»   » ಗಾಂಧಿನಗರಕ್ಕೆ ಅಪ್ಪಳಿಸಲಿದೆ ಭಾರೀ ಬ್ರೇಕಿಂಗ್ ನ್ಯೂಸ್

ಗಾಂಧಿನಗರಕ್ಕೆ ಅಪ್ಪಳಿಸಲಿದೆ ಭಾರೀ ಬ್ರೇಕಿಂಗ್ ನ್ಯೂಸ್

Posted By:
Subscribe to Filmibeat Kannada

ನಾಳೆ (ಮೇ 18, 2012) ರಾಜ್ಯದಾದ್ಯಂತ ಬಿಡುಗಡೆಯಾಗಲಿರುವ ನಾಗತಿಹಳ್ಳಿ ಚಂದ್ರಶೇಖರ್ 'ಬ್ರೇಕಿಂಗ್ ನ್ಯೂಸ್' ಚಿತ್ರದಲ್ಲಿ ಏನಿರಬಹುದೆಂಬ ಎಲ್ಲರ ಕತೂಹಲಕ್ಕೆ ಉತ್ತರ ಇಲ್ಲಿದೆ. ಇದು ಇನ್ನೊಂದು 'ಪೀಪ್ಲಿ ಲೈವ್' ಚಿತ್ರ ಎಂಬ ಕೆಲವರ ವಾದವನ್ನು ನಾಗತಿಹಳ್ಳಿ ತಳ್ಳಿಹಾಕಿದ್ದಾರೆ. "ಹೋಲಿಕೆಗಳು ಸಹಜ. ಆದರೆ ಇದು ಅದಲ್ಲ. ಎಲೆಕ್ಟ್ರಾನಿಕ್ ಹಾಗೂ ಟಿವಿ ಮಾಧ್ಯಮಗಳು ಮಾಡುವ ಸೆನ್ಸೇಷನ್ ಗಳು ಹಾಗೂ ಅದರಿಂದಾಗುವ ಅನಾಹುತಗಳು ಈ ಚಿತ್ರದಲ್ಲಿವೆ ಎಂದಿದ್ದಾರೆ.

ನಾಗತಿಹಳ್ಲಿ ಪ್ರಕಾರ "ಈ ರೀತಿಯ ಚಿತ್ರ ಕನ್ನಡದಲ್ಲಿ ತೆರೆಗೆ ಬರುತ್ತಿರುವುದು ಇದೇ ಮೊದಲು. ಇದುವೆರೆಗೆ ಯಾರೂ ಮಾಧ್ಯಮಗಳು ಹಾಗೂ ಬ್ರೇಕಿಂಗ್ ನ್ಯೂಸ್ ಗಳ ಬಗ್ಗೆ ಚಿತ್ರ ಮಾಡರಲಿಲ್ಲ. ಈ ಚಿತ್ರ ಗಂಭೀರ ಸಂಗತಿಯ ವಿಷಯವನ್ನು ಒಳಗೊಂಡಿದ್ದರೂ ಚಿತ್ರದಲ್ಲಿ ಅದನ್ನು ಹಾಸ್ಯಮಯವಾಗಿ, ವಿಡಂಬನಾತ್ಮಕವಾಗಿ ಹೇಳಲಾಗಿದೆ. ಇದೊಂದು ಕಲ್ಪಿತ ಕಥೆಯಲ್ಲ, ಬದಲಾಗಿ ನೈಜ ಕಥೆ, ನೈಜ ಘಟನೆಗಳನ್ನೊಳಗೊಂಡಿದೆ.

ಆದರೆ ಚಿತ್ರಕಥೆಯಲ್ಲಿ ಅದಕ್ಕೆ ಸಿನಿಮೀಯ ಸ್ಪರ್ಶ ಕೊಡಲಾಗಿದೆ. ಇಲ್ಲಿ ನೈಜ ವ್ಯಕ್ತಿಗಳಿದ್ದಾರೆ ಆದರೆ ನಿರ್ಧಿಷ್ಟ ವ್ಯಕ್ತಿಗಳಿಲ್ಲ. ಯಾರು, ಏನು ಎಲ್ಲವೂ ಅರ್ಥವಾಗಬೇಕಾದರೆ ಸಿನಿಮಾ ನೋಡಿ" ಎಂದಿದ್ದಾರೆ ಮೇಷ್ಟ್ರು. ನಾಳೆ 80ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಬ್ರೇಕಿಂಗ್ ನ್ಯೂಸ್' ಅಪ್ಪಳಿಸಲಿದೆ. ಕೃಷ್ಟನ್ ಲವ್ ಸ್ಟೋರಿ ಜೋಡಿ, ಅಜಯ್ ರಾವ್ ಹಾಗೂ ರಾಧಿಕಾ ಪಂಡಿತ್ ಬ್ರೇಕಿಂಗ್ ನ್ಯೂಸ್ ನೀಡಲಿದ್ದಾರೆ. (ಒನ್ ಇಂಡಿಯಾ ಕನ್ನಡ)

English summary
Nagathihalli Chandrashekhar direction movie Breaking News releases tomorrow, on 18th May 2012, all over Karnataka. Krishnan Love Story pair Ajay Rao and Radhika Pandit are in Lead Role. 
 
Please Wait while comments are loading...