»   » ರಾಷ್ಟ್ರ ಪ್ರಶಸ್ತಿ ಬಂತು; ಸಂಚಾರಿ ವಿಜಯ್ ಗೆ ಅದೃಷ್ಟ ಖುಲಾಯಿಸ್ತು.!

ರಾಷ್ಟ್ರ ಪ್ರಶಸ್ತಿ ಬಂತು; ಸಂಚಾರಿ ವಿಜಯ್ ಗೆ ಅದೃಷ್ಟ ಖುಲಾಯಿಸ್ತು.!

Posted By:
Subscribe to Filmibeat Kannada

''ಕನ್ನಡದ ಹುಡುಗ ಸಂಚಾರಿ ವಿಜಯ್ ಗೆ ಉತ್ತಮ ನಟ ರಾಷ್ಟ್ರ ಪ್ರಶಸ್ತಿ'' ಅಂತ ಘೋಷಣೆ ಆದಾಗ, 'ಸಂಚಾರಿ ವಿಜಯ್ ಯಾರು?' ಅಂತ ಕೇಳಿದವರೇ ಹೆಚ್ಚು. ಕಮರ್ಶಿಯಲ್ ಸಿನಿಮಾಗಳಲ್ಲಿ ಗುರುತಿಸಿಕೊಳ್ಳದ ಸಂಚಾರಿ ವಿಜಯ್, ಸಿನಿ ಪ್ರಿಯರಿಗೂ ಅಷ್ಟು ಪರಿಚಯ ಇರ್ಲಿಲ್ಲ.

ಆದ್ರೀಗ, ಇಡೀ ಭಾರತದಾದ್ಯಂತ ಸಂಚಾರಿ ವಿಜಯ್ ಖ್ಯಾತಿ ಗಳಿಸಿದ್ದಾರೆ. ಬರೀ ಸ್ಯಾಂಡಲ್ ವುಡ್ ನಿಂದ ಮಾತ್ರ ಅಲ್ಲ, ಕಾಲಿವುಡ್, ಟಾಲಿವುಡ್ ಮತ್ತು ಬಾಲಿವುಡ್ ನಿಂದಲೂ ಸಂಚಾರಿ ವಿಜಯ್ ಕಾಲ್ ಶೀಟ್ ಗಾಗಿ ನಿರ್ಮಾಪಕರು ಕ್ಯೂ ನಿಂತಿದ್ದಾರೆ.

sanchari vijay

ಒಂದ್ಕಾಲದಲ್ಲಿ 'ಸರ್ ಚಾನ್ಸ್ ಕೊಡಿ' ಅಂತ ಸಂಚಾರಿ ವಿಜಯ್ ಫೋನ್ ಮಾಡಿದಾಗ ಮೂಗು ಮುರಿಯುತ್ತಿದ್ದ ಗಾಂಧಿನಗರದವರು ಈಗ ಅದೇ ವಿಜಯ್ ಗೆ ಮಣೆ ಹಾಕುತ್ತಿದ್ದಾರೆ. 'ರಾಷ್ಟ್ರ ಪ್ರಶಸ್ತಿ'ಯ ಗರಿ ಸಿಕ್ಕಿದ ಮೇಲೆ ಅಭಿನಂದಿಸುವುದಕ್ಕೆ ಫೋನ್ ಕರೆಗಳು ಹೆಚ್ಚಾದಂತೆ, ಆಫರ್ ಗಳೂ ಹೆಚ್ಚಾಗುತ್ತಿವೆ. [ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ : ಕನ್ನಡಿಗ ಸಂಚಾರಿ ವಿಜಯ್ ಅತ್ಯುತ್ತಮ]

'ನಾನವನಲ್ಲ ಅವಳು' ಸಿನಿಮಾದಲ್ಲಿ ಸಂಚಾರಿ ವಿಜಯ್ ನಿರ್ವಹಿಸಿರುವ ಚಾಲೆಂಜಿಂಗ್ ಪಾತ್ರವನ್ನ ನೋಡಿರುವ ಕಾಲಿವುಡ್, ಟಾಲಿವುಡ್ ಮತ್ತು ಬಾಲಿವುಡ್ ನಿರ್ಮಾಪಕರು ರತ್ನಗಂಬಳಿ ಹಾಸಿದ್ದಾರೆ. ಎಲ್ಲಾ ಕಡೆಯಿಂದಲೂ ಅವಕಾಶಗಳು ಹರಿದು ಬರುತ್ತಿರುವ ಕಾರಣ, ಪಾತ್ರವನ್ನ ಅಳೆದು ತೂಗಿ ಒಪ್ಪಿಕೊಳ್ಳುವುದಕ್ಕೆ ಸಂಚಾರಿ ವಿಜಯ್ ನಿರ್ಧಾರ ಮಾಡಿದ್ದಾರೆ. [ಸಂಚಾರಿ ವಿಜಯ್ ಕಣ್ಣೀರಕಥೆಗೆ ಕಡೆಗೂ ಸಂದ ಜಯ]

ಹಾಗೇನಾದರೂ ಒಪ್ಪಿಕೊಂಡರೆ, ಪರಭಾಷೆಯಲ್ಲೂ ಸಂಚಾರಿ ವಿಜಯ್ ಮಿಂಚುವುದು ಖಚಿತ. ಕೆಲವೇ ದಿನಗಳ ಹಿಂದೆ ಕೇಳೋರು ಇಲ್ಲದ ಸಂಚಾರಿ ವಿಜಯ್ ಈಗ ಎಲ್ಲಾ ನಿರ್ಮಾಪಕರಿಗೂ ಸಿಹಿ ದ್ರಾಕ್ಷಿ. ಅದೃಷ್ಟ ಕೈಹಿಡಿದರೆ ಹೀಗೆ..! (ಏಜೆನ್ಸೀಸ್)

English summary
National Award winner Sanchari Vijay in demand. The Actor is getting offers from Tollywood, Kollywood and Bollywood.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada