For Quick Alerts
  ALLOW NOTIFICATIONS  
  For Daily Alerts

  'ಮಾರ್ಟಿನ್' ಲಾಂಚ್ ವೇಳೆ ಖುಷಿ ಸುದ್ದಿ ಕೊಟ್ಟ ನಂದಕಿಶೋರ್-ಧ್ರುವ ಸರ್ಜಾ

  |

  'ಪೊಗರು' ಸಿನಿಮಾ ನಂತರ ನಂದಕಿಶೋರ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್‌ನಲ್ಲಿ 'ದುಬಾರಿ' ಆರಂಭವಾಗಿತ್ತು. ಚಿತ್ರದ ಸ್ಕ್ರಿಪ್ಟ್ ಪೂಜೆ ಕೂಡ ಮುಗಿದಿತ್ತು. ಚಿತ್ರೀಕರಣಕ್ಕೆ ಹೋಗ್ತಾರೆ ಎನ್ನುವಷ್ಟರಲ್ಲಿ ದುಬಾರಿ ತಾತ್ಕಾಲಿಕವಾಗಿ ಸ್ಥಗಿತವಾಯಿತು. ಆ ಕ್ಷಣಕ್ಕೆ ದುಬಾರಿ ನಿಲ್ಲಲು ಕಾರಣ ಏನು ಎನ್ನುವುದಕ್ಕೆ ಸ್ಪಷ್ಟ ಕಾರಣ ಬಹಿರಂಗವಾಗಿಲ್ಲ. ಧ್ರುವ ಸರ್ಜಾ ಮತ್ತು ನಂದಕಿಶೋರ್ ನಡುವೆ ಮನಸ್ತಾಪ ಉಂಟಾಗಿದೆ, ನಿರ್ಮಾಪಕ ಮತ್ತು ನಂದಕಿಶೋರ್ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿಗಳು ಚರ್ಚೆಯಾದವು.

  ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 'ಮಾರ್ಟಿನ್' ಅವತಾರಕ್ಕೆ ಅಭಿಮಾನಿಗಳು ಫಿದಾಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 'ಮಾರ್ಟಿನ್' ಅವತಾರಕ್ಕೆ ಅಭಿಮಾನಿಗಳು ಫಿದಾ

  'ದುಬಾರಿ' ಸೈಡಿಗೆ ಇಟ್ಟು ಎಪಿ ಅರ್ಜುನ್ ಜೊತೆ ಧ್ರುವ ಸರ್ಜಾ ಹೊಸ ಸಿನಿಮಾ ಆರಂಭಿಸಿದರು. 'ದುಬಾರಿ' ಮಾಡಬೇಕಿದ್ದ ನಿರ್ಮಾಪಕ ಉದಯ್ ಮೆಹ್ತಾ ಅವರೇ ಅದ್ಧೂರಿ ಜೋಡಿಯ ಹೊಸ ಚಿತ್ರಕ್ಕೆ ಬಂಡವಾಳ ಹಾಕಿದರು. ಇದೆಲ್ಲವೂ ನಂದ ಕಿಶೋರ್ ವಿಚಾರದಲ್ಲಿ ಏನೋ ಆಗಿದೆ ಎಂಬ ಅನುಮಾನಕ್ಕೆ ಕಾರಣವಾಗಿತ್ತು. ಆದ್ರೆ, ಮಾರ್ಟಿನ್ ಸಿನಿಮಾದ ಟೈಟಲ್ ಬಿಡುಗಡೆ ಕಾರ್ಯಕ್ರಮದಲ್ಲಿ ಈ ಎಲ್ಲಾ ಊಹಾಪೋಹಗಳಿಗೆ ಬ್ರೇಕ್ ಬಿದ್ದಿದೆ. ದುಬಾರಿ ಸಿನಿಮಾದ ಭವಿಷ್ಯ ಏನು? ನಂದ ಕಿಶೋರ್-ಧ್ರುವ ಸ್ನೇಹ ಏನಾಗಿದೆ ಎನ್ನುವುದಕ್ಕೆ ಸ್ಪಷ್ಟನೆ ಸಿಕ್ಕಿದೆ. ಮುಂದೆ ಓದಿ...

  'ಮಾರ್ಟಿನ್' ಲಾಂಚ್‌ನಲ್ಲಿ ನಂದಕಿಶೋರ್

  'ಮಾರ್ಟಿನ್' ಲಾಂಚ್‌ನಲ್ಲಿ ನಂದಕಿಶೋರ್

  ಎಪಿ ಅರ್ಜುನ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ ಸಿನಿಮಾದ ಟೈಟಲ್ ಲಾಂಚ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ನಿರ್ದೇಶಕ ನಂದಕಿಶೋರ್ ಸಹ ಭಾಗಿಯಾಗಿದ್ದರು. ಸರ್ಪ್ರೈಸ್ ಎನ್ನುವಂತೆ ಪೊಗರು ನಿರ್ದೇಶಕ ಪ್ರತ್ಯಕ್ಷವಾಗುತ್ತಿದ್ದಂತೆ ಗೊಂದಲಗಳಿಗೆ ತೆರೆ ಬಿತ್ತು. ಆಮೇಲೆ ಸ್ವತಃ ನಂದಕಿಶೋರ್ ಅವರೇ ದುಬಾರಿ ಚಿತ್ರದ ಬಗ್ಗೆ ಸ್ಪಷ್ಟನೆ ಕೊಟ್ಟರು.

  ದುಬಾರಿ ನಿಂತಿಲ್ಲ...

  ದುಬಾರಿ ನಿಂತಿಲ್ಲ...

  ದುಬಾರಿ ಸಿನಿಮಾ ನಿಂತು ಹೋಗಿದೆ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ಈ ಪ್ರಾಜೆಕ್ಟ್ ನಿಂತಿಲ್ಲ ಎಂದು ಸ್ವತಃ ನಿರ್ದೇಶಕ ನಂದ ಕಿಶೋರ್ ಸ್ಪಷ್ಟನೆ ಕೊಟ್ಟಿದ್ದಾರೆ. ''ದುಬಾರಿ ಸಿನಿಮಾ ನಿಂತಿಲ್ಲ, ಬಹುತೇಕ ಚಿತ್ರೀಕರಣ ವಿದೇಶದಲ್ಲಿ ಮಾಡಬೇಕಿದೆ. ಈಗಿನ ಕೋವಿಡ್ ಸಮಯದಲ್ಲಿ ಅದು ಸಾಧ್ಯವಿಲ್ಲ. ಹಾಗಾಗಿ, ಸದ್ಯಕ್ಕೆ ಬೇಡ ಎಂದು ಬ್ರೇಕ್ ಕೊಟ್ಟಿದ್ದೇವೆ ಅಷ್ಟೇ. ಎಲ್ಲವೂ ಸಹಜ ಸ್ಥಿತಿಗೆ ಮರಳಿದ ನಂತರ ದುಬಾರಿ ಮುಂದುವರಿಯುತ್ತದೆ'' ಎಂದು ಪೊಗರು ಡೈರೆಕ್ಟರ್ ಹೇಳಿದರು.

  'ಅದ್ದೂರಿ' ಜೋಡಿಯ ಹೊಸ ಸಿನಿಮಾ ಪ್ರಾರಂಭಕ್ಕೂ ಮೊದಲೇ ಆಡಿಯೋ ರೈಟ್ಸ್ ಸೇಲ್'ಅದ್ದೂರಿ' ಜೋಡಿಯ ಹೊಸ ಸಿನಿಮಾ ಪ್ರಾರಂಭಕ್ಕೂ ಮೊದಲೇ ಆಡಿಯೋ ರೈಟ್ಸ್ ಸೇಲ್

