»   » 'ನಾಗರಹಾವು' ನಿರ್ಮಾಪಕರು 'ಲೂಟಿ' ಮಾಡುತ್ತಿರುವ ಹಣ ಅಷ್ಟಿಷ್ಟಲ್ಲ.!

'ನಾಗರಹಾವು' ನಿರ್ಮಾಪಕರು 'ಲೂಟಿ' ಮಾಡುತ್ತಿರುವ ಹಣ ಅಷ್ಟಿಷ್ಟಲ್ಲ.!

Posted By:
Subscribe to Filmibeat Kannada

ಕೋಡಿ ರಾಮಕೃಷ್ಣ ನಿರ್ದೇಶನದ ಚಿತ್ರವೊಂದರಲ್ಲಿ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಹಾಗೂ ದಿಗಂತ್ ನಟಿಸುತ್ತಿದ್ದಾರೆ ಎಂದಾಗ ಅಷ್ಟೊಂದು ಸುದ್ದಿ ಆಗಲೇ ಇಲ್ಲ. ಇದು 'ಫ್ಯಾಂಟಸಿ' ಸಬ್ಜೆಕ್ಟ್ ಅಂದಾಗ್ಲೂ ಯಾರೂ ಇಂಟ್ರೆಸ್ಟ್ ತೋರಿಸಲಿಲ್ಲ.

ಆದ್ರೆ, ಇದೇ ಚಿತ್ರಕ್ಕೆ 'ನಾಗರಹಾವು' ಅಂತ ಹೆಸರಿಟ್ಟು, ಆಧುನಿಕ ತಂತ್ರಜ್ಞಾನದ ಮುಖಾಂತರ ಡಾ.ವಿಷ್ಣುವರ್ಧನ್ ರವರನ್ನ ತೆರೆಗೆ ತರಲಾಗುತ್ತಿದೆ ಅಂತ ಯಾವಾಗ ಜಗಜ್ಜಾಹೀರು ಆಯ್ತೋ, ಆಗ್ಲಿಂದ ಕನ್ನಡ ಸಿನಿ ಪ್ರಿಯರ 'ನಾಗರಹಾವು' ಚಿತ್ರವನ್ನ ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ['ನಾಗರಹಾವು' ಟ್ರೈಲರ್: ಸಿಂಹ ನಡಿಗೆಯ ಸದ್ದಿಗೆ ಸ್ಯಾಂಡಲ್ ವುಡ್ ಶೇಕ್]


ಈಗಾಗಲೇ ಬಿಡುಗಡೆ ಆಗಿರುವ 'ನಾಗರಹಾವು' ಚಿತ್ರದ ಟೀಸರ್ ಮತ್ತು ಟ್ರೈಲರ್ ನಲ್ಲಿ 'ಡಾ.ವಿಷ್ಣುವರ್ಧನ್' ರವರ ಘರ್ಜನೆ ಕಂಡು ಅಭಿಮಾನಿಗಳ ಎದೆ ಬಡಿತ ಜೋರಾಗಿದೆ. ಇದರಿಂದ ಸಹಜವಾಗಿ 'ನಾಗರಹಾವು' ಚಿತ್ರಕ್ಕೆ ಡಿಮ್ಯಾಂಡ್ ಹೈಕ್ ಆಗಿದೆ. ಮುಂದೆ ಓದಿ....


'ನಾಗರಹಾವು' ಥಿಯೇಟ್ರಿಕಲ್ ರೈಟ್ಸ್ ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು.!

ಸ್ಯಾಂಡಲ್ ವುಡ್ ಅಂಗಳದಲ್ಲಿ 'ನಾಗರಹಾವು' ಚಿತ್ರ ಬಹು ನಿರೀಕ್ಷೆ ಹುಟ್ಟು ಹಾಕಿರುವ ಕಾರಣ, ಸಿನಿಮಾದ ಥಿಯೇಟ್ರಿಕಲ್ ರೈಟ್ಸ್ ಪಡೆಯಲು ಬೇಡಿಕೆ ಹೆಚ್ಚಾಗಿದೆ. [ಮಾನವೀಯತೆ ಮೆರೆದ 'ನಾಗರಹಾವು' ನಿರ್ಮಾಪಕ ಸಾಜಿದ್ ಖುರೇಶಿ]


35 ಕೋಟಿ ಆಫರ್.!

ಕರ್ನಾಟಕದಲ್ಲಿ 'ನಾಗರಹಾವು' ಚಿತ್ರದ ಥಿಯೇಟ್ರಿಕಲ್ ರೈಟ್ಸ್ ಬರೋಬ್ಬರಿ 35 ಕೋಟಿ ರೂಪಾಯಿಗೆ ಸೇಲ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕನ್ನಡ ಚಿತ್ರರಂಗದ ಮಟ್ಟಿಗೆ ಇದು ಹೊಸ ಮೈಲಿಗಲ್ಲು. [ಬಿಂಕ ಬಿಟ್ಟು ಬಳುಕಿರುವ 'ನಾಗಿಣಿ' ರಮ್ಯಾ ವಿಡಿಯೋ-ಆಡಿಯೋ ಹಿಂಗಿದೆ..]


ತೆಲುಗು ಹಕ್ಕುಗಳು 15 ಕೋಟಿಗೆ ಬಿಕರಿ

'ನಾಗರಹಾವು' ಚಿತ್ರದ ತೆಲುಗು ಅವತರಣಿಕೆ ಬಿಡುಗಡೆ ಮಾಡಲು ಸುರಕ್ಷಾ ಮೀಡಿಯಾ ಬರೋಬ್ಬರಿ 15 ಕೋಟಿ ರೂಪಾಯಿ ನೀಡಿದೆ.


