»   » ನಾಗಾರ್ಜುನ ಕುಟುಂಬದಲ್ಲಿ ಬರುವ ವರ್ಷ ಧಾಂ-ಧೂಂ ಮದುವೆ

ನಾಗಾರ್ಜುನ ಕುಟುಂಬದಲ್ಲಿ ಬರುವ ವರ್ಷ ಧಾಂ-ಧೂಂ ಮದುವೆ

Posted By: ಸೋನು
Subscribe to Filmibeat Kannada

ಟಾಲಿವುಡ್ ನ ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ್ ಮನೆಯಲ್ಲಿ ಸದ್ಯದಲ್ಲೇ 'ಪೀ ಪೀ ಡುಂ ಡುಂ' ಮಂಗಳ ವಾದ್ಯಗಳು ಮೊಳಗಲಿವೆ. ಈ ಮೊದಲು ನಟಿ ಸಮಂತಾ ರುತು ಮತ್ತು ನಟ ನಾಗ ಚೈತನ್ಯ ಅಕ್ಕಿನೇನಿ ಅವರ ನಡುವೆ ಕುಛ್ ಕುಛ್ ಹೋತಾ ಹೈ ಅಂತ ಟಾಲಿವುಡ್ ಅಂಗಳದಲ್ಲಿ ಭಾರಿ ಸುದ್ದಿಯಾಗಿತ್ತು.

ಇದೀಗ ಅದಕ್ಕೆ ಪುಷ್ಠಿ ನೀಡುವಂತೆ ನಟ ನಾಗ ಚೈತನ್ಯ ಮತ್ತು ಸಮಂತಾ ಅವರು ನಿಶ್ಚಿತಾರ್ಥಕ್ಕೆ ತಯಾರಾಗುತ್ತಿದ್ದಾರೆ ಎಂದು ಖುದ್ದು ನಾಗ ಚೈತನ್ಯ ಅವರ ಸಹೋದರ ಅಖಿಲ್ ಅಕ್ಕಿನೇನಿ ಅವರು ತಿಳಿಸಿದ್ದಾರೆ. ಮಾತ್ರವಲ್ಲದೇ ತಮ್ಮ ಮಗನ ಮದುವೆ ಬಗ್ಗೆ ನಟ ನಾಗಾರ್ಜುನ ಅವರು ಕೂಡ ಬಾಯಿ ಬಿಟ್ಟಿದ್ದಾರೆ.[ಪ್ರಜ್ವಲ್ ದೇವರಾಜ್ ಪೀ..ಪೀ..ಪೀ..ಡುಂ..ಡುಂಗೆ ರೆಡಿ]

Nagarjuna Confirms Wedding Bells At Akkineni House

"ನಾಗ ಚೈತನ್ಯನ ವಿಚಾರದಲ್ಲಿ ನಾನು ಮತ್ತು ಅಮಲಾ ತುಂಬಾ ಖುಷಿಯಾಗಿದ್ದೇವೆ. ಅವನು ನೋಡಿರುವ ಹುಡುಗಿ ಅವನನ್ನು ತುಂಬಾ ಸಂತೋಷವಾಗಿ ಇಡುತ್ತಾಳೆ ಅನ್ನೋ ನಂಬಿಕೆ ನಮಗಿದೆ. ನಾವು ಆದಷ್ಟು ಬೇಗ ಈ ವಿಚಾರದ ಬಗ್ಗೆ ಸಿಹಿ ಸುದ್ದಿ ನೀಡುತ್ತೇವೆ".

"ಅಖಿಲ್ ಕೂಡ ತನ್ನ ಬಾಳಸಂಗಾತಿಯನ್ನು ಆಯ್ಕೆ ಮಾಡಿಕೊಂಡಿದ್ದಾನೆ. ಆದರೆ ಈ ಮೊದಲು ಸುದ್ದಿಯಾಗಿತ್ತು ಅಖಿಲ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ ಅಂತ. ಆದರೆ ಅದೆಲ್ಲಾ ಸುಳ್ಳು ಅವನು ಇನ್ನೂ ಎಂಗೇಜ್ ಆಗಿಲ್ಲ" ಎಂದು ಎಲ್ಲಾ ಅಂತೆ-ಕಂತೆ ಸುದ್ದಿಗಳಿಗೆ ನಟ ನಾಗಾರ್ಜುನ ಅವರು ತೆರೆ ಎಳೆದಿದ್ದಾರೆ.[ಸೂಪರ್ ಸ್ಮೈಲ್ ಕ್ವೀನ್ ಸಮಂತಾ ಹೊಸ ಕಿರಿಕ್]

