For Quick Alerts
  ALLOW NOTIFICATIONS  
  For Daily Alerts

  ಹೆಜ್ಜೇನು ದಾಳಿ: ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಆಸ್ಪತ್ರೆಗೆ ದಾಖಲು

  By Suneetha
  |

  'ಅಮೃತಧಾರೆ' ಸಿನಿಮಾ ಖ್ಯಾತಿಯ ಸ್ಯಾಂಡಲ್ ವುಡ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ತಮ್ಮ ಹೊಸ ಚಿತ್ರ 'ಇಷ್ಟಕಾಮ್ಯ' ಸಿನಿಮಾದ ಚಿತ್ರೀಕರಣ ನಡೆಸುತ್ತಿದ್ದ ಸಂದರ್ಭದಲ್ಲಿ ಹೆಜ್ಜೇನು ಧಾಳಿ ನಡೆಸಿದ ಪರಿಣಾಮವಾಗಿ ತೀವ್ರ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  ಹೊಸನಗರ ಸಮೀಪದ ಬರ್ವೆ ಎಂಬಲ್ಲಿನ ಹಿನ್ನೀರ ಪ್ರದೇಶದ ತೂಗು ಸೇತುವೆ ಬಳಿ ನಾಗತಿಹಳ್ಳಿ ಚಂದ್ರಶೇಖರ್ ಅವರು ತಮ್ಮ ಹೊಸ ಚಿತ್ರ 'ಇಷ್ಟಕಾಮ್ಯ' ಚಿತ್ರದ ಶೂಟಿಂಗ್ ನಡೆಸುತ್ತಿದ್ದ ಸಂದರ್ಭದಲ್ಲಿ ಇಂತಹ ಅಹಿತಕರ ಘಟನೆ ನಡೆದಿದೆ.

  ಇನ್ನು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮಾತ್ರವಲ್ಲಧೇ ಚಿತ್ರತಂಡದಲ್ಲಿದ್ದ ಕ್ಯಾಮರಾಮೆನ್ ಚಂದ್ರು ಹಾಗೂ ನಿರ್ದೇಶಕರ ಕಾರು ಚಾಲಕ ಕೃಷ್ಣ ಅವರ ಮೇಲೂ ಹೆಜ್ಜೇನು ಧಾಳಿ ನಡೆಸಿದೆ.[ಎರಡು ವರ್ಷದ ನಂತ್ರ ಮತ್ತೆ ಬಂದ ನಾಗತಿಹಳ್ಳಿ ಚಂದ್ರಶೇಖರ್ ]

  ಗಾಯಗೊಂಡ ನಿರ್ದೇಶಕ ಚಂದ್ರಶೇಖರ್ ಹಾಗೂ ಕೃಷ್ಣ ಅವರನ್ನು ಕೊಲ್ಲೂರು ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ನಾಗತಿಹಳ್ಳಿ ಚಂದ್ರಶೇಖರ್ ಅವರನ್ನು ಕುಂದಾಪುರದ ಚಿನ್ಮಯಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

  'ಅಗ್ನಿ ಸಾಕ್ಷಿ' ಖ್ಯಾತಿಯ ನಟ ವಿಜಯ್ ಸೂರ್ಯ ಹಾಗೂ 'ಅಶ್ವಿನಿ ನಕ್ಷತ್ರ' ಖ್ಯಾತಿಯ ನಟಿ ಮಯೂರಿ ಅವರು ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ ನಾಗತಿಹಳ್ಳಿ ಅವರ 'ಇಷ್ಟಕಾಮ್ಯ' ಚಿತ್ರದ ಚಿತ್ರೀಕರಣಕ್ಕೆಂದು ಮಲೆನಾಡಿನಲ್ಲಿ ಸುಮಾರು 45 ಕ್ಕೂ ಅಧಿಕ ದಿನಗಳ ಕಾಲ ಶೂಟಿಂಗ್ ಮಾಡುತ್ತಿದ್ದ ತಂಡ ಬುಧವಾರ (ನವೆಂಬರ್ 11) ಬೆಳಿಗ್ಗೆ ನಗರದ ನಿಟ್ಟೂರು ಸಮೀಪದ ಬರ್ವೆ ಎಂಬಲ್ಲಿನ ತೂಗು ಸೇತುವೆ ಬಳಿ ಇರುವ ಜಾಗಕ್ಕೆ ಶೂಟಿಂಗ್ ಗೆ ಆಗಮಿಸಿದ್ದರು.[ಹೊಸ ಚಿತ್ರ ಕೈಗೆತ್ತಿಕೊಂಡ ನಾಗತಿಹಳ್ಳಿ ಚಂದ್ರಶೇಖರ್]

  ಇನ್ನೇನು ಶೂಟಿಂಗ್ ಆರಂಭಿಸಬೇಕು ಎನ್ನುವಷ್ಟರಲ್ಲಿ ಅದೆಲ್ಲೋ ಇದ್ದ ಹೆಜ್ಜೇನುಗಳು ನಿರ್ದೇಶಕರ ಮೇಲೆ ಧಾಳಿ ನಡೆಸಿವೆ. ತಕ್ಷಣ ನಿರ್ದೇಶಕರು ಉಳಿದವರಿಗೆ ಮಾಹಿತಿ ನೀಡಿದ್ದಾರೆ. ಆದರೆ ಅಷ್ಟರಲ್ಲೇ ಕೆಲವರಿಗೆ ಜೇನು ಕಡಿದಿದೆ.

  ಸದ್ಯಕ್ಕೆ ಕುಂದಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ನಿರ್ದೇಶಕರು ಸಂಪೂರ್ಣ ಗುಣಮುಖರಾಗಿದ್ದು, ಈ ಬಗ್ಗೆ ಯಾವುದೇ ಆತಂಕ ಬೇಡ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ, ಇನ್ನು ಗುರುವಾರದಂದು (ನವೆಂಬರ್ 12) ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ.

  English summary
  Renowned film maker Nagathihalli Chandrashekar has been admitted to a hospital in Kundapur after he suffered severe injuries due to bee sting during shooting of his upcoming film 'Ishtakamya', at Baruve village near Kodachadri Hills in Hosanagar taluk on Wednesday (November 11).
  Thursday, November 12, 2015, 13:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X