ತಮಿಳಿಗೂ 15 ಕೋಟಿ

ಬರೋಬ್ಬರಿ 15 ಕೋಟಿ ರೂಪಾಯಿ ಕೊಟ್ಟು 'ನಾಗರಹಾವು' ಚಿತ್ರದ ತಮಿಳು ಥಿಯೇಟ್ರಿಕಲ್ ರೈಟ್ಸ್ ತನ್ನದಾಗಿಸಿಕೊಂಡಿದೆ Thenandel Films ಸಂಸ್ಥೆ. ['ನಾಗರಹಾವು' ಬಗ್ಗೆ 'ನಾಗಿಣಿ' ರಮ್ಯಾ ಉದುರಿಸಿದ ಮಾತಿನ ಮುತ್ತು]


ವಿದೇಶಗಳಲ್ಲೂ ಬೇಡಿಕೆ ಇದೆ ಸ್ವಾಮಿ

ಭಾರತದಲ್ಲಿ ಮಾತ್ರ ಅಲ್ಲ, ವಿದೇಶಗಳಲ್ಲೂ 'ನಾಗರಹಾವು' ಚಿತ್ರಕ್ಕೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಅನಿಲ್ ಕುಮಾರ್ ಎಂಬುವವರು 9 ಕೋಟಿ ರೂಪಾಯಿ ಕೊಟ್ಟು ಓವರ್ ಸೀಸ್ ಹಕ್ಕುಗಳನ್ನ ಪಡೆದುಕೊಂಡಿದ್ದಾರೆ. [ಬುಸುಗುಡುವ 'ನಾಗರಹಾವು' ಟೀಸರ್ ಸೂಪರ್ರೋ ಸೂಪರ್.!]


ಹಿಂದಿ ಡಬ್ಬಿಂಗ್ ರೈಟ್ಸ್ ಸೇಲ್

ಸದ್ಯ ಬಂದಿರುವ ಮಾಹಿತಿ ಪ್ರಕಾರ, 9 ಕೋಟಿ ರೂಪಾಯಿಗೆ 'ನಾಗರಹಾವು' ಚಿತ್ರದ ಹಿಂದಿ ಡಬ್ಬಿಂಗ್ ಹಕ್ಕು ಸೇಲ್ ಆಗಿದೆ.


ಸ್ಯಾಟೆಲೈಟ್ ರೈಟ್ಸ್ ಬಾಕಿ ಇದೆ

ಕನ್ನಡ ಮನರಂಜನಾ ವಾಹಿನಿಗಳೂ ಕೂಡ 'ನಾಗರಹಾವು' ಚಿತ್ರದ ಪ್ರಸಾರ ಹಕ್ಕು ಪಡೆಯಲು ನಾ ಮುಂದು ತಾ ಮುಂದು ಅಂತ ಮುಂದೆ ಬಂದಿವೆ. ಕಮ್ಮಿ ಅಂದರೂ 6 ಕೋಟಿ ರೂಪಾಯಿಗೆ 'ನಾಗರಹಾವು' ಚಿತ್ರದ ಪ್ರಸಾರ ಹಕ್ಕು ಕನ್ನಡ ವಾಹಿನಿಯೊಂದರ ಪಾಲಾಗಲಿದೆ ಎಂಬುದನ್ನು ಅಂದಾಜಿಸಲಾಗಿದೆ.


ತೆಲುಗು-ತಮಿಳು ಪ್ರಸಾರ ಹಕ್ಕುಗಳೂ ಕಡಿಮೆ ಇಲ್ಲ.!

ಬರೀ ಕನ್ನಡಕ್ಕೆ 6 ಕೋಟಿ ಲಭ್ಯವಾದರೆ, ತೆಲುಗು ಮತ್ತು ತಮಿಳು ಅವತರಣಿಕೆಯ 'ನಾಗರಹಾವು' ಚಿತ್ರದ ಪ್ರಸಾರ ಹಕ್ಕುಗಳು ತಲಾ 5 ಕೋಟಿ ರೂಪಾಯಿಗೆ ಬಿಕರಿ ಆಗುವ ಸಾಧ್ಯತೆ ಹೆಚ್ಚು.


ನಿರ್ಮಾಪಕರಿಗೆ ಲಾಭ

ಇವನ್ನೆಲ್ಲಾ ಲೆಕ್ಕ ಹಾಕಿದರೆ ಬಿಡುಗಡೆಗೂ ಮುನ್ನವೇ 'ನಾಗರಹಾವು' ಚಿತ್ರ 100 ಕೋಟಿ ರೂಪಾಯಿ ಬಿಜಿನೆಸ್ ಮಾಡಿದ ಹಾಗೆ. ಅಲ್ಲಿಗೆ, ನಿರ್ಮಾಪಕ ಸಾಜಿದ್ ಖುರೇಶಿ ಜೇಬು ತುಂಬು ಹಾಗೆ ಲೆಕ್ಕ.


'ನಾಗರಹಾವು' ಬಿಡುಗಡೆ ಯಾವಾಗ?

'ನಾಗರಹಾವು' ಚಿತ್ರ ಅಕ್ಟೋಬರ್ 14 ರಂದು ತೆರೆಗೆ ಬರುವ ಸಾಧ್ಯತೆ ಇದೆ.


English summary
For the First time in India, CGI Created version of Legendary Actor Dr.Vishuvardhan's 201st movie 'Nagarahavu' is about to make Rs.100 Crore Business prior to release.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada