»   » ಎರಡು ವರ್ಷದ ನಂತ್ರ ಮತ್ತೆ ಬಂದ ನಾಗತಿಹಳ್ಳಿ ಚಂದ್ರಶೇಖರ್

ಎರಡು ವರ್ಷದ ನಂತ್ರ ಮತ್ತೆ ಬಂದ ನಾಗತಿಹಳ್ಳಿ ಚಂದ್ರಶೇಖರ್

Posted By:
Subscribe to Filmibeat Kannada

'ಅಮೇರಿಕಾ..ಅಮೇರಿಕಾ', 'ನನ್ನ ಪ್ರೀತಿಯ ಹುಡುಗಿ', 'ಅಮೃತಧಾರೆ' ಅಂತಹ ಸದಭಿರುಚಿಯ ಚಿತ್ರಗಳನ್ನ ಕೊಟ್ಟ ಖ್ಯಾತ ಲೇಖಕ-ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ತಮ್ಮ ಎರಡು ವರ್ಷಗಳ ತಪಸ್ಸಿನ ನಂತರ ಮತ್ತೆ ಅದ್ಭುತ ದೃಶ್ಯಕಾವ್ಯದೊಂದಿಗೆ ಪ್ರತ್ಯಕ್ಷವಾಗುತ್ತಿದ್ದಾರೆ.

ಈ ಸಲ ಅವರು ಆರಿಸಿಕೊಂಡಿರುವ ಕಾದಂಬರಿ 80 ರ ದಶಕದಲ್ಲಿ ಪ್ರಕಟಗೊಂಡ ದೊಡ್ಡೇರಿ ವೆಂಕಟಗಿರಿರಾವ್ ಅವರ 'ಇಷ್ಟಕಾಮ್ಯ'. ಸ್ವಯಂ ಲೇಖಕರಾದ ನಾಗತಿಹಳ್ಳಿ ಚಂದ್ರಶೇಖರ್ ಅವರು ಅನ್ಯ ಲೇಖಕರ ಕೃತಿಯನ್ನು ಆರಿಸಿಕೊಂಡಿರುವುದು ಗಮನಾರ್ಹ. [ಹೊಸ ಚಿತ್ರ ಕೈಗೆತ್ತಿಕೊಂಡ ನಾಗತಿಹಳ್ಳಿ ಚಂದ್ರಶೇಖರ್]

Nagathihalli Chandrashekar is back with the new film

ಕಿರುತೆರೆಯಲ್ಲಿ ಅರಳುತ್ತಿರುವ 'ಅಗ್ನಿಸಾಕ್ಷಿ' ಧಾರಾವಾಹಿ ಖ್ಯಾತಿಯ ವಿಜಯ್ ಸೂರ್ಯ ಮತ್ತು 'ಅಶ್ವಿನಿ ನಕ್ಷತ್ರ' ಖ್ಯಾತಿಯ ಮಯೂರಿ ಮತ್ತು ಕಾವ್ಯ ಶೆಟ್ಟಿ ಈ ಚಿತ್ರದ ಪ್ರಮುಖ ಪಾತ್ರಧಾರಿಗಳಾಗಿ ಆಯ್ಕೆ ಆಗಿದ್ದಾರೆ.

Nagathihalli Chandrashekar is back with the new film

ಐವತ್ತು ದಿನಗಳ ಒಂದೇ ಶೆಡ್ಯೂಲ್ ನಲ್ಲಿ ಚಿತ್ರೀಕರಣ ನಡೆಯಲಿದೆ. ಚಿಕ್ಕಮಗಳೂರಿನ ಸುಂದರ ಸಹ್ಯಾದ್ರಿ ಶ್ರೇಣಿಯಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಮುಂಗಾರು ಮಳೆಯ ಅಬ್ಬರ ನಿಲ್ಲುವುದಕ್ಕೆ ಚಿತ್ರತಂಡ ಕಾಯುತ್ತಿದೆ. [ನಾಗತಿಹಳ್ಳಿ ಚಂದ್ರಶೇಖರ್ ಟೆಂಟ್ ಶಾಲೆ ಆರಂಭ]

Nagathihalli Chandrashekar is back with the new film

ಈ ಬಾರಿಯ ಫಿಲ್ಮ್ ಫೇರ್ ಪ್ರಶಸ್ತಿ ವಿಜೇತ ಅಜನೀಶ್ ಲೋಕನಾಥ್ ರಾಗ ಸಂಯೋಜನೆಯಲ್ಲಿ ತೊಡಗಿದ್ದಾರೆ. ಎರಡು ವರ್ಷಗಳ ಗ್ಯಾಪ್ ನಲ್ಲಿ ಹಲವಾರು ರೀಮೇಕ್ ಚಿತ್ರಗಳನ್ನ ನಿರ್ದೇಶಿಸುವ ಅವಕಾಶಗಳು ಬಂದರೂ, ಅದನ್ನ ಒಪ್ಪದೆ ನಾಗತಿಹಳ್ಳಿ ಚಂದ್ರಶೇಖರ್ ಈ ಚಿತ್ರವನ್ನ ಕೈಗೆತ್ತಿಕೊಂಡಿದ್ದಾರಂತೆ. 'ಇಷ್ಟಕಾಮ್ಯ' ಕಾದಂಬರಿ ಆಧಾರಿತ ಈ ಚಿತ್ರಕ್ಕೆ ಸರಳ ಕನ್ನಡ ಹೆಸರಿನ ಅನ್ವೇಷಣೆಯಲ್ಲಿದ್ದಾರೆ 'ಮೇಷ್ಟ್ರು' ನಾಗತಿಹಳ್ಳಿ.

English summary
Kannada Director Nagathihalli Chandrashekar is back with the new film after 2 years. The film story is inspired from a novel 'Ishtakamya', which features Vijay Surya and Mayuri.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada