»   » ಬಂಗೀ ಜಂಪ್ ಮಾಡುವಾಗ ಅನಾಹುತ: ನಟಿ ನತಾಶಾ ಸ್ಥಿತಿ ಚಿಂತಾಜನಕ

ಬಂಗೀ ಜಂಪ್ ಮಾಡುವಾಗ ಅನಾಹುತ: ನಟಿ ನತಾಶಾ ಸ್ಥಿತಿ ಚಿಂತಾಜನಕ

Posted By:
Subscribe to Filmibeat Kannada

ಬಂಗೀ ಜಂಪ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡವರ ಸಂಖ್ಯೆ ಕಮ್ಮಿ ಏನಿಲ್ಲ. ಆದರೂ ಪ್ರಾಣ ಭಯ ಬಿಟ್ಟು ಬಂಗೀ ಜಂಪ್ ಮಾಡಲು ಮುಂದಾಗುವ ಸಾಹಸ ಪ್ರಿಯರ ಸಂಖ್ಯೆ ಕೂಡ ಕಮ್ಮಿ ಆಗಿಲ್ಲ.

ಅಪಾಯವನ್ನ ಮೈ ಮೇಲೆ ಎಳೆದುಕೊಳ್ಳುವುದು ಅಂತಾರಲ್ಲ... ಇದೇ ಇರಬೇಕು. ಬಂಗೀ ಜಂಪ್ ಅಪಾಯಕಾರಿ ಸ್ಟಂಟ್ ಅಂತ ಗೊತ್ತಿದ್ದರೂ, ನಟಿ ಹಾಗೂ ಮಾಜಿ ಮಿಸ್ ಇಂಡಿಯಾ ನತಾಶಾ ಸೂರಿ ಬಂಗೀ ಜಂಪ್ ಮಾಡಲು ಹೋಗಿ ಆಸ್ಪತ್ರೆ ಸೇರಿದ್ದಾರೆ. ಬಂಗೀ ಜಂಪ್ ನಿಂದಾಗಿ ನತಾಶಾ ಸೂರಿ ಜೀವಕ್ಕೆ ಆಪತ್ತು ಬಂದೆರಗಿದೆ.

ಬಂಗೀ ಜಂಪ್ ಅಪಘಾತ, ನಟಿ ನತಾಷಾ ಸ್ಥಿತಿ ಗಂಭೀರ!

ಅಷ್ಟಕ್ಕೂ, ಯಾರೀ ನತಾಶಾ.? ಬಂಗೀ ಜಂಪ್ ಮಾಡುವಾಗ ನಡೆದದ್ದೇನು.? ಎಂಬ ಸಂಪೂರ್ಣ ವಿವರ ಇಲ್ಲಿದೆ. ಓದಿರಿ...

ಆಗಿದ್ದು ಎಲ್ಲಿ.?

ಮಾಜಿ ಮಿಸ್ ಇಂಡಿಯಾ ನತಾಶಾ ಸೂರಿ ಇತ್ತೀಚೆಗಷ್ಟೇ ಇಂಡೋನೇಷಿಯಾಗೆ ಪ್ರಯಾಣ ಬೆಳೆಸಿದ್ದರು. ಇಂಡೋನೇಷಿಯಾದಲ್ಲಿ ಮಳಿಗೆಯೊಂದರ ಉದ್ಘಾಟನೆ ಕಾರ್ಯಕ್ರಮಕ್ಕೆ ನತಾಶಾ ಸೂರಿ ಮುಖ್ಯ ಅತಿಥಿ. ಮಳಿಗೆ ಉದ್ಘಾಟನೆ ನೆರವೇರಿಸಿ, ರಿಬ್ಬಂಗ್ ಕಟ್ ಮಾಡಿದ ಬಳಿಕ ಸಾಹಸ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಬಯಕೆ ನತಾಶಾಗಾಗಿದೆ. ಹೀಗಾಗಿ, ಬಂಗೀ ಜಂಪ್ ಮಾಡಲು ನತಾಶಾ ನಿರ್ಧರಿಸಿದರು.

'ದೃಶ್ಯ' ಸಿನಿಮಾದ ನಟಿ ಆರೋಹಿಗೆ ಆಕ್ಸಿಡೆಂಟ್ !

ನಡೆದದ್ದೇನು.?

ನತಾಶಾಗೆ ಟ್ರಾವೆಲ್ಲಿಂಗ್ ಹಾಗೂ ಅಡ್ವೆಂಚರ್ ಸ್ಪೋರ್ಟ್ಸ್ ಅಂದ್ರೆ ಪಂಚಪ್ರಾಣ. ಹೇಳಿ ಕೇಳಿ ಇಂಡೋನೇಷಿಯಾ ಅಡ್ವೆಂಚರ್ ಸ್ಪೋರ್ಟ್ಸ್ ಗೆ ಹೆಸರುವಾಸಿ. ಹೀಗಾಗಿ, ನೇರವಾಗಿ ಬಂಗೀ ಜಂಪ್ ಮಾಡುವ ಸ್ಥಳಕ್ಕೆ ನತಾಶಾ ತೆರಳಿದರು.

ಶೂಟಿಂಗ್ ವೇಳೆ ಅವಘಡ: ನಟಿ ರಾಗಿಣಿ ಕಣ್ಣಿಗೆ ಪೆಟ್ಟು

ಕಟ್ಟಿದ್ದ ಹಗ್ಗ ತುಂಡಾಯ್ತು

ನೂರಾರು ಅಡಿಗಳ ಎತ್ತರದಿಂದ ನತಾಶಾ ಬಂಗೀ ಜಂಪ್ ಮಾಡಬೇಕಿತ್ತು. ಕಾಲಿಗೆ ಹಗ್ಗ ಕಟ್ಟಿಕೊಂಡು, ಸುರಕ್ಷತಾ ಕ್ರಮಗಳನ್ನು ಕೈಗೊಂಡು ಎತ್ತರದಿಂದ ನತಾಶಾ ಜಿಗಿದರು. ಆದ್ರೆ, ದುರಾದೃಷ್ಟವಶಾತ್ ನತಾಶಾ ಕಾಲಿಗೆ ಕಟ್ಟಲಾಗಿದ್ದ ಹಗ್ಗ ತುಂಡಾಯ್ತು. ಕೆಳಗೆ ಕೆರೆ ಇದ್ದ ಕಾರಣ, ಪ್ರಾಣಾಪಾಯದಿಂದ ನತಾಶಾ ಪಾರಾಗಿದ್ದಾರೆ.

ನತಾಶಾ ಸ್ಥಿತಿ ಚಿಂತಾಜನಕ

ಆದ್ರೆ, ಕೆರೆಯೊಳಗೆ ತಲೆಕೆಳಗು ಮಾಡಿ ನತಾಶಾ ಬಿದ್ದಿರುವುದರಿಂದ ತೀವ್ರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಸದ್ಯ ನತಾಶಾ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. 24 ಗಂಟೆ ಬಳಿಕವಷ್ಟೇ ನತಾಶಾ ಪರಿಸ್ಥಿತಿಯನ್ನು ತಿಳಿಸಬಹುದು ಎಂದು ವೈದ್ಯರು ಸ್ಪಷ್ಟ ಪಡಿಸಿದ್ದಾರೆ.

ಯಾರೀ ನತಾಶಾ.?

ನತಾಶಾ ಸೂರಿ... ನಟಿ, ಟಿವಿ ನಿರೂಪಕಿ, ಸೂಪರ್ ಮಾಡೆಲ್ ಹಾಗೂ ಮಾಜಿ ಮಿಸ್ ಇಂಡಿಯಾ. 2006 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡ ನತಾಶಾ, ಮಲಯಾಳಂ ನ ಹಿಟ್ ಸಿನಿಮಾ 'ಕಿಂಗ್ ಲೈಯರ್' ನಲ್ಲಿ ಅಭಿನಯಿಸಿದ್ದಾರೆ. 'ಇನ್ಸೈಡ್ ಎಡ್ಜ್' ಎಂಬ ವೆಬ್ ಸೀರೀಸ್ ನಲ್ಲಿ ನಟಿಸಿರುವ ನತಾಶಾ ಅನೇಕ ಶೋಗಳ ನಿರೂಪಣೆ ಮಾಡಿದ್ದಾರೆ.

English summary
Former Miss India, Actress, TV Host Natasha Suri meets with an accident during Bungee Jump in Indonesia.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X