ನಟ ಅಖಿಲ್ ಅಕ್ಕಿನೇನಿ ಅವರು ಕೂಡ ಶ್ರೀಯಾ ಭೂಪಾಲ್ ಎಂಬ ಡಿಸೈನರ್ ಜೊತೆ ಇತ್ತೀಚೆಗೆ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಇವರಿಬ್ಬರ ಲವ್ವಿ-ಡವ್ವಿ ಕೂಡ ಜೋರಾಗೇ ನಡೆಯುತ್ತಿದೆ. ಆದ್ದರಿಂದ ಇಬ್ಬರು ಮಗಂದಿರಿಗೂ ಒಟ್ಟಾಗಿ ಮುಂದಿನ ವರ್ಷ ಮದುವೆ ಮಾಡುವ ಪ್ಲ್ಯಾನ್ ಮಾಡಿದ್ದಾರೆ ನಾಗಾರ್ಜುನ್ ಅವರು. ವಾವ್.! ನಾಗಾರ್ಜುನ ಸ್ವೀಟ್ ಡ್ಯಾಡಿ ಅಲ್ವಾ.[ಹಾಲು-ಜೇನಿನಂತಿದ್ದ ಜೋಡಿ 'ಪ್ರೇಮ'ಕ್ಕೆ ಹುಳಿ ಹಿಂಡಿದ ನಟಿಯಾರು?]

ಸದ್ಯಕ್ಕೆ ನಾಗ ಚೈತನ್ಯ ಅವರು 'ಪ್ರೇಮಂ' ಚಿತ್ರದಲ್ಲಿ ಬ್ಯುಸಿಯಾಗಿದ್ದು, ನಟಿ ಸಮಂತಾ ಅವರು 'ಜನಾತಾ ಗ್ಯಾರೇಜ್' ಒಂದು ಬಿಟ್ಟರೆ ಬೇರೆ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಒಟ್ನಲ್ಲಿ ಮುಂದಿನ ವರ್ಷ ಅಕ್ಕಿನೇನಿ ಕುಟುಂಬದಲ್ಲಿ ಧಾಮ್-ಧೂಮ್ ಆಗಿ ಮದುವೆ ಕಾರ್ಯಗಳು ಜರುಗಲಿವೆ ಅನ್ನೋದು ಪಕ್ಕಾ.[ಬಿಡುಗಡೆಗೂ ಮುನ್ನ ಸದ್ದು ಮಾಡುತ್ತಿದೆ ಪವನ್ ರ 'ಯು-ಟರ್ನ್']

-ಅಖಿಲ್ ಅಕ್ಕಿನೇನಿ ಮತ್ತು ಪ್ರಿಯತಮೆ ಶ್ರೀಯಾ ಭೂಪಾಲ್

-ಅಖಿಲ್ ಅಕ್ಕಿನೇನಿ ಮತ್ತು ಪ್ರಿಯತಮೆ ಶ್ರೀಯಾ ಭೂಪಾಲ್

-ಸಮಂತಾ ಮತ್ತು ನಾಗ ಚೈತನ್ಯ

-ಸಮಂತಾ ಮತ್ತು ನಾಗ ಚೈತನ್ಯ

-ಸಮಂತಾ ಮತ್ತು ನಾಗ ಚೈತನ್ಯ

-ಸಮಂತಾ ಮತ್ತು ನಾಗ ಚೈತನ್ಯ

ನಾಗಾರ್ಜುನ ಮುದ್ದು ಗಂಡು ಮಕ್ಕಳೊಂದಿಗೆ

ನಾಗಾರ್ಜುನ ಮುದ್ದು ಗಂಡು ಮಕ್ಕಳೊಂದಿಗೆ

English summary
Akkineni Nagarjuna is a happy dad now. Though media has flooded with the reports that the actor is against the relationship of Naga Chaitanya and Samantha, he clarified the fuss once for all.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada