»   » ನಟ ಜಗ್ಗೇಶ್ ಬಾಯಲ್ಲಿ ನಟಿ ರಮ್ಯಾ ಬಗ್ಗೆ ಎಂತಹ ಮಾತು!?

ನಟ ಜಗ್ಗೇಶ್ ಬಾಯಲ್ಲಿ ನಟಿ ರಮ್ಯಾ ಬಗ್ಗೆ ಎಂತಹ ಮಾತು!?

Posted By:
Subscribe to Filmibeat Kannada

'ನೀರ್ ದೋಸೆ' ವಿಚಾರವಾಗಿ ನವರಸ ನಾಯಕ ಜಗ್ಗೇಶ್ ಹಾಗೂ ನಟಿ ರಮ್ಯಾ ನಡುವೆ ಆದ ಮಾತಿನ ಸಮರ ಇನ್ನೂ ಕಣ್ಣಿಗೆ ಕಟ್ಟಿದಂತೆ ಇದೆ.

ಮಂಡ್ಯ ಸಂಸದೆ ಪಟ್ಟಕ್ಕೆ ಏರಿದ್ಮೇಲೆ 'ನೀರ್ ದೋಸೆ' ಚಿತ್ರದಿಂದ ಹೊರ ನಡೆದ ರಮ್ಯಾ ಜಗ್ಗೇಶ್ ರವರ ಕೆಂಗಣ್ಣಿಗೆ ಗುರಿ ಆಗಿದ್ದರು. ಯಾರು ಏನೇ ಹೇಳಿದರೂ, ಏನೇ ಮಾಡಿದರೂ 'ನೀರ್ ದೋಸೆ' ಹುಯ್ಯಲು ರಮ್ಯಾ ಮೇಡಂ ಒಪ್ಪಲೇ ಇಲ್ಲ.


ಪರಿಣಾಮ, ರಮ್ಯಾ ಬಿಟ್ಟ 'ನೀರ್ ದೋಸೆ' ನಟಿ ಹರಿಪ್ರಿಯಾ ಪಾಲಾಯ್ತು. ವರ್ಷಗಳ ಹಿಂದೆ ತೆರೆ ಕಾಣಬೇಕಾಗಿದ್ದ 'ನೀರ್ ದೋಸೆ' ನಿನ್ನೆ (ಸೆಪ್ಟೆಂಬರ್ 2) ಬಿಡುಗಡೆ ಆಯ್ತು. [ವಿಮರ್ಶೆ : ಬಾಡೂಟದ ಜೊತೆ 'ನೀರ್ ದೋಸೆ' ಸವಿದಂತೆ ಇದೇ ಜಗ್ಗೇಶ.!]


ಈ ಸಂದರ್ಭದಲ್ಲಿ ನಟ ಜಗ್ಗೇಶ್ ಮಾಧ್ಯಮಗಳ ಮುಂದೆ ರಮ್ಯಾ ಬಗ್ಗೆ ಮಾತನಾಡಲು ಮರೆಯಲಿಲ್ಲ. ಓವರ್ ಟು ಜಗ್ಗೇಶ್.....


ಎಂಥಾ ತಪ್ಪು ಮಾಡಿಬಿಟ್ಳು.!

''ನೀವು ನಂಬ್ತೀರೋ, ಬಿಡ್ತೀರೋ...ಈ ಚಿತ್ರವನ್ನ ನಾನು ನೋಡಿದಾಗ ಅಂದುಕೊಂಡೆ ಎಂತಹ ತಪ್ಪು ಮಾಡಿಬಿಟ್ಟಳು ಅವಳು (ರಮ್ಯಾ)'' - ಜಗ್ಗೇಶ್ [ಕಗ್ಗಂಟಾಗಿರುವ ರಮ್ಯಾ 'ನೀರ್ ದೋಸೆ' ವಿವಾದ]


ರಮ್ಯಾ ದೇವತೆ ಆಗ್ತಿದ್ಳು!

''ಅಕಸ್ಮಾತ್ ಅವಳು ಏನಾದರೂ ಈ ಪಾತ್ರದಲ್ಲಿ ಇದಿದ್ರೆ, ಇವತ್ತು ಆಕೆ ದೇವತೆ ಆಗೋಗ್ತಾಯಿದ್ದಳು'' - ಜಗ್ಗೇಶ್ [ಅಂಬರೀಶ್ ಮನೆಗೆ ರಮ್ಯಾ 'ನೀರ್ ದೋಸೆ' ರವಾನೆ]


50 ವರ್ಷ ಆದ್ರೂ ಜನ ನೆನಪಿಟ್ಟುಕೊಳ್ತಿದ್ರು!

''ಇನ್ನೂ ಐವತ್ತು ವರ್ಷ ಆದರೂ ಜನ ನೆನಪಲ್ಲಿ ಇಟ್ಟುಕೊಳ್ಳಬಹುದಿತ್ತು. ಏನೋ ಗೊತ್ತಿಲ್ಲ. ಅವಳ ದೌರ್ಭಾಗ್ಯವೋ ಏನೋ ನನಗೆ ಗೊತ್ತಿಲ್ಲ. '' - ಜಗ್ಗೇಶ್ ['ನೀರ್ ದೋಸೆ' ಬೇಡ ಅಂತ ತಳ್ಳಿದ ರಮ್ಯಾ ಬಗ್ಗೆ ಚಿತ್ರದಲ್ಲಿ ಕೊಂಕು ನುಡಿ.?!]


ವೈಯುಕ್ತಿಕ ದ್ವೇಷ ಇಲ್ಲ!

''ವೈಯುಕ್ತಿಕವಾಗಿ ಆಕೆ ಮೇಲೆ ನನಗೆ ಏನೂ ಇಲ್ಲ. ಯಾಕಂದ್ರೆ, ನಾವೇ ಆಕೆ ತಂದೆ ಜೊತೆ ಮಾತನಾಡಿ, ರೂಮ್ ನಿಂದ ಕೈ ಹಿಡಿದುಕೊಂಡು ಬಂದು ಹೇಳುವ ಜಾಗಕ್ಕೆ ಹೇಳಿ ತಲುಪಿಸಿದಂತವರು ನಾವು. ಸಾಕು ನೋಡಿ, ಈ ಚಪ್ಪಾಳೆ ಸಾಕು'' - ಜಗ್ಗೇಶ್


ಮಿಸ್ ಮಾಡ್ತೀನಿ!

''ಟ್ರೇನ್ ನ ರಮ್ಯಾ ಮಿಸ್ ಮಾಡಿಕೊಂಡರು ಎಂಬುದಕ್ಕೆ ನಾನು ಬಹಳ ಮಿಸ್ ಮಾಡ್ತೀನಿ. ಯಾಕಂದ್ರೆ, ಆಕೆ ಏನಾದರೂ ಈ ಸಿನಿಮಾದಲ್ಲಿ ಆಕ್ಟ್ ಮಾಡಿದಿದ್ರೆ, ಇವತ್ತು ಜನರ ಹತ್ತರಕ್ಕೆ ಹೋಗ್ತಾಯಿದ್ದರು'' - ಜಗ್ಗೇಶ್


ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು!

''ಅದು ಏನೋ, ಅವರಿಗೆ ಋಣ ಇಲ್ವೋ ಏನೋ..ಅವರ ರೊಟ್ಟಿ ಜಾರಿ ಹರಿಪ್ರಿಯಾಗೆ ಬಿತ್ತು'' - ಜಗ್ಗೇಶ್


ಭಯ ಇತ್ತು

''ಬಹಳ ಭಯ ಇತ್ತು ನನಗೆ, ಭಾರತ್ ಬಂದ್ ನಿಂದ ಚಿತ್ರಕ್ಕೆ ಹೊಡೆತ ಬೀಳಬಹುದು ಅಂತ. ಆದ್ರೆ, 'ನೀರ್ ದೋಸೆ' ಚಿತ್ರಕ್ಕೆ ಹಾಗೆ ಆಗಿಲ್ಲ. ಅದಕ್ಕೆ ನಾನು ರಾಯರಿಗೆ ಹಾಗೂ ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸುತ್ತೇನೆ'' - ಜಗ್ಗೇಶ್


ಹರಿಪ್ರಿಯಾ ಏನಂದ್ರು?

''ಬಂದ್ ಇದ್ದರೂ ಹೌಸ್ ಫುಲ್ ಆಗಿದೆ. ಖುಷಿ ಅನ್ಸುತ್ತೆ. ಮೇಲ್ನೋಟಕ್ಕೆ ಡಬಲ್ ಮೀನಿಂಗ್ ಅನಿಸ್ಬಹುದು. ಆದ್ರೆ, ಅದರ ಒಳಗೆ ಸುಮಾರು ಅರ್ಥಗಳು ಇವೆ'' - ಹರಿಪ್ರಿಯಾ, ನಟಿ


ನಿರ್ದೇಶಕ ವಿಜಯ್ ಪ್ರಸಾದ್ ಏನಂತಾರೆ?

''ನೀರ್ ದೋಸೆ' ಬಿಡುಗಡೆ ಆದ್ಮೇಲೆ ಇನ್ನೊಂದು ಮುಖ ಗೊತ್ತಾಗುತ್ತೆ ಅಂತ ಹೇಳಿದ್ವಿ. ಅದು ಇವತ್ತು ಸತ್ಯ ಆಗಿದೆ. ಎಲ್ಲೆಡೆ ಹೌಸ್ ಫುಲ್ ಓಡ್ತಿದೆ. ಇದರ ಬಗ್ಗೆ ಅಹಂಕಾರ, ಗರ್ವ ಇಲ್ಲ. ಹೆಮ್ಮೆ ಇದೆ. ಯಾಕಂದ್ರೆ, ಸದಭಿರುಚಿಯ ಚಿತ್ರ ಎಲ್ಲರನ್ನೂ ಆವರಿಸಿಕೊಳ್ಳುತ್ತದೆ'' - ವಿಜಯ್ ಪ್ರಸಾದ್, ನಿರ್ದೇಶಕ


English summary
Kannada Movie 'Neer Dose' is receiving good response from the audience. Meanwhile, Kannada Actor Jaggesh has commented on Actress, Congress Politician, EX MP Ramya over 'Neer Dose'. Read the article to know more.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada