»   » ನಯನತಾರಾಗೆ ಕಾದಿರುವ 'ಬಚ್ಚನ್' ಸುದೀಪ್ ಟೀಮ್

ನಯನತಾರಾಗೆ ಕಾದಿರುವ 'ಬಚ್ಚನ್' ಸುದೀಪ್ ಟೀಮ್

Posted By:
Subscribe to Filmibeat Kannada

ಪ್ರಭುದೇವರ ನಂಬಿ ಚಿತ್ರರಂಗಕ್ಕೆ ವಿದಾಯ ಘೋಷಿಸಿ ನಂತರ ಜ್ಞಾನೋದಯಗೊಂಡ ನಟಿ ನಯನತಾರಾ ಸೆಕೆಂಡ್ ಇನ್ನಿಂಗ್ಸ್ ಸಖತ್ ಜೋರಾಗಿಯೇ ಇದೆ. ಅತ್ತ ತಮಿಳು, ತೆಲುಗು ಸಾಕಷ್ಟು ಚಿತ್ರಗಳು ಕೈತುಂಬಿರುವಾಗಲೇ ಸುದೀಪ್ ನಾಯಕತ್ವದ ಕನ್ನಡದ ಬಚ್ಚನ್ ಚಿತ್ರಕ್ಕೆ ನಾಯಕಿಯಾಗಲು ಅವರಿಗೆ ಈ ಮೊದಲೇ ಆಫರ್ ದೊರೆತಿತ್ತು. ಈಗ ನಯನಾ ಬರುವುದು ಖಾತ್ರಿ ಎನ್ನಲಾಗಿದೆ.

ಬಚ್ಚನ್ ನಾಯಕಿಯಾಗಿ ನಯನತಾರಾ ಅವರೇ ಸರಿ ಎಂದು ಅವರ ಜೊತೆ ಸಾಕಷ್ಟು ಸುತ್ತಿನ ಮಾತುಕತೆ ನಡೆಸಲಾಗಿದೆ. ಆದರೆ ಅವರ ಡೇಟ್ಸ್ ಲಭ್ಯತೆ ಸಾದ್ಯವೇ ಇರಲಿಲ್ಲ. ಈ ಮೊದಲು ಡೇಟ್ಸ್ ಸಮಸ್ಯೆಯಿಂದ ಗ್ರೀನ್ ಸಿಗ್ನಲ್ ನೀಡದ ನಯನತಾರಾ, ಇದೀಗ ಹಾಗೂ ಹೀಗೂ ಅಡ್ಜೆಸ್ಟ್ ಮಾಡಿಕೊಂಡು ಜೂನ್ 20ರ ನಂತರ ಕಾಲ್ ಶೀಟ್ ನೀಡಲು ಒಪ್ಪಿದ್ದಾರೆ.

ದುರಂತವೆಂಬಂತೆ ಬಚ್ಚನ್ ನಾಯಕ ಸುದೀಪ್ ಖಾಯಿಲೆ ಬಿದ್ದಿದ್ದಾರೆ. ಎಲ್ಲವೂ ಸರಿಹೋದರೆ ನಯನತಾರಾ ಹಾಗೂ ಸುದೀಪ್ ಒಟ್ಟಾಗಿ, ಇಲ್ಲದಿದ್ದರೆ ಡೇಟ್ಸ್ ಇರುವಾಗ ಹೊಂದಿಸಿ ಚಿತ್ರೀಕರಣ ಮಾಡಲಾಗುವುದು ಎಂದು ಬಚ್ಚನ್ ಚಿತ್ರದ ನಿರ್ದೇಶಕ ಶಶಾಂಕ ಹೇಳಿದ್ದಾರೆ. ಉಪೇಂದ್ರರ ಸೂಪರ್ ನಂತರ ನಯನತಾರಾ ಮತ್ತೊಮ್ಮೆ ಕನ್ನಡಕ್ಕೆ ಬರುವ ಕಾಲ ಸನ್ನಿಹಿತವಾಗಿದೆ. (ಒನ್ ಇಂಡಿಯಾ ಕನ್ನಡ)

English summary
Nayantara has been approached to play the female lead in Sudeep starrer Bachchan to be directed by Shashank.
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada