»   » ನೇಹಾ ಪಾಟೀಲ್ ಚಳಿಜ್ವರ ಬಿಡಿಸಿದ ಸಿನಿಪತ್ರಕರ್ತರು

ನೇಹಾ ಪಾಟೀಲ್ ಚಳಿಜ್ವರ ಬಿಡಿಸಿದ ಸಿನಿಪತ್ರಕರ್ತರು

Posted By:
Subscribe to Filmibeat Kannada

ಸಿನಿಮಾದಲ್ಲಿ ನಟಿಸೋದು ಒಂದು ಕಡೆ ಖುಷಿಯ ವಿಚಾರವಾದರೇ, ಮತ್ತೊಂದು ಕಡೆ ಅದೇ ಚಿತ್ರರಂಗದಿಂದಲೇ ಮಾನಸಿಕ ಒತ್ತಡದಿಂದ ಖಿನ್ನಳಾಗಿದ್ದೇನೆ. ಚಿತ್ರರಂಗವನ್ನು ವೃತ್ತಿಯನ್ನಾಗಿಸಿಕೊಳ್ಳಬೇಕೋ, ಪ್ರವೃತ್ತಿಯನ್ನಾಗಿಸಿಕೊಳ್ಳಬೇಕೋ ಅಥವಾ ನಿವೃತ್ತಿಯಾಗಬೇಕೋ ಎಂದು ತಿಳಿಯದೇ ಗೊಂದಲದ ಸ್ಥಿತಿಯಲ್ಲಿದ್ದೇನೆ ಎಂದು ನೋವು ವ್ಯಕ್ತಪಡಿಸಿದ್ದಳು ನಟಿ ನೇಹಾ ಪಾಟೀಲ್.

ನನ್ನದೆಲ್ಲಾ ಸಮಸ್ಯೆಗಳನ್ನೂ ಪ್ರೆಸ್ ಮೀಟ್ ಕರೆದು ಹೇಳ್ತೀನಿ ಎಂದು ನೇಹಾ ಹೇಳಿದ್ದಳು. ಏನಪ್ಪಾ ಇರಬಹುದು ಈಕೆಯ ಸಮಸ್ಯೆ ಎಂದು ಕೇಳಲು ಪತ್ರಿಕಾಗೋಷ್ಠಿಗೆ ಹಾಜರಾದರೆ ಅಲ್ಲಿ ವಿಷಯವೇ ಬೇರೆ ಆಗಿತ್ತು.

ನೇಹಾ ಕರೆದಿದ್ದ ಪ್ರೆಸ್ ಮೀಟ್ ನಲ್ಲಿ ಒಲವಿನ ಓಲೆ' ಎಂಬ ಚಿತ್ರದ ಪೋಸ್ಟರ್ ಗಳೇ ರಾರಾಜಿಸುತ್ತಿದ್ದವು. ಆಕೆಯೇ ಚಿತ್ರದ ನಾಯಕಿ ಅದಕ್ಕೆ ಇಷ್ಟೆಲ್ಲಾ ಬಿಲ್ಡಪ್ ಎಂದುಕೊಂಡು ಮಾಧ್ಯಮದವರೂ ಸುಮ್ಮನಿದ್ದರು. ಮೊದಲಿಗೆ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯ ಕೋರಿದ ನೇಹಾ, ಬಂದಿರೋದಕ್ಕೆ ಎಲ್ಲರಿಗೂ ಧನ್ಯವಾದ ಅರ್ಪಿಸಿ, ನನಗೆ ತುಂಬಾ ಖುಷಿಯಾಗ್ತಿದೆ ಎಂದು ಕುಹಕ ನಗೆ ಬೀರಿದಳು.

Neha Patil press meet was pure gimmick

ಅಷ್ಟರಲ್ಲಾಗಲೇ ಒಂದು ಮಟ್ಟಕ್ಕೆ ತಾಳ್ಮೆ ಕಳೆದುಕೊಂಡಿದ್ದ ಮಾಧ್ಯಮದವರು, ಯಾಕ್ರೀ ನಿಮಗೆ ಖುಷಿಯಾಗ್ತಿರೋದು ಇಂಡಸ್ಟ್ರಿ ಬಿಟ್ಹೋಗ್ತಿರೋದಕ್ಕ ಅಂತ ಪ್ರಶ್ನೆ ಹಾಕುತ್ತಿದ್ದಂತೆ ತನ್ನ ಮಾತಿನ ವರಸೆಯನ್ನೇ ಬದಲಾಯಿಸಿಬಿಟ್ಟಳು ನೇಹಾ!

ಅಯ್ಯೋ ಸಾರ್ ನನಗೆ ಈ ಹಿಂದೆ ನಿರ್ಮಾಪಕರು, ನಿರ್ದೇಶಕರು ಸಿಕ್ಕಾಪಟ್ಟೆ ತೊಂದರೆ ಕೊಟ್ಟಿದ್ರು, ಮಾನಸಿಕವಾಗಿ ತುಂಬಾ ನೊಂದಿದ್ದೆ. ಆದರೆ ಅದು ಈಗಲ್ಲ, ಕಳೆದೆರಡು ವರ್ಷಗಳ ಹಿಂದೆ ಎಂದು ಮಾತಿಗೆ ಬ್ರೇಕ್ ಇಟ್ಟಳು ನೇಹಾ. ಪಿತ್ತ ನೆತ್ತಿಗೇರಿದ್ದ ಒಂದಿಬ್ಬರು ಪತ್ರಕರ್ತರು ಆಕೆಗೆ ಚಳಿ-ಜ್ವರ ಬಿಡಿಸಿ, ಮಂಗಳಾರತಿ ಎತ್ತಿದರು.

ಕರೆದಿರೋದು ನಿಮ್ಮ ವೈಯಕ್ತಿಕ ಪ್ರೆಸ್ಮೀಟ್ ಗೆ. ಅದರ ಬಗ್ಗೆ ಹೇಳದೇ ಬೇರೇನೋ ವಿಷಯ ಮಾತಾಡುತ್ತಾ ಇದ್ದೀರಲ್ಲಾ ಎನ್ನುತ್ತಿದ್ದಂತೆಯೇ ನೇಹಾ ಥಂಡಾ ಹೊಡೆದುಬಿಟ್ಟಳು. ಪ್ರೆಸ್ಮೀಟ್ ಕರೆದ ವಿಷಯ ಮಾತನಾಡೋದನ್ನು ಬಿಟ್ಟು ತಾನು ನಟಿಸಿದ ಒಲವಿನ ಓಲೆ' ಎಂಬ ಸಿನಿಮಾದ ಬಗ್ಗೆ ಮಾತನಾಡುತ್ತಿದ್ದದ್ದು ಎಲ್ಲರಿಗೂ ಶ್ಯಾಣೆ ಸಿಟ್ಟು ಎದ್ದಿತ್ತು.

ಇಷ್ಟೆಲ್ಲಾ ನಡೆದರೂ ನಗುನಗುತ್ತಲೇ ಇದ್ದಳು ನೇಹಾ. ಯಾಕೋ ತನ್ನ ಪ್ಲಾನ್ ವರ್ಕೌಟ್ ಆಗುತ್ತಿಲ್ಲ ಎಂದು ಭಾವಿಸಿದ ನಿರ್ದೇಶಕ ಟೇಶಿ ವೆಂಕಟೇಶ್, ಸಾರ್ ಸಾರಿ... ಏನೋ ಹುಡುಗಿ ತನ್ನ ನೋವನ್ನು ಹಂಚಿಕೊಳ್ಳಬೇಕು ಎಂದು ಕೇಳಿಕೊಂಡಿದ್ದಳು. ಅದಕ್ಕೆ ನಾನೇ ಪ್ರೆಸ್ಮೀಟ್ ಕರೆದೆ ಎಂದುಬಿಡೋದೆ?

ಆಗ ಮತ್ತೊಮ್ಮೆ ಇಬ್ಬರಿಗೂ ಮಾಧ್ಯಮದವರಿಂದ ಮಹಾ ಮಂಗಳಾರತಿಯಾಯಿತು. ನಿಮ್ಮ ಚಿತ್ರದ ಪಬ್ಲಿಸಿಟಿಗೆ ಈ ಮಟ್ಟಕ್ಕೆ ಇಳಿಯೋದ ಎಂದು ಛೀಮಾರಿ ಹಾಕಿ ಎದ್ದು ನಿಂತರು ಪತ್ರಕರ್ತರು. ಚಿತ್ರತಂಡದವರು ಎಷ್ಟೇ ಬೇಡಿಕೊಂಡರೂ ಎಲ್ಲರೂ ಜಾಗ ಖಾಲಿ ಮಾಡಿದರು.

ಒಲವಿನ ಓಲೆ ಚಿತ್ರದ ಫೋಟೋ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ಕಿಸಿ

English summary
Acress Neha Patils press meet was a pure gimmick to promote her up coming movie " Olavina Ole" . She invited Bangalore media under the pretext of sharing her undisclosed owes. The press walked out of the meet to teach her a befitting lesson.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada