For Quick Alerts
  ALLOW NOTIFICATIONS  
  For Daily Alerts

  ಟ್ವೀಟ್ಸ್: 'ನೀರ್ ದೋಸೆ' ಹರಿದು-ಜಗಿದು ತಿಂದ ಸಿನಿಪ್ರಿಯರು ಏನಂತಾರೆ.?

  By Suneetha
  |

  ಬಹಳ ವಾದ-ವಿವಾದಗಳಾಗಿ, ಸಾಕಷ್ಟು ಗಾಸಿಪ್ ಕ್ರಿಯೇಟ್ ಮಾಡಿ, ನಿಂತ ನೀರಾಗಿದ್ದ 'ನೀರ್ ದೋಸೆ' ಕೊನೆಗೂ ಯಶಸ್ವಿಯಾಗಿ ಮುಗಿದಿದ್ದು ಆಯ್ತು, ಸಿನಿಮಾ ಯಶಸ್ವಿಯಾಗಿ ತೆರೆ ಕಂಡಿದ್ದು ಆಯ್ತು. ಇಂದು (ಸೆಪ್ಟೆಂಬರ್ 2) ಇಡೀ ಕರ್ನಾಟಕದಾದ್ಯಂತ ಹಲವಾರು ಥಿಯೇಟರ್ ಗಳಲ್ಲಿ 'ನೀರ್ ದೋಸೆ' ಘಮ-ಘಮ ಎನ್ನುತ್ತಿದೆ.

  ಅಂದಹಾಗೆ ಇಂದು ಬಂದ್ ಇದ್ದರೂ 'ನೀರ್ ದೋಸೆ'ಗೆ ಯಾವುದೇ ಬಿಸಿ ತಟ್ಟಲಿಲ್ಲ ಅನ್ನೋದು ಖುಷಿಯ ವಿಚಾರ. ಈಗತಾನೆ ಸಿನಿಮಾ ನೋಡಿ ಥಿಯೇಟರ್ ನಿಂದ ಹೊರಬಂದ ಅಭಿಮಾನಿಗಳು, ಪ್ರೇಕ್ಷಕರು, ವಿಮರ್ಶಕರು 'ನೀರ್ ದೋಸೆ' ರುಚಿಯಾಗಿತ್ತು, ಅಂತ ಟ್ವಿಟ್ಟರ್ ನಲ್ಲಿ ಕಾಮೆಂಟ್ ಮಾಡಿದ್ದಾರೆ.['ನೀರ್ ದೋಸೆ' ಅಂದ್ರೆ ಹಲಸಿನ ಹಣ್ಣಿದ್ದಂತೆ, ಬಿಚ್ಚಿ ನೋಡಿದ್ರೆ ಗೊತ್ತಾಗೋದು]

  ಕೆಲವರಂತೂ ಜಗ್ಗೇಶ್ ಅವರ ಡೈಲಾಗ್ ಕೇಳಿ 'ನೀರ್ ದೋಸೆ' ಚಪ್ಪರಿಸಿ ತಿಂದಷ್ಟೇ ಖುಷಿಯಲ್ಲಿ, ಸಿನಿಮಾ ಸೂಪರ್ ಎಂದಿದ್ದಾರೆ. ಇನ್ನೂ ಕೆಲವರು ಹರಿಪ್ರಿಯ ಅವರ ಬೋಲ್ಡ್ ಅವತಾರಕ್ಕೆ ಆಶ್ಚರ್ಯದಿಂದ 'ಅಬ್ಬಬ್ಬಾ ಅಂತ ಕಣ್-ಬಾಯ್ ಬಿಟ್ಟಿದ್ದಾರೆ.

  ರಾಜ್ಯಾದ್ಯಂತ ಸುಮಾರು 150 ಚಿತ್ರಮಂದಿರಗಳಲ್ಲಿ ಇಂದು ಬಿಸಿಬಿಸಿ 'ನೀರ್ ದೋಸೆ' ತೆರೆ ಕಂಡಿದ್ದು, ಬಂದ್ ಇದ್ದರೂ ಮುಖ್ಯ ಚಿತ್ರಮಂದಿರ ಮೇನಕಾದಲ್ಲಿ ಹೌಸ್ ಫುಲ್ ಬೋರ್ಡ್ ನೇತಾಡುತ್ತಿತ್ತು. ಟ್ವಿಟ್ಟರ್ ನಲ್ಲಿ ಬಿಸಿಬಿಸಿ 'ನೀರ್ ದೋಸೆ' ಭಯಂಕರ ಖರ್ಚಾಗಿದ್ದು, ನೋಡುಗರ ಟ್ವಿಟ್ಟರ್ ವಿಮರ್ಶೆ ಕೆಳಗಿನ ಸ್ಲೈಡ್ಸ್ ಗಳಲ್ಲಿ....

  ಅಭಿಮಾನಿಗಳ ಜೊತೆ 'ನೀರ್ ದೋಸೆ' ಹರಿದ ಜಗ್ಗಿ

  ಅಭಿಮಾನಿಗಳ ಜೊತೆ 'ನೀರ್ ದೋಸೆ' ಹರಿದ ಜಗ್ಗಿ

  ನಟ ಜಗ್ಗೇಶ್ ಅವರು 'ನೀರ್ ದೋಸೆ' ಫಸ್ಟ್ ಡೇ ಫಸ್ಟ್ ಶೋವನ್ನು ತಮ್ಮ ಅಭಿಮಾನಿಗಳೊಂದಿಗೆ, ಮೇನಕಾ ಥಿಯೇಟರ್ ನಲ್ಲಿ ನೋಡಿ ಸಂತಸಪಟ್ಟರು. ಈ ಸಂದರ್ಭದಲ್ಲಿ ಮಾಧ್ಯಮದ ಜೊತೆ ಮಾತನಾಡುತ್ತಾ ಕೆಲಹೊತ್ತು ಭಾವುಕರಾದರು. ಇಂದು ಬಂದ್ ಇದ್ದರೂ ಕೂಡ ಅಭಿಮಾನಿಗಳು ಕಷ್ಟಪಟ್ಟು ಬಂದು ಸಿನಿಮಾ ನೋಡಿ ಹಾರೈಸಿದ್ದಕ್ಕಾಗಿ ಜಗ್ಗೇಶ್ ಅವರು ಕ್ಷಣಕಾಲ ಮೂಕಸ್ತಬ್ದರಾದರು. ರಮ್ಯಾ ಈ ಸಿನಿಮಾ ಬಿಟ್ಟು ಹೋಗಬಾರದಿತ್ತು, ಅವರು ಈ ಚಿತ್ರದಲ್ಲಿ ನಟಿಸಿದ್ದರೆ, ಅವರನ್ನು ಎಲ್ಲರೂ ದೇವತೆಯಂತೆ ಕಾಣುತ್ತಿದ್ದರು' ಅಂತ ಪ್ರತಿಕ್ರಿಯೆ ನೀಡಿದರು.['ನೀರ್ ದೋಸೆ'ಯಲ್ಲಿ ಎಂತೆಂಥಾ ಡೈಲಾಗುಗಳಿವೆ ಗೊತ್ತಾ?]

  ಮೈಸೂರಿನಲ್ಲಿ ಶೋ ರದ್ದು

  ಮೈಸೂರಿನಲ್ಲಿ ಶೋ ರದ್ದು

  ಮೈಸೂರಿನ ಗಾಯತ್ರಿ ಚಿತ್ರಮಂದಿರದಲ್ಲಿ 'ನೀರ್ ದೋಸೆ' ಬೆಳಗ್ಗಿನ ಪ್ರದರ್ಶನ ರದ್ದು ಮಾಡಲಾಗಿತ್ತು. ಬಂದ್ ಗೆ ಥಿಯೇಟರ್ ಮಾಲೀಕರು ಯಶಸ್ವಿಯಾಗಿ ಬೆಂಬಲ ಸೂಚಿಸಿದ್ದಾರೆ. ಇನ್ನು ಸಂಜೆ 4 ಗಂಟೆ ನಂತರ ಸಿನಿಮಾ ಪ್ರದರ್ಶನ ಆರಂಭವಾಗಲಿದೆ.['ನೀರ್ ದೋಸೆ' ಬೇಡ ಅಂತ ತಳ್ಳಿದ ರಮ್ಯಾ ಬಗ್ಗೆ ಚಿತ್ರದಲ್ಲಿ ಕೊಂಕು ನುಡಿ.?!]

  ಅಭಿಮಾನಿ ಪೆಟರ್ ಕ್ವೀನ್ನ್

  'ಸೆನ್ಸಾರ್ 'ವಯಾಗ್ರ' 'ಹರೋಹರ' ಪದಗಳಿಗೆ ಕತ್ತರಿ ಹಾಕಿ ಏನು ಸಾಧಿಸಿದೆ? ಅದರಿಂದ ಆ ಪದಗಳಿಗೆ ಬೇರೆ ಡಬಲ್ ಮೀನಿಂಗ್ ಪದಗಳು ಹುಟ್ಟಿವೆ ಅಷ್ಟೇ' ಎಂದು ಅಭಿಮಾನಿ ಪೆಟರ್ ಅವರು ಟ್ವೀಟ್ ಮಾಡಿದ್ದಾರೆ.['ನೀರ್ ದೋಸೆ' ಸಿನಿಮಾ ಬಿಡುಗಡೆ ತಡ ಆಗ್ತಿರೋದಕ್ಕೆ ನಿಜ ಕಾರಣವೇನು?]

  ಅಭಿಮಾನಿ ಪೆಟರ್ ಕ್ವೀನ್ನ್

  'ಜಗ್ಗೇಶ್ ಅವರ ರಿಡಿಫೈನ್ಸ್ ನಟನೆ, ಅವರ ಮುಖಭಾವ ಅದ್ಭುತವಾಗಿತ್ತು. ದತ್ತಣ್ಣ ಅವರ ನಟನೆ ತುಂಬಾನೇ ಚೆನ್ನಾಗಿತ್ತು" ಎಂದು ಫಸ್ಟ್ ಟ್ವೀಟ್ ವಿಮರ್ಶೆ ನೀಡಿದ್ದಾರೆ.

  ಅಭಿಮಾನಿ ಪ್ರಿಯಾಂಕ

  'ಜಗ್ಗೇಶ್ ಅವರ 'ಮಠ' ಚಿತ್ರದ ನಂತರ ಬೆಂಬಲಿತ ವಿಚಾರವುಳ್ಳ ಒಂದು ಸಿನಿಮಾ ನೋಡಲು ಕಾತರದಿಂದ ಇದ್ದೀರಾ.?, ಹಾಗಿದ್ರೆ 'ನೀರ್ ದೋಸೆ' ಅದಕ್ಕೆ ಒಂದೊಳ್ಳೆ ಉತ್ತರ' ಅಂತ ಅಭಿಮಾನಿ ಪ್ರಿಯಾಂಕ ಎಂಬುವವರು ಟ್ವೀಟ್ ಮಾಡಿದ್ದಾರೆ.

  ಅಭಿಮಾನಿ ಕಿರು ಕಿಚ್ಚು

  'ನೀರ್ ದೋಸೆ' ಸಿನಿಮಾ ಅದ್ಭುತ ಮತ್ತು ನಿಮ್ಮ ನಟನೆ ತುಂಬಾ ಚೆನ್ನಾಗಿತ್ತು. ನಿಮ್ಮ ನಟನೆಗೆ ಯಾರೂ ಮ್ಯಾಚ್ ಆಗಲ್ಲ, ಹರಿಪ್ರಿಯಾ ಮೇಡಂ' ಅಂತ ಅಭಿಮಾನಿ ಟ್ವೀಟ್ ಮಾಡಿದ್ದಾರೆ.

  ಶ್ರೀಕಾಂತ್ ಹೆಚ್.ಎಮ್

  'ನೀರ್ ದೋಸೆ' ತಿನ್ನಲು ತುಂಬಾ ಯಮ್ಮಿ ಆಗಿದೆ, ಇಂದು ರಾತ್ರಿ 'ನೀರ್ ದೋಸೆ'. 'ಹಣ್ಣು ಚೆನ್ನಾಗಿ ಇದ್ದಿದ್ದಕ್ಕೆ ಸಿಪ್ಪೆ ಸುಲಿಯೋದು'.

  ಶರ್ಮನ್ ಜೈನ್

  'ನೀರ್ ದೋಸೆ' ಪಕ್ಕಾ ಎಂರ್ಟಟೈನರ್, ಯಾರಿಗೂ ಒಂಚೂರು ಬೋರಾಗೋದಿಲ್ಲ. ನೀವೆಲ್ಲರೂ ಖಂಡಿತ ಎಂಜಾಯ್ ಮಾಡ್ತೀರಾ'. ಕಥೆಯನ್ನು ವಿವರಿಸಿರುವ ನಿರ್ದೇಶಕರ ವರಸೆ ಇಷ್ಟ ಆಯ್ತು. ಖಂಡಿತ ಎಲ್ಲರ ನಿರೀಕ್ಷೆಗಳನ್ನು ಈ ಸಿನಿಮಾ ಪೂರೈಸಿದೆ', ಅಂತ ಪ್ರೇಕ್ಷಕ ಶರ್ಮನ್ ಜೈನ್ ಟ್ವೀಟ್ ವಿಮರ್ಶೆ ನೀಡಿದ್ದಾರೆ.

  ಸಿನಿ ಲೋಕ

  'ಭಾವನೆಗಳು ಹದವಾಗಿ ಬೆರೆತಿರುವ 'ನೀರ್ ದೋಸೆ', ಸಖತ್ ಎಂರ್ಟಟೈನಿಂಗ್ ಸಿನಿಮಾ. ಹೋಗಿ ಮನರಂಜನೆ ತೆಗೆದುಕೊಂಡು ಬನ್ನಿ. ರೇಟಿಂಗ್: 3.5/5. ಇದು ಸಿನಿಲೋಕದ ಮೊದಲ ವಿಮರ್ಶೆ.

  ವಿಮರ್ಶಕ ಅಭಿಷೇಕ್ ಎಸ್.ಎನ್

  'ತಮಾಷೆ ಜೊತೆಗೆ ತತ್ವಶಾಸ್ತ್ರ...ಮಜಾ ಜೊತೆಗೆ ಅರ್ಥ..ಜ್ಯುಸಿ ಜೊತೆಗೆ ನೆನಪಿನಲ್ಲಿ ಉಳಿಯುವ ಕಥೆ...ಎಲ್ಲರದೂ ಮುದ್ದಾದ ನಟನೆ" ಅಂತ ವಿಮರ್ಶಕ ಅಭಿಷೇಕ್ ಎಸ್.ಎನ್ ಟ್ವೀಟ್ ಮಾಡಿದ್ದಾರೆ.

  ಶಶಿಪ್ರಸಾದ್ ಎಸ್.ಎಂ

  'ತುಂಬಾ ಟೇಸ್ಟಿ ಆಗಿರೋ 'ನೀರ್ ದೋಸೆ' ಆದ್ರೆ ಜೀರ್ಣ ಆಗೋಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ' ಎಂದು ಶಶಿಪ್ರಸಾದ್ ಎಸ್.ಎಂ ಅವರು ಟ್ವೀಟ್ ಮಾಡಿದ್ದಾರೆ.

  English summary
  Kannada movie 'Neer Dose' directed by Vijaya Prasad of 'Sidlingu' fame released today (September 2). And got overwhelming response all over Karnataka. Kannada Actor Jaggesh, Actreess Haripriya, Actress Suman Ranganath in the lead role. Here is the first day first show craze, tweets, audience response.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X