For Quick Alerts
  ALLOW NOTIFICATIONS  
  For Daily Alerts

  ಯುವ ದಸರಾ ಉದ್ಘಾಟನೆಯಿಂದ ಹಿಂದೆ ಸರಿದ ಕಿಚ್ಚ ಸುದೀಪ್: ಆಯೋಜಕರ ಬೇಸರ!

  |

  ಮೈಸೂರಿನಲ್ಲಿ ನಾಡ ಹಬ್ಬದ ಸಂಭ್ರಮ ಜೋರಾಗಿದೆ. ಕಳೆದ ಎರಡು ವರ್ಷಗಳ ಬಳಿಕ ದಸರಾವನ್ನು ಅದ್ಧೂರಿಯಾಗಿ ಆಚರಣೆ ಮಾಡಲು ನಿರ್ಧರಿಸಲಾಗಿದೆ. ಇದರೊಂದಿಂಗೆ ಯುವ ದಸರಾವನ್ನೂ ಗ್ರ್ಯಾಂಡ್‌ ಆಗಿ ಉದ್ಘಾಟನೆ ಮಾಡಲು ಆಯೋಜಕರು ಮುಂದಾಗಿದ್ದರು.

  ಸೆಪ್ಟೆಂಬರ್ 27ರಂದು ಸಂಜೆ 6 ಗಂಟೆಗೆ ಯುವ ದಸರಾ ಉದ್ಘಾಟನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ. ಈ ಕಾರ್ಯಕ್ರಮದ ಉದ್ಘಾಟನೆಗೆ ಕಿಚ್ಚ ಸುದೀಪ್ ಮುಖ್ಯ ಅತಿಥಿಯಾಗಿ ಆಗಮಿಸಬೇಕಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಕಾರ್ಯಕ್ರಮಕ್ಕೆ ಬರಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

  ಯುವ ದಸರಾದಲ್ಲಿ 'ಅಪ್ಪು ನಮನ': ಮೈಸೂರಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್, ಶಿವಣ್ಣ!ಯುವ ದಸರಾದಲ್ಲಿ 'ಅಪ್ಪು ನಮನ': ಮೈಸೂರಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್, ಶಿವಣ್ಣ!

  ಕಿಚ್ಚ ಸುದೀಪ್ ಯುವ ದಸರಾಗೆ ಬರಲ್ಲ

  ಕಿಚ್ಚ ಸುದೀಪ್ ಕಾರ್ಯಕ್ರಮಕ್ಕೆ ಬರೋದಿಲ್ಲ ಅಂತ ಹೇಳಿದ ಕ್ಷಣದಿಂದ ಬೇರೊಬ್ಬ ಸ್ಟಾರ್ ನಟನನ್ನು ಕರೆ ತರಲು ಆಯೋಜಕರು ಮುಂದಾಗಿದ್ದಾರೆ. ಈಗಾಗಲೇ ಕಿಚ್ಚ ಸುದೀಪ್ ಆಗಮಿಸುತ್ತಿರುವ ಬಗ್ಗೆ ಆಯೋಜಕರು ಎಲ್ಲಾ ಕಡೆ ಪ್ರಚಾರವನ್ನು ಮಾಡಿದ್ದರು. ಆದರೆ, ದಿಢೀರನೇ ಸುದೀಪ್ ಕಾರ್ಯಕ್ರಮಕ್ಕೆ ಬರುವುದಿಲ್ಲ ಅಂತ ಹೇಳಿದ್ದರಿಂದ ಆಯೋಜಕರ ಮನಸ್ಸಿಗೆ ನೋವಾಗಿದೆ.

  ಯುವ ದಸರಾಗೆ ಸುದೀಪ್ ಬಂದಿದ್ದರೆ ತಾರಾ ಮೆರುಗು ಮತ್ತಷ್ಟು ಹೆಚ್ಚಾಗುತ್ತಿತ್ತು. ಆದರೆ, ಕಾರ್ಯಕ್ರಮಕ್ಕೆ ಕರೆಸಲು ಸಾಕಷ್ಟು ಪ್ರಯತ್ನ ಮಾಡಲಾಯಿತು. ಏನೂ ಪ್ರಯೋಜನ ಆಗಿಲ್ಲ. ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಸುದೀಪ್ ಅತಿಥಿಯಾಗಿ ಬರುತ್ತಾರೆಂದು ಮೈಸೂರಿನ ಜನ ಕಾಯುತ್ತಿದ್ದರು. ಆದ್ರೀಗ ಮೈಸೂರಿನ ಜನರಿಗೆ ಬೇಸರವಾಗಿದೆ ಅಂತ ಆಯೋಜಕರೊಬ್ಬರು ಮಾಹಿತಿ ನೀಡಿದ್ದಾರೆ.

  ಕಿಚ್ಚ ಸುದೀಪ್ ಹಿಂದೆ ಸರಿದಿದ್ದು ಯಾಕೆ?

  ಕಿಚ್ಚ ಸುದೀಪ್ ಯುವ ದಸರಾ ಕಾರ್ಯಕ್ರಮದಿಂದ ಹಿಂದೆ ಸರಿದಿದ್ದು ಯಾಕೆ? ಅನ್ನೋ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಯುವ ದಸರಾ ಆಯೋಜಕರಾಗಲಿ, ಕಿಚ್ಚು ಸುದೀಪ್ ಆಗಲಿ ಅಧಿಕೃತವಾಗಿ ಹೇಳಿಕೆಯನ್ನು ನೀಡಿಲ್ಲ.

  ಯುವ ಸಮೂಹದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕಿಚ್ಚ ಸುದೀಪ್ ಬದಲು ಬೇರೆ ಯಾರು ಚಾಲನೆ ನೀಡುತ್ತಾರೆ ಅನ್ನೋ ಕುತೂಹಲವಿದೆ. ಆ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಏನೇ ಅಡೆತಡೆಗಳು ಬಂದರೂ, ಈ ಬಾರಿ ಮೈಸೂರು ದಸರಾ ಎಲ್ಲಾ ವಿಭಾಗದಲ್ಲೂ ಅದ್ಧೂರಿಯಾಗಿಯೇ ನಡೆಯಲಿದೆ.

  Mysuru Yuva Dasara: Organizer Angry About Kiccha Sudeep Last Moment Decision

  7 ದಿನ ಯುವ ದಸರಾ ಕಾರ್ಯಕ್ರಮ

  ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಯುವ ದಸರಾ ಕಾರ್ಯಕ್ರಮ ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 3ರವರೆಗೆ 7 ದಿನ ಕಾಲ ನಡೆಯಲಿದೆ. ಸ್ಥಳೀಯ ಕಲಾವಿದರು ಸೇರಿದಂತೆ ಸ್ಯಾಂಡಲ್‌ವುಡ್, ಬಾಲಿವುಡ್ ಗಾಯಕ, ಸಂಗೀತಗಾರರು, ತಾರೆಯರು ಯುವ ದಸರಾ ವೇದಿಕೆ ಮೇಲೆ ಪ್ರದರ್ಶನ ನೀಡಲಿದ್ದಾರೆ.

  ಈ ಬಾರಿ ಯುವ ದಸರಾದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಒಂದು ದಿನ ಅಪ್ಪು ನಮನ ಕಾರ್ಯಕ್ರಮಕ್ಕೆ ಮೀಸಲು. ಮತ್ತೊಂದು ದಿನವನ್ನು ಮಹಿಳಾ ಕಲಾವಿದರು ಕಾರ್ಯಕ್ರಮ ನೀಡಲಿದ್ದಾರೆ. ಎರಡು ವರ್ಷಗಳ ಬಳಿಕ ಅದ್ಧೂರಿಯಾಗಿ ಕಾರ್ಯಕ್ರಮ ನಡೆಯುತ್ತಿರೋದ್ರಿಂದ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

  English summary
  Mysuru Yuva Dasara: Organizer Angry About Kiccha Sudeep Last Moment Decision, Know More.
  Sunday, September 25, 2022, 16:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X