  ನಾನು-ಧ್ರುವ ಚೆನ್ನಾಗಿದ್ದೇವೆ

  ನಾನು-ಧ್ರುವ ಚೆನ್ನಾಗಿದ್ದೇವೆ

  ಧ್ರುವ ಸರ್ಜಾ ಮತ್ತು ನಂದಕಿಶೋರ್ ನಡುವಿನ ಸಂಬಂಧವೂ ಚೆನ್ನಾಗಿದೆ ಎಂದು ಹೇಳಿದರು. ''ಧ್ರುವ ಸರ್ಜಾ ನಮ್ಮ ಮನೆ ಮಗು. ಯಾವತ್ತೂ ಬಿಟ್ಟು ಕೊಡಲ್ಲ. ಮತ್ತೆ ಸಿನಿಮಾ ಮಾಡೇ ಮಾಡ್ತಿವಿ'' ಎಂದು ನಂದಕಿಶೋರ್ ತಿಳಿಸಿದರು. ಅಷ್ಟರಲ್ಲೇ ಮಾತು ಜೋಡಿಸಿದ ಧ್ರುವ ಸರ್ಜಾ, ''ಲಾಕ್‌ಡೌನ್‌ನಿಂದ ದುಬಾರಿ ಮುಂದಕ್ಕೆ ಹೋಗಿದೆ, ಒಂದೆರಡು ಸಿನಿಮಾ ಆದ್ಮೇಲೆ ಖಂಡಿತಾ ನಂದಕಿಶೋರ್ ಅಪ್ಪಾಜಿ ಜೊತೆ ಸಿನಿಮಾ ಮಾಡ್ತೇನೆ'' ಎಂದರು.

  'ಮಾರ್ಟಿನ್' ಚಿತ್ರದ ಬಗ್ಗೆ

  'ಮಾರ್ಟಿನ್' ಚಿತ್ರದ ಬಗ್ಗೆ

  9 ವರ್ಷದ ನಂತರ ಧ್ರುವ ಸರ್ಜಾ ನಿರ್ದೇಶಕ ಎಪಿ ಅರ್ಜುನ್ ಜೊತೆ ಕೈ ಜೋಡಿಸಿದ್ದಾರೆ. ಚಿತ್ರಕ್ಕೆ ಮಾರ್ಟಿನ್ ಎಂದು ಹೆಸರಿಟ್ಟಿದ್ದು, ಐದು ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಕನ್ನಡ, ತಮಿಳು, ತೆಲುಗು, ಹಿಂದಿ ಹಾಗು ಮಲಯಾಳಂ ಭಾಷೆಯಲ್ಲಿ ಬರಲಿದೆ. ಉದಯ್ ಮೆಹ್ತಾ ನಿರ್ಮಾಪಕರಾಗಿದ್ದು, ಬೇರೆ ಯಾವ ಕಲಾವಿದರು ಆಯ್ಕೆಯಾಗಿಲ್ಲ. ಸಿನಿಮಾ ಸೆಟ್ಟೇರುವ ಮುಂಚೆಯೇ ಆಡಿಯೋ ಹಕ್ಕು ಮಾರಾಟವಾಗಿದೆ. ಲಹರಿ ಸಂಸ್ಥೆ ಎಲ್ಲಾ ಭಾಷೆಯ ಮ್ಯೂಸಿಕ್ ಹಕ್ಕ ಖರೀದಿ ಮಾಡಿದೆ. ಮುಂದಿನ ವರ್ಷ ಮಾರ್ಚ್ ಅಥವಾ ಏಪ್ರಿಲ್ ವೇಳೆ ಸಿನಿಮಾ ತೆರೆಗೆ ಬರಲು ರೆಡಿಯಾಗಲಿದೆ ಎಂಬ ಮಾಹಿತಿ ಇದೆ.

  English summary
  Kannada director Nandakishore made clear that dubari movie does not shelved.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X