»   » 'ಆಪರೇಷನ್ ಆಲಮೇಲಮ್ಮ'ಗೆ ಭೇಷ್ ಎಂದ ನಾಗತಿಹಳ್ಳಿ ಚಂದ್ರಶೇಖರ್

'ಆಪರೇಷನ್ ಆಲಮೇಲಮ್ಮ'ಗೆ ಭೇಷ್ ಎಂದ ನಾಗತಿಹಳ್ಳಿ ಚಂದ್ರಶೇಖರ್

Posted By:
Subscribe to Filmibeat Kannada

ಸಿಂಪಲ್ ಸುನಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ 'ಆಪರೇಷನ್ ಅಲಮೇಲಮ್ಮ' ಚಿತ್ರದ ಬಗ್ಗೆ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇತ್ತೀಚೆಗಷ್ಟೇ ಸಿನಿಮಾ ನೋಡಿದ ನಾಗತಿಹಳ್ಳಿ ಅವರು ಚಿತ್ರದ ನಿರ್ದೇಶಕ ಹಾಗೂ ಅವರ ಕೆಲಸದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ನಾಗತಿಹಳ್ಳಿ ಚಂದ್ರಶೇಖರ್ ಅವರು ''ಆಲಮೇಲಮ್ಮ ಚಿತ್ರ ಒಂದು ಪರಿಪೂರ್ಣ ಮನರಂಜನೆ ನೀಡುವಂತಹ ಸಿನಿಮಾ ಎಂದು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಸರಳವಾದ ಸಿನಿಮಾದ ಮಾಡಿ ಪ್ರೇಕ್ಷಕರ ಮನ್ನಣೆ ಗಳಿಸಿರುವುದಕ್ಕೆ ಭೇಷ್ ಎಂದಿದ್ದಾರೆ.

'ಅಲಮೇಲಮ್ಮ' ವಿಮರ್ಶೆ: ಸಿಂಪಲ್ಲಾಗ್ ಒಂದು 'ಕಿಡ್ನಾಪ್' ಸ್ಟೋರಿ

 Nagathihalli Chandrashekhar Appreciate To Operation Alamelamma

''ಆಲಮೇಲಮ್ಮ' ನೋಡಿದೆ. ನಮ್ಮ ಸುನಿ ಅಸಲಿ ಪ್ರತಿಭೆ. ಕಡಿಮೆ ಬಜೆಟ್ನಲ್ಲಿ ಗೆಲ್ಲುವ ಸಿನಿಮಾ ಸೃಷ್ಟಿಸಬಹುದೆ ಎನ್ನುವುದಕ್ಕೆ ಇದು OMK (ಒಂದು ಮೊಟ್ಟೆಯ ಕಥೆ) ನ೦ತರ ಇನ್ನೊ೦ದು ಉದಾಹರಣೆ. ಹಾಸ್ಯ/ಕೌತುಕತೆ/ಮಾತಿನ ಮಜಾ/ಮೋಹಕ ಅಭಿನಯ ಇವೆಲ್ಲತರ ಹದವಾದ ಪಾಕ ಇದು. ಛಾಯಾಗ್ರಹಣ ಇನ್ನೂ ಉತ್ತಮವಾಗಿರಬಹುದಿತ್ತು'' ಎಂದು ಹಿರಿಯ ನಿರ್ದೇಶಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'ಅಲಮೇಲಮ್ಮ'ನ ಆಪರೇಷನ್ ಮುಗಿದಿಲ್ಲ, ಮತ್ತೊಂದು ಕಥೆ ಆರಂಭ.!

ಜುಲೈ 21ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದ ಈ ಚಿತ್ರಕ್ಕೆ ಸಿಂಪಲ್ ಸುನಿ ಆಕ್ಷನ್ ಕಟ್ ಹೇಳಿದ್ದರು. ಕಾಮಿಡಿ ಸಸ್ಪೆನ್ಸ್ ಥ್ರಿಲ್ಲರ್ ಕಥೆಯಲ್ಲಿ ರಿಷಿ ಹಾಗೂ ನಟಿ ಶ್ರದ್ಧಾ ಶ್ರಿನಾಥ್, ರಾಜೇಶ್ ನಟರಂಗ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಚಿತ್ರಕ್ಕೆ ಜೂಡಾ ಸ್ಯಾಂಡಿ ಸಂಗೀತ ಮತ್ತು ಹಿನ್ನೆಲೆ ನೀಡಿದ್ದರು. ಅಭಿಷೇಕ್ ಕಾಸರಗೂಡು ಅವರ ಛಾಯಾಗ್ರಹಣ ಚಿತ್ರಕ್ಕಿತ್ತು.

English summary
Kannada Director nagathihalli chandrashekhar has taken his Facebook account to Appreciate Kannada Movie operation alamelamma.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X