Just In
Don't Miss!
- Education
UAS Dharwad Recruitment 2021: ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಜ.28ಕ್ಕೆ ನೇರ ಸಂದರ್ಶನ
- Sports
ಐಪಿಎಲ್ 2021: ತಂಡದಿಂದ ಸ್ಟೀವ್ ಸ್ಮಿತ್ ಕೈಬಿಟ್ಟ ರಾಜಸ್ಥಾನ್ ರಾಯಲ್ಸ್
- News
ಒಂದೇ ವಾರದಲ್ಲಿ ಬೃಹತ್ ಕ್ವಾರೆಂಟೈನ್ ಕೇಂದ್ರ ನಿರ್ಮಿಸಿದ ಚೀನಾ
- Lifestyle
ಜನವರಿ 23 ಪರಾಕ್ರಮ ದಿವಸ್: ಸುಭಾಷ್ ಚಂದ್ರ ಬೋಸ್ ಬಗ್ಗೆ ನಿಮಗೆ ತಿಳಿದಿರದ ಸಂಗತಿಗಳು
- Automobiles
ಸನ್ ಫಿಲ್ಮ್ ತೆರವಿಗೆ ವಿಶೇಷ ಕಾರ್ಯಾಚರಣೆ ಆರಂಭಿಸಿದ ಪೊಲೀಸ್ ಇಲಾಖೆ
- Finance
ಸೆನ್ಸೆಕ್ಸ್, ನಿಫ್ಟಿ ಹೊಸ ದಾಖಲೆ; ಟಾಟಾ ಮೋಟಾರ್ಸ್ 6%ಗೂ ಹೆಚ್ಚು ಗಳಿಕೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಭಿಷೇಕ್ ಜೊತೆ ಮತ್ತೆ ಸಿನಿಮಾ ಮಾಡಲ್ವಂತೆ ನಿರ್ದೇಶಕ ನಾಗಶೇಖರ್.!
ರೆಬೆಲ್ ಸ್ಟಾರ್ ಅಂಬರೀಶ್ ಅವರ ಮಗ ಅಭಿಷೇಕ್ ಅಭಿನಯದ ಚೊಚ್ಚಲ ಸಿನಿಮಾ ಅಮರ್ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣ್ತಿದೆ. ಮೈನಾ, ಸಂಜು ವೆಡ್ಸ್ ಗೀತಾ ಖ್ಯಾತಿಯ ನಾಗಶೇಖರ್ ಈ ಚಿತ್ರ ನಿರ್ದೇಶನ ಮಾಡಿದ್ದು, ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.
'ಅಮರ್ ಸಿನಿಮಾ ಚೆನ್ನಾಗಿ ಪ್ರದರ್ಶನ ಆಗ್ತಿದೆ. ಆದರೆ ಕೆಲವರು ಉದ್ದೇಶಪೂರ್ವಕವಾಗಿ ಅಮರ್ ಚೆನ್ನಾಗಿಲ್ಲ, ಥಿಯೇಟರ್ ಗೆ ಹೋಗಬೇಡಿ' ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ನಿರ್ದೇಶಕರು ಬೇಸರ ವ್ಯಕ್ತಪಡಿಸಿದರು.
ಕೆಟ್ಟ ಸಿನಿಮಾವನ್ನು ಜೀವನದಲ್ಲಿ ಮಾಡಲ್ಲ : ನಾಗಶೇಖರ್ ಬೇಸರ
'ಆದರೂ ಈ ಬಗ್ಗೆ ತಲೆಕೆಡಿಸಿಕೊಳ್ಳದ ನಾಗಶೇಖರ್, ನೆಗಿಟೀವ್ ಪ್ರಚಾರನೂ ಒಂದು ರೀತಿ ಪ್ರೇಕ್ಷಕರನ್ನ ಚಿತ್ರಮಂದಿರಕ್ಕೆ ಕರೆದುಕೊಂಡು ಬರುತ್ತೆ' ಎಂದು ಹೇಳುತ್ತಾ ಮತ್ತೊಂದು ಅಚ್ಚರಿ ನಿರ್ಧಾರ ಪ್ರಕಟಿಸಿದರು. ಅದೇನಪ್ಪಾ ಅಂದ್ರೆ ಅಭಿಷೇಕ್ ಜೊತೆ ಮತ್ತೆ ಸಿನಿಮಾ ಮಾಡಲ್ಲ ಎಂದು ಘೋಷಿಸಿದರು. ಯಾಕೆ? ಮುಂದೆ ಓದಿ....

ಬೇಡ ಎಂದು ಇಬ್ಬರು ನಿರ್ಧರಿಸಿದ್ದಾರಂತೆ
ಒಂದು ಸಿನಿಮಾ ಹಿಟ್ ಆದರೆ ಆ ನಿರ್ದೇಶಕ ಮತ್ತು ನಟನ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ ಬರೋದು ಸಂಪ್ರದಾಯ. ಆದರೆ ಈ ವಿಚಾರದಲ್ಲಿ ಅಭಿಷೇಕ್ ಮತ್ತು ನಾಗಶೇಖರ್ ಜೋಡಿ ಬೇರೆ ನಿರ್ಧಾರ ಮಾಡಿದೆ. ಇವರಿಬ್ಬರ ಜೋಡಿಯಲ್ಲಿ ಇನ್ನೊಂದು ಸಿನಿಮಾ ಮಾಡೋದು ಬೇಡ ಎಂದು ಅಭಿ ಮತ್ತು ನಾಗಶೇಖರ್ ನಿರ್ಧರಿಸಿದ್ದಾರೆ.
ಪತ್ರಿಕೆಗಳ ವಿಮರ್ಶೆ : 'ಅಮರ್' ಕೆಲವರಿಗೆ ಇಷ್ಟವಾಗಿದೆ.. ಕೆಲವರಿಗೆ ತೀರಾ ಕಷ್ಟವಾಗಿದೆ..

ಬೇರೆ ನಿರ್ದೇಶಕರ ಜೊತೆ ಕೆಲಸ ಮಾಡ್ಬೇಕು
'ಒಂದು ವೇಳೆ ಮತ್ತೆ ನಾಗಶೇಖರ್ ಜೊತೆಯಲ್ಲಿ ಅಭಿಷೇಕ್ ಸಿನಿಮಾ ಮಾಡಿದ್ರೆ, ಬೇರೆ ನಿರ್ದೇಶಕರು ಅಭಿ ಬಗ್ಗೆ ಯೋಚನೆ ಮಾಡಲ್ಲ. ಅರೇ ನಾಗಶೇಖರ್ ಅವರ ಜೊತೆ ಸಿನಿಮಾ ಮಾಡಲಿ ಬಿಡಿ ಅಂತ ಸುಮ್ಮನಾಗ್ತಾರೆ. ಹಾಗೆ ಆಗಬಾರದು. ಬೇರೆ ಡೈರೆಕ್ಟರ್ ಗಳ ಜೊತೆಯಲ್ಲೂ ಸಿನಿಮಾ ಮಾಡಬೇಕು' ಎಂಬ ಕಾರಣವನ್ನ ನಾಗಶೇಖರ್ ನೀಡಿದ್ರು.
'ಅಮರ್'ಗೆ ನೆಗೆಟಿವ್ ರಿವ್ಯೂ: ಯಂಗ್ ರೆಬಲ್ ಸ್ಟಾರ್ ಪ್ರತಿಕ್ರಿಯೆ

ಮಾಡೋದೇ ಇಲ್ಲ ಅಂತಲ್ಲಾ.!
ಅಭಿಷೇಕ್ ಜೊತೆ ಇನ್ನೊಂದು ಸಿನಿಮಾ ಮಾಡೋದು ಬೇಡ ಅಂದ್ರೆ ಭವಿಷ್ಯದಲ್ಲೂ ಮಾಡೋದು ಬೇಡ ಅಂತಲ್ಲ. ಸದ್ಯಕ್ಕೆ ಬೇಡ ಅಂತ. ನಾಲ್ಕೈದು ಸಿನಿಮಾ ಆಗಲಿ, ಮತ್ತೆ ಒಟ್ಟಿಗೆ ಕೆಲಸ ಮಾಡ್ತೀವಿ ಎಂದು ನಾಗಶೇಖರ್ ಅವರು ಹೇಳಿಕೊಂಡರು.

ನಾಗಶೇಖರ್ ಬೇಸರ
ಅಮರ್ ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಅಪಪ್ರಚಾರ ಮಾಡಿರುವ ಬಗ್ಗೆ ನಿರ್ದೇಶಕ ನಾಗಶೇಖರ್ ಬೇಸರವಾಗಿದ್ದಾರೆ. ಸಂದೇಶ್ ನಾಗರಾಜ್ ನಿರ್ಮಿಸಿದ್ದ ಈ ಚಿತ್ರದಲ್ಲಿ ತಾನ್ಯಹೋಪ್, ರಾಜ್ ದೀಪಕ್ ಶೆಟ್ಟಿ ನಟಿಸಿದ್ದರು. ಅರ್ಜುನ್ ಜನ್ಯ ಸಂಗೀತವಿದೆ.