For Quick Alerts
  ALLOW NOTIFICATIONS  
  For Daily Alerts

  ಗುಬ್ಬಿ ಸ್ಟೈಲಿಶ್ ಚಿತ್ರ 'ನಮ್ ದುನಿಯಾ ನಮ್ ಸ್ಟೈಲ್'

  By Rajendra
  |

  ಪ್ರೀತಂ ಗುಬ್ಬಿ ನಿರ್ದೇಶನದ ಸ್ಟೈಲಿಶ್ ಚಿತ್ರವೇ 'ನಮ್ ದುನಿಯಾ ನಮ್ ಸ್ಟೈಲ್'. ಹಲವಾರು ವಿಶೇಷತೆಗಳಿಂದ ತುಂಬಿರುವ ಈ ಚಿತ್ರ ಕುತೂಹಲ ಮೂಡಿಸಿದೆ. ಇದೇ ಜೂನ್ 28ಕ್ಕೆ ತೆರೆಕಾಣುತ್ತಿದೆ. ಈ ಚಿತ್ರದ ಬಹುತೇಕ ಭಾವವನ್ನು ಮಲೇಷ್ಯಾದಲ್ಲಿ ಚಿತ್ರೀಕರಿಸಿರುವುದು ವಿಶೇಷ.

  ಈ ಚಿತ್ರದಲ್ಲಿ ಇಬ್ಬರು ವಿದೇಶಿ ಕಲಾವಿದರನ್ನೂ ಬಳಸಿಕೊಳ್ಳಲಾಗಿದೆ. ಒಬ್ಬರು ಯೂರೋಪಿನ ನಟ ಹಾಗೂ ಇನ್ನೊಬ್ಬ ನಟಿ ಚೀನಾದವರು. ಚಿತ್ರದಲ್ಲಿ ಇವರಿಬ್ಬರು ಪ್ರಮುಖ ಪಾತ್ರವಹಿಸುತ್ತಾರೆ. ಅಲ್ಲಿನ ಸಂಸ್ಕೃತಿ, ಭಾಷೆಯ ಬಗ್ಗೆ ತಿಳಿಹೇಳುವ ಪಾತ್ರ ಅವರದು.

  ಇದೊಂದು ಯೂತ್ ಫುಲ್ ಎಂಟರ್ ಟೈನರ್ ಆಗಿದ್ದು ಆರಂಭದ ಇಪ್ಪತ್ತು ನಿಮಿಷ ಹಾಗೂ ಕ್ಲೈಮ್ಯಾಕ್ಸ್ ಸನ್ನಿವೇಶ ಹೊರತುಪಡಿಸಿದರೆ ಉಳಿದ ಭಾಗವನ್ನು ಮಲೇಷ್ಯಾದಲ್ಲಿಯೇ ಚಿತ್ರೀಕರಿಸಲಾಗಿದೆ. ಕೊಲಾಲಂಪುರ, ಲಂಕಾವಿ, ಪೆನಾಂಗ್, ಜಾರ್ಜ್ ಟೌನ್ ಮುಂತಾದ ಕಡೆ ಚಿತ್ರೀಕರಿಸಲಾಗಿದೆ.

  ಲವ್ ಮತ್ತು ಫ್ರೆಂಡ್ ಶಿಪ್ ಕುರಿತ ಕಥಹಂದರನ್ನು ಒಳಗೊಂಡ ಈ ಚಿತ್ರ ಮೂವರು ಬಾಲ್ಯ ಸ್ನೇಹಿತರ ಸುತ್ತ ಸುತ್ತುತ್ತದೆ. ಪ್ರೀತಂ ಆಗಿ ಲಿಖಿತ್ ಶೆಟ್ಟಿ, ಯೋಗಿಯಾಗಿ ಸುನಿಲ್ ನಾಗಪ್ಪ ಹಾಗೂ ಉಮೇಶ್ ಪಾತ್ರದಲ್ಲಿ ವಿನಾಯಕ ಜೋಷಿ ಕಾಣಿಸಲಿದ್ದಾರೆ.

  ಕೃಷ್ಣನಾಗಪ್ಪ, ವಿನಾಯಕಜೋಷಿ, ಲಿಖಿತ್ ಶೆಟ್ಟಿ, ಮಿಲನ ನಾಗರಾಜ್, ಕಾವ್ಯಾಶೆಟ್ಟಿ, ರಂಗಾಯಣರಘು, ಸಾಧುಕೋಕಿಲಾ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಚಿತ್ರದ ನಾಯಕ ನಟರಲ್ಲಿ ಒಬ್ಬರಾಗಿರುವ ವಿನಾಯಕ ಜೋಷಿ ಅವರ ಅನುಪಸ್ಥಿತಿಯಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಕಾರಣ ಅವರು ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಯಲ್ಲಿ ಪಾಲ್ಗೊಳ್ಳಲು ಪುಣೆಗೆ ಈಗಾಗಲೆ ಹೋರಟಿದ್ದಾರೆ.

  ಗುಬ್ಬಿ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ನಮ್ ದುನಿಯಾ ನಮ್ ಸ್ಟೈಲ್ ಚಿತ್ರ ಕ್ಕೆ ಪ್ರೀತಂ ಗುಬ್ಬಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರಕ್ಕೆ ಎಚ್.ಸಿ.ವೇಣು ಅವರ ಛಾಯಾಗ್ರಹಣವಿದೆ. ಶಾನ್ ರೆಹಮಾನ್ ಸಂಗೀತ, ದೀಪು.ಎಸ್.ಕುಮಾರ್ ಸಂಕಲನ, ಹರ್ಷ ನೃತ್ಯ ನಿರ್ದೇಶನ, ರವಿವರ್ಮ ಸಾಹಸ, ಮೋಹನ್.ಬಿ.ಕೆರೆ ಕಲಾ ನಿರ್ದೇಶನವಿದೆ. (ಏಜೆನ್ಸೀಸ್)

  English summary
  Pretham Gubbi's stylish Kannada film Nam Duniya Nam Style (NDNS) releasing on 28th June. NDNS movie story about Love and Friendship and it talks about three childhood friends PREETHAM(Likith Shetty)-YOGI(Sunil Nagappa)-UMESH (Vinayak Joshi).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X