»   » ತೆಲುಗಿನ ಸ್ಟಾರ್ ದಂಪತಿ ಪುತ್ರಿಯ ಚೊಚ್ಚಲ ಚಿತ್ರಕ್ಕೆ ನಾಗಶೇಖರ್ ನಿರ್ದೇಶಕ!

ತೆಲುಗಿನ ಸ್ಟಾರ್ ದಂಪತಿ ಪುತ್ರಿಯ ಚೊಚ್ಚಲ ಚಿತ್ರಕ್ಕೆ ನಾಗಶೇಖರ್ ನಿರ್ದೇಶಕ!

Posted By:
Subscribe to Filmibeat Kannada

'ಸಂಜು ವೆಡ್ಸ್ ಗೀತಾ', 'ಮೈನಾ', 'ಮಾಸ್ತಿ ಗುಡಿ' ಸಿನಿಮಾಗಳ ಬಳಿಕ ನಿರ್ದೇಶಕ ನಾಗಶೇಖರ್, ರವಿಚಂದ್ರನ್ ಎರಡನೇ ಪುತ್ರ ವಿಕ್ರಂ ರವಿಚಂದ್ರನ್ ಗಾಗಿ ಒಂದು ಸಿನಿಮಾ ಮಾಡ್ತಾರೆ ಅಂತ ಹೇಳಲಾಗಿತ್ತು. ಅದಕ್ಕಾಗಿ ಫೋಟೋಶೂಟ್ ಕೂಡ ನಡೆದಿತ್ತು. ಆದ್ರೆ, ಆ ಸಿನಿಮಾದ ಬಗ್ಗೆ ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ಸುದ್ದಿನೇ ಇಲ್ಲ. ಸಿನಿಮಾ ನಿಂತ್ಹೋಯ್ತಾ.? ಎಂಬ ಪ್ರಶ್ನೆಗೂ ಉತ್ತರ ಇಲ್ಲ.

ಹೀಗಿರುವಾಗಲೇ, ಅಂಬರೀಶ್ ಪುತ್ರ ಅಭಿಶೇಕ್ ಚೊಚ್ಚಲ ಚಿತ್ರಕ್ಕೆ ನಿರ್ದೇಶಕ ನಾಗಶೇಖರ್ ಆಕ್ಷನ್ ಕಟ್ ಹೇಳ್ತಾರೆ ಎಂಬ ಗುಸು ಗುಸು ಸ್ಯಾಂಡಲ್ ವುಡ್ ನಲ್ಲಿ ಕೇಳಿಬರುತ್ತಿದೆ. ಇದು ಸತ್ಯವೋ, ಸುಳ್ಳೋ ಎಂಬ ಕ್ಲಾರಿಟಿ ಸಿಗುವ ಮುನ್ನವೇ ನಾಗಶೇಖರ್ ಟಾಲಿವುಡ್ ಗೆ ಹಾರುತ್ತಿದ್ದಾರೆ.

ತೆಲುಗಿನ ಸ್ಟಾರ್ ದಂಪತಿಗಳಾದ ರಾಜಶೇಖರ್-ಜೀವಿತಾ ಪುತ್ರಿ ಶಿವಾನಿ ಅವರ ಚೊಚ್ಚಲ ಚಿತ್ರಕ್ಕೆ ನಾಗಶೇಖರ್ ಡೈರೆಕ್ಟರ್ ಅಂತೆ.

Nagashekar to direct Telugu Actor Rajashekar-Jeevithas daughter Shivanis film

ಅಂಬರೀಶ್ ಪುತ್ರ ಅಭಿಶೇಕ್ ಚೊಚ್ಚಲ ಚಿತ್ರಕ್ಕೆ ನಿರ್ದೇಶಕ ಯಾರು.?

ಶಿವಾನಿಗಾಗಿ ನಾಗಶೇಖರ್ ಹೊಸ ಪ್ರೇಮ ಕಥೆ ಬರೆದಿದ್ದಾರಂತೆ. ಆ ಕಥೆ ರಾಜಶೇಖರ್ ಹಾಗೂ ಜೀವಿತಾಗೆ ಇಷ್ಟವಾಗಿದ್ದು, ತಮ್ಮ ಮಗಳ ಲಾಂಚ್ ಚಿತ್ರಕ್ಕೆ ಡೈರೆಕ್ಟರ್ ನಾಗಶೇಖರ್ ಬೆಸ್ಟ್ ಎಂಬ ಅಭಿಪ್ರಾಯ ಪಟ್ಟಿದ್ದಾರಂತೆ.

Nagashekar to direct Telugu Actor Rajashekar-Jeevithas daughter Shivanis film

ಶಿವಾನಿ ಡೆಬ್ಯೂ ಫಿಲ್ಮ್ ಮೂಲಕ ನಾಗಶೇಖರ್ ಟಾಲಿವುಡ್ ಗೆ ಪದಾರ್ಪಣೆ ಮಾಡಲಿದ್ದಾರೆ. ಈಗಾಗಲೇ ಸ್ಕ್ರಿಪ್ಟ್ ವರ್ಕ್ ಪೂರ್ಣಗೊಂಡಿದ್ದು, ನಾಯಕನ ಹುಡುಕಾಟದಲ್ಲಿ ನಿರ್ದೇಶಕ ನಾಗಶೇಖರ್ ತೊಡಗಿದ್ದಾರಂತೆ.

English summary
Kannada Director Nagashekar to direct Telugu Actor Rajashekar-Jeevitha's daughter Shivani's debut film in Tollywood

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X