For Quick Alerts
  ALLOW NOTIFICATIONS  
  For Daily Alerts

  'ನಾಗರಹಾವು' ಚಿತ್ರದ ಹೊಸ ಅವತಾರವನ್ನು ಕೊಂಡಾಡಿದ ಗಣ್ಯರು

  By Naveen
  |
  ರವಿಚಂದ್ರನ್ ಸಹೋದರನ ನಾಗರಹಾವು ಸಿನಿಮಾಗೆ ಭೇಷ್ ಎಂದ ದಿಗ್ಗಜರು..!! | Filmibeat Kannada

  ಡಾ.ವಿಷ್ಣುವರ್ಧನ್ ಅವರ 'ನಾಗರಹಾವು' ಸಿನಿಮಾ ಈಗ ಹೊಸ ರೂಪದೊಂದಿಗೆ ಮತ್ತೆ ತೆರೆ ಮೇಲೆ ಬರುತ್ತಿದೆ. ಈ ಸಿನಿಮಾ ಇದೇ ತಿಂಗಳ 20ಕ್ಕೆ ರಾಜ್ಯಾದಂತ್ಯ ಬಿಡುಗಡೆಯಾಗುತ್ತಿದೆ. ಈ ಕಾರಣ ಇಂದು ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ವಿಶೇಷ ಸುದ್ದಿಗೋಷ್ಟಿ ಕಾರ್ಯಕ್ರಮ ನಡೆಯಿತು.

  ಮತ್ತೆ ಬಂದ ರಾಮಾಚಾರಿ : 'ನಾಗರಹಾವು' ಬಿಡುಗಡೆಯ ದಿನ ಅನೌನ್ಸ್ ಮತ್ತೆ ಬಂದ ರಾಮಾಚಾರಿ : 'ನಾಗರಹಾವು' ಬಿಡುಗಡೆಯ ದಿನ ಅನೌನ್ಸ್

  ಈ ವೇಳೆ ಸಿನಿಮಾದ ಟೀಸರ್ ಮತ್ತು ಹಾಡುಗಳನ್ನು ತೋರಿಸಲಾಯ್ತು. ಕಾರ್ಯಕ್ರಮಕ್ಕೆ ಬಂದಿದ್ದ ಅತಿಥಿಗಳು ಮುಖ್ಯ ಆಕರ್ಷಣೆ ಆಗಿದ್ದರು. ಹಿರಿಯ ನಟಿ ಜಯಂತಿ, ಲೀಲಾವತಿ, ಭಾರತಿ ವಿ‍ಷ್ಣುವರ್ಧನ್, ನಟ ಅಂಬರೀಶ್, ರವಿಚಂದ್ರನ್, ಹಿರಿಯ ನಟ ಶಿವರಾಂ, ದೊಡ್ಡಣ್ಣ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

  ಕಾರ್ಯಕ್ರಮದಲ್ಲಿ ಎಲ್ಲ ದಿಗ್ಗಜರು 'ನಾಗರಹಾವು' ಸಿನಿಮಾದ ತಮ್ಮ ನೆನಪುಗಳನ್ನು ಹಂಚಿಕೊಂಡರು. ಜೊತೆಗೆ ಈಗ ಆ ಸಿನಿಮಾ ರೂಪುಗೊಂಡಿರುವ ರೀತಿ ನೋಡಿ ಮೆಚ್ಚಿದರು. ಸಿನಿಮಾದ ಕ್ವಾಲಿಟಿ ಮತ್ತು 7.1 ಡಿಜಿಟಲ್ ಸೌಂಡ್ ಗೆ ಫಿದಾ ಎಲ್ಲರೂ ಆದರು.

  ಅಂದಹಾಗೆ, ರವಿಚಂದ್ರನ್ ಅವರ ಸಹೋದರ ಬಾಲಾಜಿ ತಮ್ಮ ತಂದೆ ನಿರ್ಮಿಸಿದ್ದ ಸಿನಿಮಾಗೆ ಮರು ಜೀವ ನೀಡಿದ್ದಾರೆ. ಒಂದು ವರ್ಷ ಈ ಸಿನಿಮಾದ ಕೆಲಸಗಳನ್ನು ಮಾಡಿ ಈಗ ತೆರೆಗೆ ತರುತ್ತಿದ್ದಾರೆ. ಪುಟ್ಟಣ್ಣ ಕಣಗಾಲ್ ಅವರ ಈ ಮಾಸ್ಟರ್ ಪೀಸ್ ಸಿನಿಮಾಗೆ ಹೊಸ ಮೆರಗು ನೀಡಿದ್ದಾರೆ.

  English summary
  Kannada actor Vishnuvardhan's 'Nagarahaavu' kannada movie press meet held today (July 10th). The movie will re releasing on july 20th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X