For Quick Alerts
  ALLOW NOTIFICATIONS  
  For Daily Alerts

  ಭಾವನಾತ್ಮಕವಾಗಿದೆ 'ನಾನು ಮತ್ತೆ ಗುಂಡ' ಟ್ರೇಲರ್

  |

  ಈಗಾಗಲೇ 'ನಾನು ಮತ್ತೆ ಗುಂಡ' ಸಿನಿಮಾ ಸ್ಯಾಂಡಲ್ ವುಡ್ ಪ್ರೇಕ್ಷಕರ ಗಮನ ಸೆಳೆದಿದೆ. ಇದೀಗ ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ.

  ಟ್ರೇಲರ್ ತುಂಬ ಭಾವನಾತ್ಮಕವಾಗಿದೆ. ದೃಶ್ಯಗಳ ನಡುವೆ ಬರುವ ಸೋನು ನಿಗಮ್ ಧ್ವನಿ ಮನಸ್ಸಿಗೆ ಹತ್ತಿರವಾಗುತ್ತದೆ. ಪ್ರಮುಖವಾಗಿ ನಟ ಶಿವರಾಜ್ ಕೆ ಆರ್ ಪೇಟೆ ಹಾಗೂ ಮುದ್ದು ಶ್ವಾನ ಗುಂಡನ ಕಾಂಬಿನೇಶನ್ ಸೂಪರ್ ಆಗಿದೆ.

  ನಾನು ಮತ್ತು ಗುಂಡ: ಈ ಮುಗ್ದ ಗುಂಡನಿಗೆ ಮನ ಸೋಲದವರಿಲ್ಲನಾನು ಮತ್ತು ಗುಂಡ: ಈ ಮುಗ್ದ ಗುಂಡನಿಗೆ ಮನ ಸೋಲದವರಿಲ್ಲ

  ನಾಯಕನ ಬದುಕಿನಲ್ಲಿ ಗುಂಡನ ಆಗಮನದ ನಂತರ ಕಥೆಯನ್ನು ಸಿನಿಮಾ ಹೇಳುತ್ತಿದೆ. ಅತ್ತ ಹೆಂಡತಿ.. ಇತ್ತ ಗುಂಡ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುವ ಸಂದರ್ಭ ನಾಯಕನಿಗೆ ಬರುತ್ತದೆ. ಅದೇ ಅಂಶ ಟ್ರೇಲರ್ ನಲ್ಲಿ ಕುತೂಹಲ ಮೂಡಿಸಿದೆ.

  ಶಿವರಾಜ್ ಹಾಗೂ ಗುಂಡ ಇಬ್ಬರ ನಟನೆ ತುಂಬ ಚೆನ್ನಾಗಿದೆ. ಸಂಯುಕ್ತ ಹೊರನಾಡು ಚಿತ್ರದ ನಾಯಕಿ. ಟ್ರೇಲರ್ ನ ದೃಶ್ಯಗಳು ಹಾಗೂ ಸಂಗೀತ ಗಮನ ಸೆಳೆಯುತ್ತದೆ. ಚಿತ್ರದ ತನ್ನ ಪಾತ್ರಕ್ಕೆ ಗುಂಡ ತಾನೇ ಡಬ್ ಮಾಡಿದ್ದಾನಂತೆ.

  ಅಂಹದಾಗೆ, ಕಾರ್ತಿಕ್ ಶರ್ಮಾ ಸಿನಿಮಾಗೆ ಸಂಗೀತ ನೀಡಿದ್ದು, ರೋಹಿತ್ ರಮನ್ ಸಾಹಿತ್ಯ ಬರೆದಿದ್ದಾರೆ. ಶ್ರೀನಿವಾಸ್ ತಿಮಯ್ಯ ಚಿತ್ರದ ನಿರ್ದೇಶನ ಮಾಡಿದ್ದಾರೆ. ರಘು ಹಾಸನ್ ನಿರ್ಮಾಣವಿದೆ.

  ತಾನು ಅಭಿನಯಿಸಿದ ಪಾತ್ರಕ್ಕೆ ತಾನೇ ಡಬ್ ಮಾಡುತ್ತಿದೆ ಈ ಶ್ವಾನತಾನು ಅಭಿನಯಿಸಿದ ಪಾತ್ರಕ್ಕೆ ತಾನೇ ಡಬ್ ಮಾಡುತ್ತಿದೆ ಈ ಶ್ವಾನ

  ಯೂಟ್ಯೂಬ್ ನಲ್ಲಿ 'ನಾನು ಮತ್ತು ಗುಂಡ' ಟ್ರೇಲರ್ ಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 1 ಲಕ್ಷದ 30 ಸಾವಿರಕ್ಕೂ ಅಧಿಕ ಹಿಟ್ಸ್ ಟ್ರೇಲರ್ ಗೆ ಸಿಕ್ಕಿದೆ.

  English summary
  Naanu Matthu Gunda kannada movie trailer getting positive response.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X