಮಾಡುವಂತಹ ಚಿತ್ರಗಳ ಪ್ರದರ್ಶನವನ್ನು ಈ ಬಾರಿ ವಿಶೇಷವಾಗಿ ಮೈಸೂರು ಕಾರಾಗೃಹದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.

  ಐನಾಕ್ಸ್ ಚಿತ್ರಮಂದಿರದಲ್ಲಿ ಪ್ರದರ್ಶನವಾಗುವ ಚಿತ್ರಗಳು ವೀಕ್ಷಣೆಗೆ ನೋಂದಣಿ ಅಗತ್ಯವಿದೆ. ನೋಂದಣಿ ಪ್ರಕ್ರಿಯೆಯನ್ನು 2017ರ ಸೆ.15ರ ನಂತರ ಮಾಡಲಾಗುತ್ತದೆ. ಐನಾಕ್ಸ್ ಚಿತ್ರಮಂದಿರ ಪ್ರವೇಶದ ನೋಂದಣಿಗೆ 300ರೂ ಹಾಗೂ ಪ್ರದರ್ಶನವಾರು ಪಾಸ್‌ಗೆ 30 ರೂ. ನಿಗದಿ ಮಾಡಲಾಗಿದೆ. ಡಿ.ಆರ್.ಸಿ. ಚಿತ್ರಮಂದಿರಕ್ಕೆ ನೋಂದಣಿಯ ಅಗತ್ಯವಿಲ್ಲ. ಡಿ.ಆರ್.ಸಿ. ಚಿತ್ರಮಂದಿರದಲ್ಲಿ ನಡೆಯುವ ಪ್ರತಿ ಪ್ರದರ್ಶನಕ್ಕೆ ಸಾರ್ವಜನಿಕರಿಗೆ 30 ರೂ. ನಿಗದಿಪಡಿಸಲಾಗಿದೆ.

  English summary
  Mysuru Dasara Film Festival will be start from September 22. It will go on till 28. Chief Minister Siddaramamaih will inaugurate the MyDFF at Kalamandira on September 2.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X