»   » ಪುನೀತ್ 'ನಟಸಾರ್ವಭೌಮ' ರೀಮೇಕ್ ಸಿನಿಮಾ ಅಲ್ಲ

ಪುನೀತ್ 'ನಟಸಾರ್ವಭೌಮ' ರೀಮೇಕ್ ಸಿನಿಮಾ ಅಲ್ಲ

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸುತ್ತಿರುವ 'ನಟ ಸಾರ್ವಭೌಮ' ಚಿತ್ರ ಈಗಾಗಲೇ ಶೂಟಿಂಗ್ ಆರಂಭಿಸಿದೆ. ಫಸ್ಟ್ ಲುಕ್ ಪೋಸ್ಟರ್ ಮತ್ತು ಫಸ್ಟ್ ಲುಕ್ ಟೀಸರ್ ನಿಂದ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಹಾಕಿರುವ ಈ ಚಿತ್ರದ ಬಗ್ಗೆ ಒಂದು ಸುದ್ದಿ ಚರ್ಚೆಯಾಗುತ್ತಿತ್ತು.

'ನಟಸಾರ್ವಭೌಮ' ಸಿನಿಮಾ ಬಹುಶಃ ರೀಮೇಕ್ ಇರಬಹುದಾ ಎಂಬ ಪ್ರಶ್ನೆ ಹಲವರನ್ನ ಕಾಡುತ್ತಿದೆ. ಇದಕ್ಕೀಗ ಉತ್ತರ ಸಿಕ್ಕಿದ್ದು, 'ನಟಸಾರ್ವಭೌಮ' ಸಿನಿಮಾ ರೀಮೇಕ್ ಅಲ್ಲ ಎಂದು ಖುದ್ದು ನಿರ್ದೇಶಕರೇ ಸ್ಪಷ್ಟಪಡಿಸಿದ್ದಾರೆ.

Nata sarvabhouma movie is not a remake

ಇನ್ನು ಈ ಸಿನಿಮಾ ರೀಮೇಕ್ ಅಲ್ಲ ಎಂದು ಅಧಿಕೃತವಾದ ಮೇಲೆ ಅಭಿಮಾನಿಗಳ ಸಂತಸ ಹೆಚ್ಚಿದೆ. ಚಿತ್ರದ ಬಗ್ಗೆ ಕುತೂಹಲ ಮತ್ತಷ್ಟು ದೊಡ್ಡದಾಗಿದೆ.

'ನಟ ಸಾರ್ವಭೌಮ' ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪಾತ್ರವೇನು.?

ಅಂದ್ಹಾಗೆ, 'ನಟಸಾರ್ವಭೌಮ' ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರ ಪಾತ್ರವೇನು ಎಂಬುದು ಮತ್ತೊಂದು ಕುತೂಹಲಕಾರಿ ಅಂಶವಾಗಿದೆ. ಕೈಯಲ್ಲಿ ಕ್ಯಾಮೆರಾ ಕೊಟ್ಟು ಫೋಟೋಶೂಟ್ ಮಾಡಿಸಿರುವ ನಿರ್ದೇಶಕರು ಪಾತ್ರದ ಬಗ್ಗೆ ಮಾಹಿತಿ ನೀಡಿಲ್ಲ. ಆದ್ರೆ, ಫೋಟೋ ಜರ್ನಲಿಸ್ಟ್ ಇರಬಹುದು ಎಂಬ ಲೆಕ್ಕಾಚಾರವನ್ನ ಅಭಿಮಾನಿಗಳು ಹಾಕುತ್ತಿದ್ದಾರೆ.

ರಾಕ್ ಲೈನ್ ಪ್ರೊಡಕ್ಷನ್ ನಲ್ಲಿ ನಟಸಾರ್ವಭೌಮ ಸಿನಿಮಾ ಸೆಟ್ಟೇರಿದ್ದು, ಬುಲ್ ಬುಲ್ ರಚಿತಾ ರಾಮ್, ಪವರ್ ಸ್ಟಾರ್ ಗೆ ಜೋಡಿಯಾಗಿದ್ದಾರೆ.

English summary
Puneeth rajkumar starrer Nata sarvabhouma movie is not a remake says director pawan wadeyar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X