»   » ಸೆನ್ಸಾರ್ ನಲ್ಲಿ 'ನಾಗರಹಾವು' ಪ್ರತ್ಯಕ್ಷ: ಸದ್ಯದಲ್ಲೇ 'ನಾಗರಾಜ'ನ ದರ್ಶನ

ಸೆನ್ಸಾರ್ ನಲ್ಲಿ 'ನಾಗರಹಾವು' ಪ್ರತ್ಯಕ್ಷ: ಸದ್ಯದಲ್ಲೇ 'ನಾಗರಾಜ'ನ ದರ್ಶನ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಟ್ರೈಲರ್-ಆಡಿಯೋ ಮೂಲಕ ಸಂಚಲನ ಸೃಷ್ಟಿಸಿದ 'ನಾಗರಹಾವು' ಚಿತ್ರದ ಬಿಡುಗಡೆ ಅದ್ಯಾವಾಗ ಆಗುತ್ತೋ, ಅಂತ ಹಲವಾರು ಸಿನಿ ಪ್ರಿಯರು ತುದಿಗಾಲಲ್ಲಿ ಕಾದು ಕುಳಿತಿದ್ದಾರೆ.

'ಅರುಂಧತಿ' ಖ್ಯಾತಿಯ ಕೋಡಿ ರಾಮಕೃಷ್ಣ ಅವರು 'ನಾಗರಹಾವು' ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಕನ್ನಡ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ಈ ಸಿನಿಮಾ ತೆರೆ ಕಾಣಲಿದೆ.['ನಾಗರಹಾವು' ಟ್ರೈಲರ್: ಸಿಂಹ ನಡಿಗೆಯ ಸದ್ದಿಗೆ ಸ್ಯಾಂಡಲ್ ವುಡ್ ಶೇಕ್]


ದೂದ್ ಪೇಡಾ ದಿಗಂತ್ ಮತ್ತು ರಮ್ಯ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ನಾಗರಹಾವು' ಚಿತ್ರ ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ. ಇದೀಗ ಸೆನ್ಸಾರ್ ಮಂಡಳಿ ಕೂಡ ಚಿತ್ರದ ಬಿಡುಗಡೆಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಎಲ್ಲವೂ ಸುಗಮವಾಗಿ ನೇರವೇರಿದ್ದು, ಇನ್ನೇನು ಸದ್ಯದಲ್ಲೇ ಈ ಸಿನಿಮಾ ಭರ್ಜರಿಯಾಗಿ ತೆರೆಗೆ ಅಪ್ಪಳಿಸಲಿದೆ. ಮುಂದೆ ಓದಿ....


ಸೆನ್ಸಾರ್ ನಲ್ಲಿ ಕ್ಲೀನ್ ಚಿಟ್

ಬಹುನಿರೀಕ್ಷಿತ 'ನಾಗರಹಾವು' ಚಿತ್ರಕ್ಕೆ ಸೆನ್ಸಾರ್ ಮಂಡಳಿ 'ಯು/ಎ' ಪ್ರಮಾಣಪತ್ರ ನೀಡಿ ಬಿಡುಗಡೆಗೆ ಅನುಮತಿ ನೀಡಿದೆ. ಸೆನ್ಸಾರ್ ನಲ್ಲಿ ಕ್ಲೀನ್ ಚಿಟ್ ಪಡೆದುಕೊಂಡಿದ್ದರಿಂದ ಇದೀಗ ಚಿತ್ರದ ಬಿಡುಗಡೆ ದಿನಾಂಕ ಕೂಡ ಘೋಷಣೆಯಾಗಿದೆ.[ಡಾ.ವಿಷ್ಣು 'ನಾಗರಹಾವು' ನೋಡಲು ತುದಿಗಾಲಲ್ಲಿ ನಿಂತಿರುವ 'ಸಿಂಗಂ' ಸೂರ್ಯ]


ಸಿನಿಮಾ ಬಿಡುಗಡೆ ಯಾವಾಗ?

ದಸರಾ ಹಬ್ಬದ ಸಂದರ್ಭದಲ್ಲಿ ಬಿಡುಗಡೆ ಮಾಡುವುದಾಗಿ ಈ ಮೊದಲು ಚಿತ್ರತಂಡ ಹೇಳಿಕೊಂಡಿತ್ತು. ಇದೀಗ ಕೊಟ್ಟ ಮಾತಿನಂತೆ ಅಕ್ಟೋಬರ್ 14, ಮುಂದಿನ ಶುಕ್ರವಾರ 'ನಾಗರಹಾವು' ಚಿತ್ರವನ್ನು ಇಡೀ ರಾಜ್ಯಾದ್ಯಂತ ಏಕಕಾಲದಲ್ಲಿ ಬಿಡುಗಡೆ ಮಾಡಲಿದ್ದಾರೆ.[ದಿಗಂತ್ 'ಅಸಲಿ'ಯತ್ತು ಬಯಲು ಮಾಡಿದ 'ನಾಗರಹಾವು' ನಿರ್ಮಾಪಕ.!]


ಅದ್ಧೂರಿ ಸಿನಿಮಾ

ದೊಡ್ಡ ಬಜೆಟ್ ನ ಚಿತ್ರವಾಗಿರುವ 'ನಾಗರಹಾವು' ತೆಲುಗಿನ 'ಬಾಹುಬಲಿ'ಗೆ ಸೆಡ್ಡು ಹೊಡೆದು ನಿಂತಿದೆ ಅಂದ್ರೆ ತಪ್ಪಿಲ್ಲ. ನಾನಾ ವಿಧದ ಟೆಕ್ನಾಲಜಿ ಬಳಸಿ ಈ ಚಿತ್ರವನ್ನು ಮತ್ತಷ್ಟು ಸುಂದರವಾಗಿ ಮಾಡಲಾಗಿದೆ.['ನಾಗರಹಾವು' ನಿರ್ಮಾಪಕರು 'ಲೂಟಿ' ಮಾಡುತ್ತಿರುವ ಹಣ ಅಷ್ಟಿಷ್ಟಲ್ಲ.!]


'ನಾಗರಾಜ' ವಿಷ್ಣುವರ್ಧನ್

'ಅಭಿನಯ ಭಾರ್ಗವ' ಸಾಹಸ ಸಿಂಹ ವಿಷ್ಣುವರ್ಧನ್ ಅವರು ಈ ಚಿತ್ರದಲ್ಲಿ 'ನಾಗರಾಜ'ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಮಾರು 140 ಅಡಿ ಉದ್ದದ ದೈತ್ಯ ಹಾವಿನ ರೂಪದಲ್ಲಿ ಎಲ್ಲರ ಮೆಚ್ಚಿನ ವಿಷ್ಣುದಾದಾ ಅವರು ಮಿಂಚಲಿದ್ದಾರೆ. ಇದು ವಿಷ್ಣು ಅವರ 201ನೇ ಸಿನಿಮಾ.[ವಿಷ್ಣುದಾದಾ 201ನೇ ಚಿತ್ರದಲ್ಲಿ 120 ಅಡಿ ನಾಗಿಣಿಯಾದ ರಮ್ಯಾ]


ಕ್ಲೈಮ್ಯಾಕ್ಸ್ ನಲ್ಲಿ 'ವಿಷ್ಣುದಾದಾ' ಘರ್ಜನೆ

ನವೀನ ತಂತ್ರಜ್ಞಾನದ ಮೂಲಕ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಈ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ವಿಷ್ಣು ಅವರ ತಮ್ಮ ಅಭಿಮಾನಿಗಳಿಗೆ ದರ್ಶನ ನೀಡಲಿದ್ದಾರೆ. ಬರೀ 9 ನಿಮಿಷಗಳ ಕಾಲ ವಿಷ್ಣು ಅವರು ತೆರೆಯ ಮೇಲೆ ಮಿಂಚಲಿದ್ದು, 'ನಾಗರಾಜ'ನ ಅವತಾರದಲ್ಲಿ ಶತ್ರುಗಳ ಸದೆ ಬಡಿಯಲಿದ್ದಾರೆ.


ನಾಗಿಣಿಯಾಗಿ ರಮ್ಯಾ

ಈ ಚಿತ್ರದಲ್ಲಿ ನಾಗಿಣಿ ಅವತಾರದಲ್ಲಿ ರಮ್ಯಾ ಅವರು ಮಿಂಚಿದ್ದು, ಬರೋಬ್ಬರಿ 120 ಅಡಿ ಉದ್ದ ಹಾವಿನ ರೂಪದಲ್ಲಿ ರಮ್ಯಾ ಅವರು ಕಾಣಿಸಿಕೊಳ್ಳಲಿದ್ದಾರೆ. ಗ್ರಾಫಿಕ್ಸ್ ಮೂಲಕ ಹಾವುಗಳ ರೂಪವನ್ನು ತರಲು ಸುಮಾರು 25 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ.


ತಮಿಳು-ತೆಲುಗಿನಲ್ಲೂ ಬುಸುಗುಡಲಿರುವ 'ನಾಗರಹಾವು'

ಕನ್ನಡ-ಹಿಂದಿ-ತಮಿಳು-ತೆಲುಗಿನಲ್ಲೂ ಈ ಸಿನಿಮಾ ಏಕಕಾಲದಲ್ಲಿ ತೆರೆ ಕಾಣಲಿದೆ. ತಮಿಳಿನಲ್ಲಿ 'ಶಿವನಾಗಂ' ತೆಲುಗಿನಲ್ಲಿ 'ನಾಗಭರಣಂ' ಮುಂತಾದ ಹೆಸರಿನಲ್ಲಿ, ಮುಂದಿನ ಶುಕ್ರವಾರ (ಅಕ್ಟೋಬರ್ 14) ಸಿನಿಮಾ ತೆರೆಗೆ ಬರಲಿದೆ.


English summary
Most anticipated Kannada movie 'Nagarahavu' has been Censored with U/A certificate. Kannada Actor Diganth, Actress Ramya starrer 'Nagarahavu' which is said to the 201st film of Dr Vishnuvardhan is likely to be released on the 14th of October. The movie is directed by Kodi Ramakrishna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada